Hanuman Ansh Movie : ಹನುಮಾನ್ ಅಂಶ್ ಸಿನಿಮಾಗೆ ಅಮಿತ್ ಶಾ ಸಾಥ್! ₹2 ಕೋಟಿ ಸಿನಿಮಾ ₹347 ಕೋಟಿ ಗಳಿಸಿದ್ದು ನಿಜನಾ?

Hanuman Ansh Movie 10 ಲಕ್ಷ ಓಪನಿಂಗ್‌ನಿಂದ 347 ಕೋಟಿ ಕಲೆಕ್ಷನ್‌ವರೆಗೆ - ಬಾಬಾ ನೀಮ್ ಕರೋಲಿ ಕೃಪೆಯೋ ಅಥವಾ ಬಾಕ್ಸ್ ಆಫೀಸ್ ಮ್ಯಾಜಿಕ್ ನಂಬರ್ ಗಿಮಿಕ್ಕೋ?

ಹೈಲೈಟ್ಸ್:
  1. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನವದೆಹಲಿಯಲ್ಲಿ ಹನುಮಾನ್ ಅಂಶ ಚಿತ್ರತಂಡವನ್ನು ಭೇಟಿ ಮಾಡಿ ಅಭಿನಂದಿಸಿದ್ದು, ಚಿತ್ರಕ್ಕೆ ರಾಷ್ಟ್ರೀಯ ಮನ್ನಣೆ ಸಿಕ್ಕಿದೆ.
  2. ಆಗಸ್ಟ್ 7 ರಂದು 10 ಲಕ್ಷ ಓಪನಿಂಗ್ ಕಂಡಿದ್ದ Hanuman Ansh Movie ಸಿನಿಮಾ ಇದೀಗ 347.05 ಕೋಟಿ ಗಳಿಸಿದೆ ಎಂದು Sacnilk ಪೋರ್ಟಲ್ ಹೇಳಿರುವುದು ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
  3. 2 ಕೋಟಿ ಬಜೆಟ್‌ನ ಸಿನಿಮಾ 347 ಕೋಟಿ ಗಳಿಸಿದರೆ ಅದು ಕಾಂತಾರಗಿಂತ ದೊಡ್ಡ ಮಿರಾಕಲ್, ಆದರೆ ಥಿಯೇಟರ್‌ನಲ್ಲಿ ಈ ಸಿನಿಮಾ ಎಲ್ಲೂ ಕಾಣಿಸಲೇ ಇಲ್ಲ.
  4. ನೀಮ್ ಕರೋಲಿ ಬಾಬಾ ಅವರಂತಹ ದೊಡ್ಡ ಆಧ್ಯಾತ್ಮಿಕ ಶಕ್ತಿಯ ಕಥೆಗೆ ರಾಜಕೀಯ ಬೆಂಬಲ ಸಿಕ್ಕರೆ ಸಿನಿಮಾ ಗೆಲ್ಲುತ್ತಾ ಅಥವಾ ವಿವಾದವಾಗುತ್ತಾ?
  5. ಬಾಕ್ಸ್ ಆಫೀಸ್‌ನ ನಿಜವಾದ ಕಲೆಕ್ಷನ್‌ಗೂ, ಆನ್‌ಲೈನ್ ಪೋರ್ಟಲ್‌ಗಳ ನಂಬರ್‌ಗೂ ಇರುವ ಅಜಗಜಾಂತರ ನೋಡಿದರೆ ಈ 347 ಕೋಟಿ ಲೆಕ್ಕದಲ್ಲಿ ಏನೋ ಗುಪ್ತ ಲೆಕ್ಕಾಚಾರ ಇದೆ.

ನೀಮ್ ಕರೋಲಿ ಬಾಬಾ ಅವರ ಜೀವನವನ್ನು ಆಧರಿಸಿದ ‘ಹನುಮಾನ್ ಅಂಶ್’ ಚಿತ್ರದ ಯಶಸ್ಸಿಗಾಗಿ, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಸೋಮವಾರ ಚಿತ್ರತಂಡವನ್ನು ಭೇಟಿ ಮಾಡಿ ಅಭಿನಂದಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Hanuman Ansh Movie

ವೈದ್ಯ ಮತ್ತು ನಿರ್ದೇಶಕ ವಿಶಾಲ್ ಚತುರ್ವೇದಿ ಮತ್ತು ನಟ ಶೋಭಿನವ್ ಸತ್ಯಾ ಸೇರಿದಂತೆ ಚಿತ್ರತಂಡದ ಕೆಲ ಸದಸ್ಯರು ಅಮಿತ್ ಶಾ ಅವರನ್ನು ಅವರ ಮನೆಯಲ್ಲೇ ಭೇಟಿಯಾದರು.

ಅಮಿತ್ ಶಾ ಅವರು Hanuman Ansh Movie ಕುರಿತು ಹೇಳಿದ್ದೇನು?

ಸೋಮವಾರ ದೆಹಲಿಯಲ್ಲಿ ಬಾಬಾ ನೀಮ್ ಕರೋಲಿ ಜಿ ಅವರ ಜೀವನವನ್ನು ಆಧರಿಸಿದ ‘ಹನುಮಾನ್ ಅಂಶ್’ ಚಿತ್ರದ ಕಲಾವಿದರನ್ನು ಭೇಟಿಯಾದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ಎಕ್ಸ್’ನಲ್ಲಿ ಟ್ವಿಟ್ ಮಾಡಿದ್ದಾರೆ.

‘ಬಾಬಾ ಅವರ ಆಧ್ಯಾತ್ಮಿಕ ಪಯಣ ಮತ್ತು ಹನುಮಂತನ ಮೇಲಿನ ಅವರ ಅಪ್ರತಿಮ ಭಕ್ತಿಯನ್ನು ಜನಸಾಮಾನ್ಯರಿಗೆ ತಲುಪಿಸುವ ಶ್ಲಾಘನೀಯ ಪ್ರಯತ್ನಕ್ಕಾಗಿ ಇಡೀ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Hanuman Ansh Success: 2 ಕೋಟಿಯಲ್ಲಿ 5 ಕೋಟಿ ಮೌಲ್ಯದ ಭಕ್ತಿ ಕೊಟ್ಟ ಸಿನಿಮಾ!

ಮೊದಲ ದಿನ ಕೇವಲ 10 ಲಕ್ಷ ರೂ. ಗಳಿಸಿದ್ದ Hanuman Ansh Movie

ಕೇವಲ 2 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ‘ಹನುಮಾನ್ ಅಂಶ್ (Hanuman Ansh Movie)’ ಚಿತ್ರವು ಆಗಸ್ಟ್ 7 ರಂದು ಬಿಡುಗಡೆಯಾಗಿ ಮೊದಲ ದಿನ 10 ಲಕ್ಷ ರೂ. ಗಳಿಕೆಯೊಂದಿಗೆ ನಿಧಾನ ಆರಂಭ ಕಂಡಿತ್ತು, ಆದರೆ ನಂತರ ಉತ್ತಮ ಪ್ರದರ್ಶನ ನೀಡುತ್ತಾ, ಇದೀಗ ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ಪ್ರಕಾರ ವಿಶ್ವದಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ₹347.05 ಕೋಟಿ ಗಳಿಕೆ ಕಂಡು ಬಾಕ್ಸ್ ಆಫೀಸ್‌ನಲ್ಲಿ ಅನಿರೀಕ್ಷಿತ ಯಶಸ್ಸು ಸಾಧಿಸಿದೆ ಎಂದು ತಿಳಿಸಿದ್ದಾರೆ.