
| ಹೈಲೈಟ್ಸ್: |
|
ಕರಾವಳಿಯ ಇತಿಹಾಸದಲ್ಲಿ ಇದೊಂದು ಸುವರ್ಣ ದಿನ. ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯದ ಸಂಪೂರ್ಣ ಸಚಿವ ಸಂಪುಟ ಮಂಗಳೂರಿನಲ್ಲಿ ಕುಳಿತು ಆಡಳಿತ ನಡೆಸಿತು.
ನಗರದ ಪಡೀಲ್‌ನಲ್ಲಿರುವ ನೂತನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ‘ಪ್ರಜಾಸೌಧ’ದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಆರಂಭವಾದ ವಿಶೇಷ ಸಚಿವ ಸಂಪುಟ ಸಭೆ (Mangalore Cabinet Meeting) ಯು ಮಧ್ಯಾಹ್ನ 2 ಗಂಟೆಯವರೆಗೆ ಸುಮಾರು ಮೂರು ಗಂಟೆಗಳ ಕಾಲ ನಡೆಯಿತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಎಲ್ಲಾ ಸಚಿವರು, ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯದರ್ಶಿಗಳು ಭಾಗಿಯಾಗಿದ್ದರು.
Today’s Cabinet meeting in Mangaluru has resulted in important decisions for the future of Coastal Karnataka, with projects worth ₹32,611 crore approved.
This includes a ₹13,369 crore Karavali Package, with ₹10,800 crore through PPP projects. I am confident these investments… pic.twitter.com/lCPaTAO9yI
— DK Shivakumar (@DKShivakumar) September 18, 2026
ಸಭೆ ಅಂತ್ಯವಾದ ತಕ್ಷಣ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K.Shivakumar) ಅವರು ಪ್ರಜಾಸೌಧದಲ್ಲೇ ಸುದ್ದಿಗೋಷ್ಠಿ ನಡೆಸಿ ಸಭೆಯ ತೀರ್ಮಾನಗಳನ್ನು ಹಂಚಿಕೊಂಡರು.
ತುಳುವಿಗೆ ಮಾನ್ಯತೆ ಸಿಕ್ಕಿದ್ದೆ ಈ ಸಭೆಯ ಹೈಲೈಟ್
ಸುದ್ದಿಗೋಷ್ಠಿಯ ಆರಂಭದಲ್ಲೇ ಸಿಎಂ ಅವರು ಅತ್ಯಂತ ಭಾವನಾತ್ಮಕ ಘೋಷಣೆ ಮಾಡಿದರು. ಕರಾವಳಿಯ ದಶಕಗಳ ಕನಸಾಗಿದ್ದ ತುಳು ಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಸಂಪುಟ ನಿರ್ಧರಿಸಿದೆ ಎಂದು ಪ್ರಕಟಿಸಿದರು.
“ಇದು ಕೇವಲ ಭಾಷೆಯ ಘೋಷಣೆಯಲ್ಲ, ಇದು ತುಳುನಾಡಿನ ಅಸ್ಮಿತೆಯ ಘೋಷಣೆ. ಹಿಂದಿನ ಸರ್ಕಾರಗಳು ಯಾಕೆ ಮಾಡಲಿಲ್ಲ ಎಂದು ನಾನು ಪ್ರಶ್ನಿಸುವುದಿಲ್ಲ. ನಮಗೆ ಬದ್ಧತೆ ಇದೆ” ಎಂದು ಅವರು ಹೇಳಿದರು. ಈ ನಿರ್ಧಾರಕ್ಕಾಗಿ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಮತ್ತು ಅಖಿಲ ಭಾರತ ತುಳು ಒಕ್ಕೂಟದ ಹೋರಾಟವನ್ನು ಸ್ಮರಿಸಿದರು.
Mangalore Cabinet Meeting: ಕರಾವಳಿ ಅಭಿವೃದ್ಧಿಗೆ ಏನೇನು ಸಿಕ್ಕಿತು?
ಮೂಲಗಳ ಪ್ರಕಾರ, ಈ ಸಂಪುಟ ಸಭೆ (Mangalore Cabinet Meeting) ಯಲ್ಲಿ ಕೇವಲ ತುಳು ಭಾಷೆ ಮಾತ್ರವಲ್ಲ, ಕರಾವಳಿಯ ಮೂರು ಜಿಲ್ಲೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
- ಪ್ರವಾಸೋದ್ಯಮಕ್ಕೆ ಒತ್ತು: ಉಡುಪಿ ಮತ್ತು ಉತ್ತರ ಕನ್ನಡದ ಬ್ಲೂ ಫ್ಲ್ಯಾಗ್ ಬೀಚ್‌ಗಳ ಅಭಿವೃದ್ಧಿಗೆ ವಿಶೇಷ ಅನುದಾನ, ಪಡುಬಿದ್ರಿ ಮತ್ತು ತನ್ನಿರ್‌ಬಾವಿ ಬೀಚ್‌ಗಳಲ್ಲಿ ಅಂತಾರಾಷ್ಟ್ರೀಯ ಸೌಲಭ್ಯ.
- ಮೀನುಗಾರರಿಗೆ ಭರವಸೆ: ಆಳ ಸಮುದ್ರ ಮೀನುಗಾರಿಕೆಗೆ ಸಬ್ಸಿಡಿ, ಮಲ್ಪೆ ಮತ್ತು ಮಂಗಳೂರು ಮೀನುಗಾರಿಕಾ ಬಂದರುಗಳ ಆಧುನೀಕರಣ, ಡೀಸೆಲ್ ಸಬ್ಸಿಡಿ ಹೆಚ್ಚಳದ ಪ್ರಸ್ತಾಪ.
- ಮೂಲಸೌಕರ್ಯ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕಾಮಗಾರಿ ತ್ವರಿತ ಪೂರ್ಣ, ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗದ ಬಗ್ಗೆ ಚರ್ಚೆ, ಮಂಗಳೂರು ವಿಮಾನ ನಿಲ್ದಾಣ ವಿಸ್ತರಣೆಗೆ ಭೂಸ್ವಾಧೀನಕ್ಕೆ ಒಪ್ಪಿಗೆ.
‘ಮಂಗಳೂರು ಜಿಲ್ಲೆ’ ಮರುನಾಮಕರಣಕ್ಕೆ ಸಾರ್ವಜನಿಕ ಚರ್ಚೆಗೆ ಮುಕ್ತ ಅವಕಾಶ!
ಈ ಸಭೆಯ ಮತ್ತೊಂದು ಬಹುಚರ್ಚಿತ ವಿಷಯವೆಂದರೆ ಜಿಲ್ಲೆಯ ಹೆಸರು ಬದಲಾವಣೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡಬೇಕು ಎಂಬುದು ಕರಾವಳಿಗರ ಬಹುದಿನದ ಬೇಡಿಕೆ. ಈ ಬಗ್ಗೆ ಸರ್ಕಾರಕ್ಕೆ ಒಲವಿದೆ. ಆದರೆ ಏಕಾಏಕಿ ನಿರ್ಧಾರ ಮಾಡುವುದಿಲ್ಲ. ಜನರ ಭಾವನೆ ಮುಖ್ಯ. ಆದ್ದರಿಂದ ಒಂದು ತಿಂಗಳ ಕಾಲ ಕರಡು ಅಧಿಸೂಚನೆ ಪ್ರಕಟಿಸಿ ಸಾರ್ವಜನಿಕರಿಂದ, ಸಂಘ-ಸಂಸ್ಥೆಗಳಿಂದ ಅಭಿಪ್ರಾಯ ಸಂಗ್ರಹಿಸಿ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಕಟಿಸಿದರು. ಇದು ಪ್ರಜಾಪ್ರಭುತ್ವದ ಮಾದರಿ ಎಂದು ಸಿಎಂ ಹೇಳಿದರು.
Mangalore Cabinet Meeting: 32,611 ಕೋಟಿ ಯೋಜನೆಗಳಿಗೆ ಅನುಮೋದನೆ
ಇತಿಹಾಸದಲ್ಲೇ ಅತೀ ದೊಡ್ಡ ಕೊಡುಗೆ – 16,000 ಕೋಟಿ ಗ್ರಾಮೀಣಾಭಿವೃದ್ಧಿಗೆ, ಉಳಿದ 16,611 ಕೋಟಿ ಮಂಗಳೂರು, ಉಡುಪಿ, ಉತ್ತರ ಕನ್ನಡದ ರಸ್ತೆ, ಬಂದರು, ಮೂಲಸೌಕರ್ಯ ಮತ್ತು ನಗರಾಭಿವೃದ್ಧಿಗೆ ಮೀಸಲು.
“ನಾವು ಭಾವನೆಗಳ ಮೇಲೆ ರಾಜಕಾರಣ ಮಾಡುವುದಿಲ್ಲ, ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಮುಂದಿನ 15 ತಿಂಗಳಲ್ಲಿ ರಾಜ್ಯದ 10 ರಿಂದ 12 ಕಡೆ ಬೆಂಗಳೂರಿನ ಹೊರಗೆ ಸಂಪುಟ ಸಭೆ ನಡೆಸಿ ಸಮಗ್ರ ಕರ್ನಾಟಕ ಕಟ್ಟುತ್ತೇವೆ”
– ಡಿಕೆ ಶಿವಕುಮಾರ್, ಮುಖ್ಯಮಂತ್ರಿ, ಕರ್ನಾಟಕ ಸರ್ಕಾರ
ಕರಾವಳಿಗೆ ಪ್ರತ್ಯೇಕ ಟೂರಿಸಂ ಪಾಲಿಸಿ:
ಕರಾವಳಿಯ 320 ಕಿ.ಮೀ ಉದ್ದದ ಸಮುದ್ರ ತೀರ, ನಿರ್ಜನ ದ್ವೀಪಗಳು ಮತ್ತು ಮಲೆನಾಡಿನ ಹಚ್ಚ ಹಸಿರನ್ನು ವಿಶ್ವಮಟ್ಟದಲ್ಲಿ ಪರಿಚಯಿಸಲು ಸರ್ಕಾರವು ‘ಮಲೆನಾಡು-ಕರಾವಳಿ ಪ್ರತ್ಯೇಕ ಪ್ರವಾಸೋದ್ಯಮ ನೀತಿ’ ರೂಪಿಸಿದೆ. ಇದು ಸಾಮಾನ್ಯ ಟೂರಿಸಂ ಪಾಲಿಸಿ ಅಲ್ಲ. ಇದನ್ನು ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ ಮಾದರಿಯಲ್ಲಿ ಜಾರಿಗೊಳಿಸಲಾಗುವುದು. ಇದರಲ್ಲಿ ಹೂಡಿಕೆ ಮಾಡುವ ಹೂಡಿಕೆದಾರರಿಗೆ ಮತ್ತು ಗ್ರೀನ್‌ಫೀಲ್ಡ್ ಪ್ರಾಜೆಕ್ಟ್‌ಗಳಿಗೆ ದೀರ್ಘಾವಧಿಯ ಸಾಲ ಮರುಪಾವತಿ ವಿನಾಯಿತಿ ಮತ್ತು ವಿಶೇಷ ಉತ್ತೇಜನ ನೀಡಲಾಗುವುದು ಎಂದು ಸಿಎಂ ತಿಳಿಸಿದರು.
Tulu Language Success: ತುಳುವಿಗೆ ರಾಜ್ಯದ 2ನೇ ಅಧಿಕೃತ ಭಾಷೆ ಪಟ್ಟ – ದಶಕಗಳ ಕನಸು ನನಸು!
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ
ವಿಧಾನಸಭಾಧ್ಯಕ್ಷರಾಗಿದ್ದ ಯು.ಟಿ. ಖಾದರ್ (U.T.Khader) ಅವರ ಕನಸಿನ ಯೋಜನೆಯಾಗಿದ್ದ ಪುತ್ತೂರು ಮೆಡಿಕಲ್ ಕಾಲೇಜಿಗೆ ಕೊನೆಗೂ ಒಪ್ಪಿಗೆ ಸಿಕ್ಕಿದೆ. ಪುತ್ತೂರಿನಲ್ಲಿ 450 ಕೋಟಿ ರೂ. ವೆಚ್ಚದಲ್ಲಿ ನೂತನ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಂಪುಟ (Mangalore Cabinet Meeting) ಅನುಮೋದನೆ ನೀಡಿದೆ. ಜೊತೆಗೆ ಮಂಗಳೂರಿನಲ್ಲಿ ಕಿದ್ವಾಯಿ ಕ್ಯಾನ್ಸರ್ ಮತ್ತು ಜಯದೇವ ಹೃದ್ರೋಗ ಆಸ್ಪತ್ರೆಗಳ ವಿಸ್ತರಿತ ಘಟಕಗಳನ್ನು ತೆರೆಯಲು ನಿರ್ಧರಿಸಲಾಗಿದೆ.
ಇದರ ಜೊತೆಗೆ ಮಂಗಳೂರಿನಲ್ಲಿ ‘ಫಿಶರೀಸ್ ಮತ್ತು ಬ್ಲೂ ಎಕಾನಮಿ ವಿಶ್ವವಿದ್ಯಾಲಯ’ ಸ್ಥಾಪಿಸಲಾಗುವುದು. ಸಮುದ್ರ ವಿಜ್ಞಾನ ಮತ್ತು ನೀಲಿ ಆರ್ಥಿಕತೆಗೆ ಒತ್ತು ನೀಡುವ ಈ ವಿವಿಯಲ್ಲಿ ಈಗಿರುವ 60 ಸೀಟುಗಳನ್ನು 200 ಸೀಟುಗಳಿಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.
“ನಾವು ಬೆಂಗಳೂರಿನಲ್ಲಿ ಕುಳಿತು ಕರಾವಳಿ ಬಗ್ಗೆ ನಿರ್ಧಾರ ಮಾಡುವುದಿಲ್ಲ. ಕರಾವಳಿಯ ಮಣ್ಣಿನಲ್ಲಿ ಕುಳಿತು ಕರಾವಳಿಯ ಜನರ ಸಮಸ್ಯೆ ಆಲಿಸಬೇಕು. ಅದಕ್ಕಾಗಿಯೇ ಈ ಸಭೆಯನ್ನು ಇಲ್ಲಿ ನಡೆಸಿದ್ದೇವೆ. ಇದು ಮೊದಲ ಸಭೆ, ಮುಂದೆ ಕಲಬುರಗಿ, ಬೆಳಗಾವಿಯಲ್ಲೂ ಇಂತಹ ಸಭೆ ಮಾಡುತ್ತೇವೆ”
– ಡಿಕೆ ಶಿವಕುಮಾರ್, ಮುಖ್ಯಮಂತ್ರಿ, ಕರ್ನಾಟಕ ಸರ್ಕಾರ
ಒಟ್ಟಾರೆ, ಮಂಗಳೂರಿನ ಪ್ರಜಾಸೌಧದಲ್ಲಿ ನಡೆದ ಮೊದಲ ಸಂಪುಟ ಸಭೆ ಕೇವಲ ಸಭೆಯಾಗಿ ಉಳಿಯಲಿಲ್ಲ, ಅದು ಕರಾವಳಿಯ ಜನರ ಮನಸ್ಸಿನಲ್ಲಿ ಹೊಸ ಭರವಸೆಯ ದೀಪ ಹಚ್ಚಿದೆ. ಸಿಎಂ ಸುದ್ದಿಗೋಷ್ಠಿಯ ಸಂಪೂರ್ಣ ವಿವರಗಳು ಇನ್ನಷ್ಟೇ ಹೊರಬರಬೇಕಿದೆ.

[…] […]
[…] […]