ಜೋರಾಗಿ ಹಾಡು ಕೇಳುವುದಷ್ಟೇ ಅಲ್ಲ, ಬಡ್ಸ್ ಬಳಕೆ, ಕಿವಿಯಲ್ಲಿ ನೀರು ನಿಲ್ಲುವುದು ಮುಂತಾದ ನಿರ್ಲಕ್ಷ್ಯದಿಂದ ಕಿವಿಯ ಸೂಕ್ಷ್ಮ ಭಾಗಗಳಿಗೆ ದೊಡ್ಡ ಡ್ಯಾಮೇಜ್ ಆಗಬಹುದು. ತಜ್ಞರು ಹೇಳುವ Ear Safety ಮುನ್ನೆಚ್ಚರಿಕೆ ಕ್ರಮಗಳು ಯಾವುವು? ಇಲ್ಲಿವೆ ಬನ್ನಿ ನೋಡೋಣ.
ಹೈಲೈಟ್ಸ್: |
|
ಇತ್ತೀಚಿನ ದಿನಗಳಲ್ಲಿ ಇಯರ್‌ಫೋನ್ ಮತ್ತು ಬ್ಲೂಟೂತ್, ಬಡ್ಸ್ ಬಳಕೆ ಸರ್ವೇ ಸಾಮಾನ್ಯವಾಗಿದೆ. ಬೇಸರ, ಒಂಟಿತನ, ಟ್ಯ್ರಾವೆಲ್ ಹೀಗೆ ನಾನಾ ಸಂದರ್ಭಗಳಲ್ಲಿ ಗಂಟೆಗಟ್ಟಲೆ ಕಿವಿಯಲ್ಲಿ ಇಯರ್‌ಬಡ್ಸ್ ಹಾಕಿಕೊಂಡರೆ ಮುಗೀತು, ಪಕ್ಕದಲ್ಲಿ ಏನು ನಡೆದರು ಅದರ ಅರಿವೆ ಇಲ್ಲದಂತೆ ತಮ್ಮದೇ ಲೋಕದಲ್ಲಿ ಮುಳುಗಿಬಿಡುತ್ತಾರೆ. ಅದಾಗ್ಯೂ ಮೆಟ್ರೋ, ಬಸ್ಸುಗಳಲ್ಲಿ ಪ್ರಯಾಣಿಸೋ ಅದೆಷ್ಟೋ ಜನ ತಮ್ಮ ಸ್ಟಾಪ್ ಬಂದರು ಅರಿವೆ ಇಲ್ಲದೇ ಮುಂದಿನ ನಿಲ್ದಾಣಗಳಲ್ಲಿ ಇಳಿದು ಪರದಾಡಿರುವ ನಿದರ್ಶನಗಳು ಸಾಕಷ್ಟಿವೆ.
ಇಯರ್ ಫೋನ್ ಹಾಕುವುದರಿಂದ ತಮ್ಮ ಕಿವಿಗೆ ಹಾನಿಯಾಗುತ್ತದೆ ಎಂದು ಎಲ್ಲರಿಗೂ ಗೊತ್ತು. ಆದರೆ ಇಯರ್‌ಫೋನ್ ಹೊರತಾಗಿ ನಾವು ಮಾಡುವ ಕೆಲವು ಸಣ್ಣ ಸಣ್ಣ ತಪ್ಪುಗಳಿಂದಲೂ ಕಿವಿಗೆ ದೊಡ್ಡ ಮಟ್ಟದ ಮತ್ತು ಶಾಶ್ವತವಾದ ಹಾನಿಯಾಗಬಹುದು ಎಂದು ನಿಮಗೆ ಗೊತ್ತೇ? ಇಎನ್‌ಟಿ ತಜ್ಞರು ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಏನದು? ಬನ್ನಿ ನೋಡೋಣ:
1. ಕಾಟನ್ ಬಡ್ಸ್‌ನಿಂದ ಕಿವಿ ಕೆದಕುವುದು:
ಕಿವಿಯಲ್ಲಿ ಇಯರ್‌ವ್ಯಾಕ್ಸ್ ಕಾಣಿಸಿಕೊಂಡ ತಕ್ಷಣ ನಾವು ಕಾಟನ್ ಬಡ್ಸ್, ಹೇರ್‌ಪಿನ್ ಅಥವಾ ಬೀಗದ ಕೈಯಿಂದ ಕಿವಿಯನ್ನು ಕೆದಕುತ್ತೇವೆ. ಇದು ಅತ್ಯಂತ ಅಪಾಯಕಾರಿ ಅಭ್ಯಾಸ. ಕಿವಿಯಲ್ಲಿರುವ ವ್ಯಾಕ್ಸ್ ವಾಸ್ತವವಾಗಿ ಕಿವಿಯನ್ನು ರಕ್ಷಿಸುತ್ತದೆ. ಅದನ್ನು ಬಲವಂತವಾಗಿ ತೆಗೆಯಲು ಹೋದಾಗ ವ್ಯಾಕ್ಸ್ ಮತ್ತಷ್ಟು ಒಳಗೆ ಹೋಗಿ ಬ್ಲಾಕ್ ಆಗುತ್ತದೆ. ಜೊತೆಗೆ ಕಿವಿಯ ಅತ್ಯಂತ ಸೂಕ್ಷ್ಮವಾದ ತಮಟೆಗೆ ಗಾಯವಾಗಿ ಹರಿದುಹೋಗಬಹುದು. ಇದರಿಂದ ಕಿವುಡುತನ ಕೂಡ ಬರಬಹುದು. ಕಿವಿಯನ್ನು ಎಂದಿಗೂ ನೀವೇ ಸ್ವಚ್ಛ ಮಾಡಿಕೊಳ್ಳಲು ಹೋಗಬೇಡಿ. ಸಮಸ್ಯೆ ಇದ್ದರೆ ವೈದ್ಯರ ಬಳಿ ಹೋಗಿ.

2. 60/60 ನಿಯಮ (Ear Safety) ಮರೆತುಬಿಡುವುದು:
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 60/60 ನಿಯಮವನ್ನು ಪಾಲಿಸಬೇಕು. ಅಂದರೆ ಶೇ.60 ಕ್ಕಿಂತ ಹೆಚ್ಚು ವಾಲ್ಯೂಮ್ ಇಟ್ಟುಕೊಂಡು, 60 ನಿಮಿಷಕ್ಕಿಂತ ಹೆಚ್ಚು ಕಾಲ ನಿರಂತರವಾಗಿ ಇಯರ್‌ಫೋನ್ ಬಳಸಬಾರದು. ಅನೇಕರು ಪೂರ್ಣ ವಾಲ್ಯೂಮ್‌ನಲ್ಲಿ ಗಂಟೆಗಟ್ಟಲೆ ಹಾಡು ಕೇಳುತ್ತಾರೆ. ಇದರಿಂದ ಒಳಕಿವಿಯಲ್ಲಿರುವ ಸೂಕ್ಷ್ಮ ಕೂದಲುಗಳು ಹಾನಿಗೊಳಗಾಗಿ ನಿಧಾನವಾಗಿ ಕೇಳುವ ಶಕ್ತಿ ಕಡಿಮೆಯಾಗುತ್ತದೆ.
3. ಇಯರ್‌ಫೋನ್‌ಗಳನ್ನು ಶೇರ್ ಮಾಡುವುದು:
ನಿಮ್ಮ ಸ್ನೇಹಿತರ ಇಯರ್‌ಬಡ್ಸ್ ಅನ್ನು ಎರವಲು ಪಡೆದು ಬಳಸುತ್ತೀರಾ? ಈ ಅಭ್ಯಾಸವನ್ನು ತಕ್ಷಣ ಬಿಟ್ಟುಬಿಡಿ. ಒಬ್ಬರ ಕಿವಿಯಲ್ಲಿರುವ ಬ್ಯಾಕ್ಟೀರಿಯಾ, ಫಂಗಸ್ ಇನ್ನೊಬ್ಬರಿಗೆ ಸುಲಭವಾಗಿ ಹರಡುತ್ತದೆ. ಇದರಿಂದ ಕಿವಿಯಲ್ಲಿ ತುರಿಕೆ, ಸೋಂಕು, ಕೀವು ಬರುವ ಸಮಸ್ಯೆಗಳು ಉಂಟಾಗುತ್ತವೆ. ಇಯರ್‌ಫೋನ್ ವೈಯಕ್ತಿಕ ವಸ್ತು, ಅದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಜೊತೆಗೆ ವಾರಕ್ಕೊಮ್ಮೆಯಾದರೂ ಇಯರ್‌ಬಡ್ಸ್ ಅನ್ನು ಸ್ಯಾನಿಟೈಸರ್‌ನಿಂದ ಸ್ವಚ್ಛಗೊಳಿಸಿ.
Gauri Mantra: ಗೌರಿ ಅಷ್ಟೋತ್ತರ ಶತನಾಮಾವಳಿ: 108 ದಿವ್ಯನಾಮಗಳ ಅರ್ಥ, ಮಹತ್ವ ಮತ್ತು ತಾತ್ಪರ್ಯ
4. ಕಿವಿಯಲ್ಲಿ ನೀರು ನಿಲ್ಲುವುದನ್ನು ನಿರ್ಲಕ್ಷಿಸುವುದು:
ಸ್ನಾನ ಮಾಡುವಾಗ ಅಥವಾ ಈಜುಕೊಳದಲ್ಲಿ ಈಜಾಡುವಾಗ ಕಿವಿಯಲ್ಲಿ ನೀರು ಹೋಗುವುದು ಸಾಮಾನ್ಯ. ಆದರೆ ಆ ನೀರನ್ನು ಸರಿಯಾಗಿ ಹೊರಹಾಕದೆ ನಿರ್ಲಕ್ಷಿಸಿದರೆ, ಆ ತೇವಾಂಶದಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು “ಸ್ವಿಮ್ಮರ್ಸ್ ಇಯರ್” ಎಂಬ ಸೋಂಕು ಬರುತ್ತದೆ. ಇದರಿಂದ ಕಿವಿಯಲ್ಲಿ ತೀವ್ರ ನೋವು ಮತ್ತು ಕಿವುಡುತನ ಬರಬಹುದು. ಸ್ನಾನದ ನಂತರ ತಲೆಯನ್ನು ಒಂದು ಬದಿಗೆ ಬಗ್ಗಿಸಿ ನೀರನ್ನು ಹೊರಹಾಕಬೇಕು.
5. ಜೋರಾದ ಶಬ್ದದ ನಡುವೆ ಇರುವುದು:
ನಾವು ಬೈಕ್‌ನಲ್ಲಿ ಹೋಗುವಾಗ, ಜಿಮ್‌ನಲ್ಲಿ, ಅಥವಾ ಕಾರ್ಖಾನೆ, ಕನ್‌ಸ್ಟ್ರಕ್ಷನ್ ಸೈಟ್‌ನಂತಹ ಜೋರಾದ ಶಬ್ದವಿರುವ ಕಡೆ ಇರುತ್ತೇವೆ. 85 ಡೆಸಿಬಲ್‌ಗಿಂತ (Ear Safety Limit) ಹೆಚ್ಚಿನ ಶಬ್ದ ನಿರಂತರವಾಗಿ ಕೇಳಿದರೆ ಕಿವಿಗೆ ಹಾನಿಯಾಗುತ್ತದೆ. ಇಂತಹ ಸಂದರ್ಭದಲ್ಲಿ ಇಯರ್‌ಪ್ಲಗ್ ಅಥವಾ ನಾಯ್ಸ್ ಕ್ಯಾನ್ಸಲೇಷನ್ ಬಡ್ಸ್ ಬಳಸುವುದು ಉತ್ತಮ.
ಕಿವಿ ನಮ್ಮ ದೇಹದ ಅತ್ಯಂತ ಸೂಕ್ಷ್ಮ ಅಂಗ. ಒಮ್ಮೆ ಕೇಳುವ ಶಕ್ತಿ ಹೋದರೆ ಮತ್ತೆ ಬರುವುದಿಲ್ಲ. ಆದ್ದರಿಂದ ಈ ಸಣ್ಣ ವಿಷಯಗಳ ಬಗ್ಗೆ ನಿರ್ಲಕ್ಷ್ಯ ಬೇಡ. ಯಾವುದೇ ಸಮಸ್ಯೆಯಾದರೂ ತಕ್ಷಣ ಇಎನ್‌ಟಿ ತಜ್ಞರನ್ನು ಭೇಟಿ ಮಾಡಿ. ನಿಮ್ಮ ಕಿವಿ, ನಿಮ್ಮ ಆರೋಗ್ಯ ನಿಮ್ಮ ಸುರಕ್ಷತೆ.

[…] Ear Safety: ಇಯರ್‌ಫೋನ್ ಮಾತ್ರವಲ್ಲ! ನಿಮ್ಮ ಈ 5 ಸಣ್… […]