ಕರ್ನಾಟಕದಲ್ಲಿ ಮಳೆ ಕಣ್ಣಾಮುಚ್ಚಾಲೆ: ಶೇ.41ರಷ್ಟು ಮಳೆ ಕೊರತೆ: ರಾಜ್ಯದ 75% ಭಾಗದಲ್ಲಿ ಬರದ ಭೀತಿ, ಜಲಾಶಯಗಳಲ್ಲಿ ನೀರಿನ ಮಟ್ಟ ಆತಂಕಕಾರಿ

ಬೆಂಗಳೂರು: ಮುಂಗಾರು ಆರಂಭವಾದರೂ ರಾಜ್ಯದಲ್ಲಿ ಮಳೆಯ ಕೊರತೆ ಮುಂದುವರಿದಿದ್ದು, ಕರ್ನಾಟಕದಲ್ಲಿ ಬರದ ಆತಂಕ ಮತ್ತಷ್ಟು ಗಾಢವಾಗಿದೆ. ಹೌದು,ಕಂದಾಯ ಇಲಾಖೆ ಅಂಕಿ-ಅಂಶಗಳ ಪ್ರಕಾರ, ಜೂನ್ 1ರಿಂದ ಜುಲೈ 1ರವರೆಗೆ ರಾಜ್ಯದಲ್ಲಿ ಕೇವಲ 124 ಮಿ.ಮೀ. ಮಳೆಯಾಗಿದ್ದು, ವಾಡಿಕೆಯಂತೆ 208 ಮಿ.ಮೀ. ಮಳೆಯಾಗಬೇಕಿತ್ತು. ಇದರಿಂದ ರಾಜ್ಯದಲ್ಲಿ ಶೇ.41ರಷ್ಟು ಮಳೆ ಕೊರತೆ ದಾಖಲಾಗಿದೆ. ಜೂನ್ ತಿಂಗಳಲ್ಲಿಯೂ ಇದೇ ಪರಿಸ್ಥಿತಿ ಕಂಡುಬಂದಿದ್ದು,…