71ನೇ Karnataka Rajyotsava: 12 ಮಹಿಳೆಯರು ಸೇರಿದಂತೆ 71 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ
ಜಾನಪದ, ಸಾಹಿತ್ಯ, ಕಲೆ, ಶಿಕ್ಷಣ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ರಾಜ್ಯ ಸರ್ಕಾರದಿಂದ ಗೌರವ (Karnataka Rajyotsava)
ಬೆಂಗಳೂರು: 71ನೇ ಕರ್ನಾಟಕ ರಾಜ್ಯೋತ್ಸವದ (Karnataka Rajyotsava) ಅಂಗವಾಗಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮತ್ತು ಸಾಧನೆ ಮಾಡಿರುವ 71 ಸಾಧಕರಿಗೆ ಕರ್ನಾಟಕ ಸರ್ಕಾರವು ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗಳನ್ನು ಘೋಷಿಸಿದೆ. ಈ ಬಾರಿ 12 ಮಹಿಳೆಯರು ಪ್ರಶಸ್ತಿಗೆ ಭಾಜನರಾಗಿದ್ದು, ಕಲೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಸಮಾಜಸೇವೆ ಸೇರಿದಂತೆ ಹಲವು ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸಲಾಗಿದೆ.
ಜಾನಪದ, ಸಾಹಿತ್ಯ, ಕಲೆ, ಶಿಕ್ಷಣ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ರಾಜ್ಯ ಸರ್ಕಾರದಿಂದ ಗೌರವ (Karnataka Rajyotsava)
ಜಾನಪದ ಕ್ಷೇತ್ರದಲ್ಲಿ ಶ್ರೀ ದಾವಲಸಾಬ ಅತ್ತಾರ, ಶ್ರೀಮತಿ ಗೌರಮ್ಮ, ಶ್ರೀ ಪಾಂಡಪ್ಪ ದೇವಲಪ್ಪ ಲಮಾಣಿ, ಶ್ರೀ ಎ.ಆರ್. ಸತ್ಯನಾರಾಯಣ, ಶ್ರೀ ಈರಣ್ಣ ರುದ್ರಾಕ್ಷಿ, ಶ್ರೀ ಶಿವಲಿಂಗಪ್ಪ ಎಂ. ಹಾಗೂ ಶ್ರೀ ಸುರೇಶ್ ರಾಮಚಂದ್ರ ಜೋಶಿ (Karnataka Rajyotsava) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ಡಾ. ಸಿ.ಎ. ಶ್ರೀಧರ್, ಡಾ. ಎ. ನಾರಾಯಣ ಸ್ವಾಮಿ ಮತ್ತು ಶ್ರೀ ವಿ. ಮುರಳಿ, ನೃತ್ಯ ಕ್ಷೇತ್ರದಲ್ಲಿ ಡಾ. ಸತ್ಯನಾರಾಯಣ ರಾಜು ಗೌರವಕ್ಕೆ ಪಾತ್ರರಾಗಿದ್ದಾರೆ.
ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರದಲ್ಲಿ ವೆಂಕಟರಮಣ (ಬಾಬಜೀ), ಶ್ರೀ ಅಶೋಕ್ ಹಾಗೂ ಶ್ರೀ ಕೆ.ಎಸ್. ರವೀಂದ್ರನಾಥ್ ಆಯ್ಕೆಯಾಗಿದ್ದರೆ.
ಯಕ್ಷಗಾನ ಕ್ಷೇತ್ರದಲ್ಲಿ ಶ್ರೀ ಗೋಪಾಲ ಗಾಣಿಗ ಮತ್ತು ಬಯಲಾಟ ಕ್ಷೇತ್ರದಲ್ಲಿ ಶ್ರೀಮತಿ ಹುಲಿಗೆಮ್ಮ (Karnataka Rajyotsava) ಪ್ರಶಸ್ತಿ ಪಡೆದಿದ್ದಾರೆ.
ರಂಗಭೂಮಿ ಕ್ಷೇತ್ರದಲ್ಲಿ ಶ್ರೀ ಡಿ. ಕೆಂಪಣ್ಣ, ಶ್ರೀಮತಿ ಕೆ. ಜಯಲಕ್ಷ್ಮಿ ಪಾಟೀಲ್, ಶ್ರೀ ಜಿ.ಡಿ. ತಿಮ್ಮಯ್ಯ, ಶ್ರೀಮತಿ ಕೆ.ಆರ್. ಸುಮತಿ, ಶ್ರೀ ಹೆಚ್.ವಿ. ಪುಟ್ಟವೀರಪ್ಪ ಹಾಗೂ ಶ್ರೀ ಹೊನ್ನ ನಾಯಕ ಅವರನ್ನು ಗುರುತಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಯಿಂದ ಬೃಹತ್ ನೇಮಕಾತಿ ಅಧಿಸೂಚನೆ ಬಿಡುಗಡೆ, ಅರ್ಜಿ ಪ್ರಕ್ರಿಯೆ ಶುರು
ಶಿಲ್ಪಕಲೆಯಲ್ಲಿ ಶ್ರೀ ಜಿ.ಬಿ. ಹಂಸಾನಂದ ಆಚಾರ್ಯ ಮತ್ತು ಶ್ರೀ ಕಾಡಪ್ಪ ಪರಶುರಾಮ ಗಾಡಿವಡ್ಡರ್, ಚಿತ್ರಕಲೆಯಲ್ಲಿ ಶ್ರೀ ಸಿ.ಬಿ. ಸೋಮಶೆಟ್ಟಿ ಹಾಗೂ ಕರಕುಶಲ ಕ್ಷೇತ್ರದಲ್ಲಿ ಶ್ರೀಮತಿ ಶಾಂತಬಾಯಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಶ್ರೀ ಹೆಚ್.ಕೆ. ಶ್ರೀಕಂಠು ಮತ್ತು ಶ್ರೀ ಬಿ.ಎ. ಚನ್ನಪ್ಪಗೌಡ, ಪರಿಸರ ಕ್ಷೇತ್ರದಲ್ಲಿ ಡಾ. ಸ್ವಾಮಿ ಆನಂದ್ ಆರ್., ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರೊ. ರಾಜಾಸಾಬ್ ಎ.ಎಚ್. ಹಾಗೂ ಡಾ. ರಾಜಶೇಖರ ಮೂರ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.
ಮಾಧ್ಯಮ ಕ್ಷೇತ್ರದಲ್ಲಿ ಶ್ರೀ ಡಿ. ಉಮಾಪತಿ ಮತ್ತು ಶ್ರೀಮತಿ ಎಂ.ಪಿ. ಸುಶೀಲ, ಮಾಧ್ಯಮ ಹಾಗೂ ಛಾಯಾಚಿತ್ರ ಕ್ಷೇತ್ರದಲ್ಲಿ ಶ್ರೀ ವಿಶ್ವನಾಥ್ ಸುವರ್ಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಂಕೀರ್ಣ ಕ್ಷೇತ್ರದಲ್ಲಿ ಶ್ರೀಮತಿ ರುಕ್ಷ್ಮಿಣಿ ಬಾಯಿ ನಾಗಪ್ಪ ವಾಷ್ಠರ್, ಡಾ. ಡಿ.ಎಸ್. ಚೌಗಲೆ, ಶ್ರೀ ಬೆಳ್ಳೂರು ಶಂಕರ ನಾರಾಯಣ ದ್ವಾರಕನಾಥ್, ಶ್ರೀ ರವಿ ಪ್ರವೀಣ್ ನೊರ್ಹೋನಾ, ಎಂ.ಆರ್. ಜೈಶಂಕರ್, ಶ್ರೀ ಪ್ರಸಾದ್ ಬಿಡ್ಡಪ್ಪ ಹಾಗೂ ಶ್ರೀ ವಾಸಪ್ಪ ಯಲ್ಲಪ್ಪ ಕುಸಗೂರ ಮತ್ತು ವಾಸ್ತುಶಾಸ್ತ್ರ ವಿಭಾಗದಲ್ಲಿ ಶ್ರೀ ಬಿ.ಪಿ. ಆರಾಧ್ಯ ಅವರನ್ನು ಗೌರವಿಸಲಾಗಿದೆ.
ಸಮಾಜಸೇವೆ ಕ್ಷೇತ್ರದಲ್ಲಿ ಪೂಜ್ಯ ಶ್ರೀ ಜಗದ್ಗುರು ಡಾ. ಅನ್ನದಾನೇಶ್ವರ ಮಹಾಶಿವಯೋಗಿ, ಶ್ರೀ ಬಸವರಾಜು, ಶ್ರೀ ಕಾಗೋಡು ತಿಮ್ಮಪ್ಪ, ಡಾ. ಎಸ್.ಎಂ. ಎಲಿ, ಡಾ. ಜಿ.ಎಸ್. ಚಂದ್ರಶೇಖರ್, ಡಾ. ಶಿವಾನಂದ ಮಹಾಸ್ವಾಮಿ, ಶ್ರೀ ಕೃಷ್ಣಗೌಡ, ಶ್ರೀ ಎ.ಸಿ. ಭಂಡಾರಿ ಹಾಗೂ ಶ್ರೀಮತಿ ಗುರಮ್ಮ ಹಂಪಯ್ಯ ಸಂಕಿನಮಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಡಾ. ವಿಜಯೇಂದ್ರ ಹೊನ್ನೂರಪ್ಪ ಮತ್ತು ಡಾ. ಸುಜಾತ ಮಲ್ಲಿಕಾರ್ಜುನ ಜಾಲಿ, ಆಡಳಿತ ಕ್ಷೇತ್ರದಲ್ಲಿ ಶ್ರೀಮತಿ ತೆರೆಸಾ ಭಟ್ಟಾಚಾರ್ಯ ಮತ್ತು ಡಾ. ಕೆ.ಎಸ್. ಸೋಮಶೇಖರ್, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಡಾ. ಕೆ.ಎನ್. ವೆಂಕಟ ಕೃಷ್ಣರಾವ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. (Karnataka Rajyotsava)
ಸಾಹಿತ್ಯ ಕ್ಷೇತ್ರದಲ್ಲಿ ಡಾ. ಇಂದಿರಾ ಹೆಗ್ಗಡೆ, ಶ್ರೀ ವೀರಹನುಮಾನ್, ಪ್ರೊ. ನಾರಾಯಣಘಟ್ಟ (ನಾಹೋ), ಶ್ರೀ ಸಿ.ಬಿ. ಮಹೇಶ್ವರಪ್ಪ ಚಟ್ನಳ್ಳಿ, ಡಾ. ಕರಿಗೌಡ ಬೀಚನಹಳ್ಳಿ ಹಾಗೂ ಡಾ. ಸಿದ್ದರಾಮ ಹೊನ್ಕಲ್ ಅವರನ್ನು ಗೌರವಿಸಲಾಗುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಡಾ. ಫಾ. ಜೋಸೆಫ್ ಸಿ.ಸಿ., ಶ್ರೀ ಶಾಂತಪ್ಪ ಪಂ. ದಶವಂತ, ಶ್ರೀಮತಿ ಸಂಗೀತಾ ಎನ್. ಕಟ್ಟೀಮನಿ ಮತ್ತು ಪ್ರೊ. ಎನ್.ಎಸ್. ರಂಗರಾಜು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇನ್ನು ನ್ಯಾಯಾಂಗ ಕ್ಷೇತ್ರದಲ್ಲಿ ಶ್ರೀ ಬಿ.ವಿ. ಆಚಾರ್ಯ, ಹೊರನಾಡು ಮತ್ತು ಹೊರದೇಶ ಕ್ಷೇತ್ರದಲ್ಲಿ ಶ್ರೀ ರಮೇಶ್ ಆರ್. ಗೌಡ, ಕ್ರೀಡಾ ಕ್ಷೇತ್ರದಲ್ಲಿ ಶ್ರೀ ಎ.ವಿ. ರವಿ (ಜಿಮ್ ರವಿ), ಡಾ. ಎ.ಬಿ. ಸುಬ್ಬಯ್ಯ ಹಾಗೂ ಎಂ. ಗಿರೀಶ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. (Karnataka Rajyotsava)
ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿರುವ ಸಾಧಕರನ್ನು ಗುರುತಿಸಿರುವ ರಾಜ್ಯ ಸರ್ಕಾರದ ಈ ಗೌರವವು ಅವರ ಸೇವೆಗೆ ಸಂದ ಮನ್ನಣೆಯಾಗಿದೆ. ರಾಜ್ಯೋತ್ಸವ ಪ್ರಶಸ್ತಿಗೆ (Karnataka Rajyotsava) ಆಯ್ಕೆಯಾದ ಎಲ್ಲ ಸಾಧಕರಿಗೂ ನಾಡಿನ ಜನತೆಯಿಂದ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.

[…] […]