Ganesh Chaturthi 2026: ಪಠಿಸಲೇಬೇಕಾದ ಶಕ್ತಿಶಾಲಿ ಗಣಪತಿ ಮಂತ್ರಗಳು, ಪಠಿಸುವ ವಿಧಾನ ಮತ್ತು ಮಹತ್ವ

ಗಣೇಶನ ಪೂಜೆ (Ganesh Chaturthi) ಯಲ್ಲಿ ಮಂತ್ರಗಳಿಗೆ ವಿಶೇಷ ಮಹತ್ವವಿದೆ. ಶಾಸ್ತ್ರಗಳ ಪ್ರಕಾರ, ಸರಿಯಾದ ವಿಧಾನದಿಂದ ಮಂತ್ರ ಪಠಣ ಮಾಡಿದರೆ ಅದರ ಫಲ ದ್ವಿಗುಣವಾಗುತ್ತದೆ. ಪಠಿಸಲೇಬೇಕಾದ ಆ ಶಕ್ತಿಶಾಲಿ ಗಣಪತಿ ಮಂತ್ರಗಳು ಯಾವುದು? ಅದರ ಮಹತ್ವ ಏನು? ಎಂಬುವುದನ್ನು ನಾವಿಲ್ಲಿ ತಿಳಿಯೋಣ..

ಗಣೇಶ ಚತುರ್ಥಿ (Ganesh Chaturthi) ಯಂದು ನಿವಾರಕ ಗಣೇಶನನ್ನು ಈ ಮಂತ್ರಗಳಿಂದ ಆರಾಧಿಸಿದರೆ ಸಕಲ ಸಂಕಷ್ಟಗಳು ದೂರವಾಗಿ, ಜ್ಞಾನ, ಯಶಸ್ಸು ಮತ್ತು ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಮಂತ್ರ ಪಠಿಸುವ ಸರಿಯಾದ ವಿಧಾನ ಇಲ್ಲಿದೆ.

2026ರ ಗಣೇಶ ಚತುರ್ಥಿ ಹಬ್ಬವನ್ನು ಸೆಪ್ಟೆಂಬರ್‌ 14ರಂದು ಸೋಮವಾರ ಆಚರಿಸಲಾಗುವುದು. ವಿಘ್ನ ನಿವಾರಕ, ಬುದ್ಧಿಯ ದೇವತೆಯಾದ ಗಣೇಶನನ್ನು ಈ ದಿನ ಭಕ್ತಿಯಿಂದ ಪೂಜಿಸಿದರೆ ವರ್ಷವಿಡೀ ಯಾವುದೇ ಅಡೆತಡೆಗಳಿಲ್ಲದೆ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತವೆ ಎಂಬ ನಂಬಿಕೆ ಇದೆ. ಗಣೇಶನ ಪೂಜೆಯಲ್ಲಿ ಮಂತ್ರಗಳಿಗೆ ವಿಶೇಷ ಮಹತ್ವವಿದೆ. ಶಾಸ್ತ್ರಗಳ ಪ್ರಕಾರ, ಸರಿಯಾದ ವಿಧಾನದಿಂದ ಮಂತ್ರ ಪಠಣ ಮಾಡಿದರೆ ಅದರ ಫಲ ದ್ವಿಗುಣವಾಗುತ್ತದೆ.

ಪಠಿಸಲೇಬೇಕಾದ ಆ ಶಕ್ತಿಶಾಲಿ ಗಣಪತಿ ಮಂತ್ರಗಳು ಯಾವುದು? ಅದರ ಮಹತ್ವ ಏನು? ಎಂಬುವುದನ್ನು ನಾವಿಲ್ಲಿ ತಿಳಿಯೋಣ..

1. ವಕ್ರತುಂಡ ಮಹಾಕಾಯ ಮಂತ್ರ:

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ನಿರ್ವಿಘ್ನಂ ಕುರುಮೇ ದೇವ ಸರ್ವಕಾರ್ಯೇಷು ಸರ್ವದಾ

ಇದು ಅತ್ಯಂತ ಜನಪ್ರಿಯ ಗಣಪತಿ ಮಂತ್ರ. ಯಾವುದೇ ಶುಭ ಕಾರ್ಯವನ್ನು ಆರಂಭಿಸುವ ಮೊದಲು ಈ ಮಂತ್ರವನ್ನು ಪಠಿಸಿದರೆ ಆ ಕಾರ್ಯದಲ್ಲಿ ಯಾವುದೇ ವಿಘ್ನಗಳು ಬರುವುದಿಲ್ಲ. ದಿನಕ್ಕೆ 108 ಬಾರಿ ಪಠಿಸುವುದು ಉತ್ತಮ.

2. Ganesh Chaturthi ಬೀಜ ಮಂತ್ರ:

ಓಂ ಗಂ ಗಣಪತಯೇ ನಮಃ

ಇದು ಗಣೇಶನ ಮೂಲ ಬೀಜ ಮಂತ್ರ. ಅತ್ಯಂತ ಶಕ್ತಿಶಾಲಿ ಮತ್ತು ಸರಳವಾದ ಮಂತ್ರ ಇದಾಗಿದೆ. ಮಾನಸಿಕ ಒತ್ತಡ, ನಕಾರಾತ್ಮಕ ಯೋಚನೆಗಳು ಕಾಡಿದಾಗ ಈ ಮಂತ್ರವನ್ನು ಪಠಿಸಿದರೆ ಮನಸ್ಸಿಗೆ ತಕ್ಷಣ ಶಾಂತಿ ಸಿಗುತ್ತದೆ. ಜಪಮಾಲೆಯೊಂದಿಗೆ 108 ಬಾರಿ ಪಠಿಸಬೇಕು.

3. ಗಣನಾಯಕಾಯ ಮಂತ್ರ:

ಗಣನಾಯಕಾಯ ಗಣದೇವತಾಯ ಗಣಾಧ್ಯಕ್ಷಾಯ ಧೀಮಹಿ
ಗುಣಶರೀರಾಯ ಗುಣಮಂಡಿತಾಯ ಗುಣೇಶಾನಾಯ ಧೀಮಹಿ

ಈ ಮಂತ್ರವನ್ನು ಪಠಿಸುವುದರಿಂದ ಬುದ್ಧಿಶಕ್ತಿ, ಏಕಾಗ್ರತೆ ಮತ್ತು ಜ್ಞಾನ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಈ ಮಂತ್ರವನ್ನು ಪಠಿಸಿದರೆ ಉತ್ತಮ ಫಲಿತಾಂಶ ಪಡೆಯುತ್ತಾರೆ.

4. ಶುಕ್ಲಾಂಬರಧರಂ ಮಂತ್ರ:

ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ

ಈ ಮಂತ್ರವು ವಿಷ್ಣುವಿನ ರೂಪದಲ್ಲಿರುವ ಗಣೇಶನನ್ನು ಸ್ತುತಿಸುತ್ತದೆ. ಎಲ್ಲಾ ವಿಘ್ನಗಳನ್ನು ಶಾಂತಗೊಳಿಸುವ ಶಕ್ತಿ ಈ ಮಂತ್ರಕ್ಕಿದೆ. ಸಂಕಟದಲ್ಲಿರುವಾಗ ಇದನ್ನು 11 ಬಾರಿ ಪಠಿಸಿದರೆ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ.

Ear Safety: ಇಯರ್‌ಫೋನ್ ಮಾತ್ರವಲ್ಲ! ನಿಮ್ಮ ಈ 5 ಸಣ್ಣ ತಪ್ಪುಗಳಿಂದಲೇ ಕಿವಿಗೆ ಶಾಶ್ವತ ಹಾನಿಯಾಗಬಹುದು, ಎಚ್ಚರ!

5. ಸೌಭಾಗ್ಯ ಗಣಪತಿ ಮಂತ್ರ:

ಓಂ ಶ್ರೀಂ ಗಂ ಸೌಭಾಗ್ಯ ಗಣಪತಯೇ
ವರ್ವರ್ದ ಸರ್ವಜನಂ ಮೇ ವಶಮಾನಯ ಸ್ವಾಹಾ

ಐಶ್ವರ್ಯ, ಸಂಪತ್ತು ಮತ್ತು ಸೌಭಾಗ್ಯವನ್ನು ಬಯಸುವವರು ಈ ಮಂತ್ರವನ್ನು ಪಠಿಸಬೇಕು. ಈ ಮಂತ್ರವು ಲಕ್ಷ್ಮಿ ಮತ್ತು ಗಣಪತಿಯ ಅನುಗ್ರಹವನ್ನು ಒಟ್ಟಿಗೆ ನೀಡುತ್ತದೆ. ಶುಕ್ರವಾರ ಮತ್ತು ಚತುರ್ಥಿಯ (Ganesh Chaturthi) ದಿನದಂದು ಪಠಿಸುವುದು ಅತ್ಯಂತ ಶುಭ.

6. ಲಕ್ಷ್ಮಿ ವಿನಾಯಕ ಮಂತ್ರ:

”ಓಂ ಶ್ರೀಂ ಗಂ ಸೌಮ್ಯಾಯ ಗಣಪತಯೇ
ವರ ವರದ ಸರ್ವಜನಂ ಮೇ ವಶಮಾನಾಯ ಸ್ವಾಹಾ|

ಲಕ್ಷ್ಮಿ-ವಿನಾಯಕ ಮಂತ್ರವನ್ನು ಪಠಿಸುವುದರಿಂದ ನಿಮಗೆ ಲಕ್ಷ್ಮಿ ಮತ್ತು ಗಣೇಶನು ಸಂಪತ್ತು ಹಾಗೂ ಸಮೃದ್ಧಿಯ ಆಶೀರ್ವಾದವೂ ದೊರೆಯುವುದು. ಇದರೊಂದಿಗೆ ಭಕ್ತರು ಗಣೇಶ ಮತ್ತು ಲಕ್ಷ್ಮಿ ದೇವಿಯ ಅಪರಿಮಿತ ಆಶೀರ್ವಾದ ಪಡೆದುಕೊಳ್ಳುತ್ತಾರೆ. ಎಲ್ಲಾ ರೀತಿಯ ಹಣಕಾಸಿನ ಸಮಸ್ಯೆಗಳಿಂದ ಪರಿಹಾರವನ್ನು ಕಂಡುಕೊಳ್ಳುತ್ತೀರಿ.

7. ಸಾಲ ಪರಿಹಾರಕ್ಕಾಗಿ ಮಂತ್ರ:

‘ಓಂ ಗಣೇಶ ಋಣಂ ಛಿಂಧಿ ವರಂ ಹುಂ ನಮಃ ಫಟ್”

ಗಣೇಶನ ಋಣ ಮುಕ್ತಿ ಅಥವಾ ಋಣಮೋಚನ ಮಂತ್ರವನ್ನು ಪಠಿಸುವ ಮೂಲಕ ಎಲ್ಲಾ ರೀತಿಯ ಸಾಲಗಳಿಂದ ಪರಿಹಾರವನ್ನು ಪಡೆದುಕೊಳ್ಳುತ್ತೀರಿ. ಈ ಮಂತ್ರವನ್ನು ಪಠಿಸುವ ಮೂಲಕ ನಿಮ್ಮ ಆರ್ಥಿಕ ಸ್ಥಿತಿ ಕ್ರಮೇಣ ಸುಧಾರಿಸಲು ಪ್ರಾರಂಭವಾಗುವುದು.

8. ಗಣೇಶ ಗಾಯತ್ರಿ ಮಂತ್ರ:

”ಓಂ ಏಕದಂತಾಯ ವಿದ್ಮಹೇ
ವಕ್ರತುಂಡಾಯ ಧೀಮಹಿ
ತನ್ನೋ ದಂತಿಃ ಪ್ರಚೋದಯಾತ್”

ಜ್ಞಾನ, ಬುದ್ಧಿವಂತಿಕೆ ಮತ್ತು ಉನ್ನತ ಬೌದ್ಧಿಕ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತಾರೆ ಎನ್ನುವ ನಂಬಿಕೆಯಿದೆ. ಗಣೇಶ ಗಾಯತ್ರಿ ಮಂತ್ರದ ಪಠಣವು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸನ್ನು ತಂದುಕೊಡುವುದು.

ಪಠಿಸುವ ಸರಿಯಾದ ವಿಧಾನ:

ಯಾವುದೇ ಮಂತ್ರವಾದರು ಅದನ್ನು ಪಠಣ ಮಾಡುವಾಗ ಕೆಲವು ನಿಯಮಗಳನ್ನು ಪಾಲಿಸುವುದು ಅಗತ್ಯ. ಬೆಳಿಗ್ಗೆ ಸ್ನಾನ ಮಾಡಿ, ಶುಭ್ರವಾದ ಬಟ್ಟೆಯನ್ನು ಧರಿಸಬೇಕು. ಗಣೇಶನ ಮೂರ್ತಿ (Ganesh Chaturthi) ಅಥವಾ ಫೋಟೋದ ಮುಂದೆ ತುಪ್ಪದ ದೀಪ ಹಚ್ಚಿ, ಪೂರ್ವಾಭಿಮುಖವಾಗಿ ಕುಳಿತು, ಮನಸ್ಸನ್ನು ಏಕಾಗ್ರಗೊಳಿಸಿ ಪಠಿಸಬೇಕು. ಮುಖ್ಯವಾಗಿ ಮಂತ್ರವನ್ನು ತಪ್ಪಿಲ್ಲದೆ, ಸ್ಪಷ್ಟವಾಗಿ ಉಚ್ಚರಿಸಬೇಕು. ನಂಬಿಕೆ ಮತ್ತು ಶ್ರದ್ಧೆಯಿಂದ ಈ ಮಂತ್ರಗಳನ್ನು ಪಠಿಸಿದರೆ ಗಣೇಶನು ತನ್ನ ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ನೆರವೇರಿಸಿ, ಅವರ ಜೀವನದಲ್ಲಿ ಸುಖ, ಶಾಂತಿ ಮತ್ತು ಯಶಸ್ಸನ್ನು ತುಂಬುತ್ತಾನೆ ಎಂಬುದು ನಮ್ಮ ಹಿಂದು ಧರ್ಮದ ನಂಬಿಕೆಯಾಗಿದೆ.