ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಯಿಂದ ಬೃಹತ್ ನೇಮಕಾತಿ ಅಧಿಸೂಚನೆ ಬಿಡುಗಡೆ, ಅರ್ಜಿ ಪ್ರಕ್ರಿಯೆ ಶುರು

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 5,431 FDA, SDA (KEA) ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ – ಕೊನೆಯ ದಿನಾಂಕ ನವೆಂಬರ್ 25

ಕರ್ನಾಟಕ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) 5,431 ಹುದ್ದೆಗಳಿಗೆ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಪ್ರಥಮ ದರ್ಜೆ ಸಹಾಯಕ (FDA), ದ್ವಿತೀಯ ದರ್ಜೆ ಸಹಾಯಕ (SDA) ಸೇರಿದಂತೆ ವಿವಿಧ ಇಲಾಖೆಗಳ ಗ್ರೂಪ್-C ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಅಕ್ಟೋಬರ್ 30, 2026 ರಿಂದ ಪ್ರಾರಂಭವಾಗಿದ್ದು, ನವೆಂಬರ್ 25, 2026 ಕೊನೆಯ ದಿನಾಂಕವಾಗಿದೆ.

ಈ ಬಾರಿ ಒಟ್ಟು 4 ಪ್ರತ್ಯೇಕ ಅಧಿಸೂಚನೆಗಳ ಮೂಲಕ ನೇಮಕಾತಿ ನಡೆಯುತ್ತಿದೆ. ಉಳಿಕೆ ಮೂಲ ವೃಂದ (RPC) ಮತ್ತು ಕಲ್ಯಾಣ ಕರ್ನಾಟಕ (KK / ಹೈದರಾಬಾದ್-ಕರ್ನಾಟಕ) ಸ್ಥಳೀಯ ವೃಂದದಡಿ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ.

ಹುದ್ದೆಗಳ ವಿವರ (KEA) – ಎಷ್ಟು ಹುದ್ದೆ ಖಾಲಿ ಇದೆ?

ಒಟ್ಟು 5,431 ಹುದ್ದೆಗಳಲ್ಲಿ ಪದವಿ ಮಟ್ಟದ ಮತ್ತು ದ್ವಿತೀಯ ಪಿಯುಸಿ ಮಟ್ಟದ ಹುದ್ದೆಗಳು ಸೇರಿವೆ. ವೃಂದವಾರು ವಿವರ ಹೀಗಿದೆ:

  • ಪದವಿ ಮಟ್ಟದ ಹುದ್ದೆಗಳು (RPC) – 2,163 ಹುದ್ದೆಗಳು (FDA ಮಟ್ಟದ)
  • ಪಿಯುಸಿ ಮಟ್ಟದ ಹುದ್ದೆಗಳು (RPC) – 2,070 ಹುದ್ದೆಗಳು (SDA ಮಟ್ಟದ)
  • ಪದವಿ ಮಟ್ಟದ ಹುದ್ದೆಗಳು (ಕಲ್ಯಾಣ ಕರ್ನಾಟಕ) – 563 ಹುದ್ದೆಗಳು
  • ಪಿಯುಸಿ ಮಟ್ಟದ ಹುದ್ದೆಗಳು (ಕಲ್ಯಾಣ ಕರ್ನಾಟಕ) – 635 ಹುದ್ದೆಗಳು

ಈ ಹುದ್ದೆಗಳಲ್ಲಿ FDA, SDA, ಲೆಕ್ಕ ಸಹಾಯಕ, ಹಾಸ್ಟೆಲ್ ಮೇಲ್ವಿಚಾರಕ, ವಾರ್ಡನ್, ಗ್ರಾಮ ಪಂಚಾಯತ್ ಕಾರ್ಯದರ್ಶಿ ಸೇರಿದಂತೆ 48 ಇಲಾಖೆಗಳ ಹುದ್ದೆಗಳು ಸೇರಿವೆ.

KAS Exam: ಕೆಎಎಸ್ ಪರೀಕ್ಷೆಯಲ್ಲಿ ಐತಿಹಾಸಿಕ ಬದಲಾವಣೆ – ಇನ್ನು ಮುಂದೆ ಆನ್‌ಲೈನ್‌ನಲ್ಲಿ ಪ್ರಶ್ನೆಪತ್ರಿಕೆ ವರ್ಗಾವಣೆ, ನ.15ಕ್ಕೆ 319 ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ

ವಿದ್ಯಾರ್ಹತೆ ಮತ್ತು ವಯೋಮಿತಿ ಏನು?

FDA ಮತ್ತು ತತ್ಸಮಾನ ಹುದ್ದೆಗಳಿಗೆ ಯಾವುದೇ ಪದವಿ (Degree) ಪಾಸಾಗಿರಬೇಕು. SDA ಮತ್ತು ತತ್ಸಮಾನ ಹುದ್ದೆಗಳಿಗೆ ದ್ವಿತೀಯ ಪಿಯುಸಿ (12ನೇ ತರಗತಿ) ಪಾಸಾಗಿರಬೇಕು. ಕೆಲವು ತಾಂತ್ರಿಕ ಹುದ್ದೆಗಳಿಗೆ ಸಂಬಂಧಿಸಿದ ಡಿಪ್ಲೊಮಾ / ಕಂಪ್ಯೂಟರ್ ಜ್ಞಾನ ಕಡ್ಡಾಯ. ವಯೋಮಿತಿ ಸಾಮಾನ್ಯ ವರ್ಗದವರಿಗೆ 18 ರಿಂದ 35 ವರ್ಷ, ಒಬಿಸಿ 38 ವರ್ಷ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 40 ವರ್ಷದವರೆಗೆ ಸಡಿಲಿಕೆ ಇದೆ.

ಅರ್ಜಿ ಹೇಗೆ ಸಲ್ಲಿಸಬೇಕು? ಪರೀಕ್ಷೆ ಯಾವಾಗ?

ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ cetonline.karnataka.gov.in/kea ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ ನವೆಂಬರ್ 26, 2026. ಸ್ಪರ್ಧಾತ್ಮಕ ಪರೀಕ್ಷೆಗಳು ಜನವರಿ 8, 9, 10, 16 ಮತ್ತು 17, 2027 ರಂದು ನಡೆಯಲಿವೆ ಎಂದು KEA ತಿಳಿಸಿದೆ. ಆಯ್ಕೆಯಾದವರಿಗೆ 34,100 ರೂ. ನಿಂದ 1,12,900 ರೂ. ವರೆಗೆ ವೇತನ ಸಿಗಲಿದೆ.