ನವೆಂಬರ್ 15ಕ್ಕೆ KAS Exam GP-319 ಪರೀಕ್ಷೆ! ಹಾಲ್ ಟಿಕೆಟ್ ಬಿಡುಗಡೆ – OMR ನಲ್ಲಿ 5ನೇ ಆಯ್ಕೆ ಕಡ್ಡಾಯ, ತಪ್ಪಿದರೆ 1/4 ಅಂಕ ಕಟ್!
KAS Exam – KPSC Udyoga ಆ್ಯಪ್ನಲ್ಲಿ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿ – 5ನೇ ಆಯ್ಕೆ ಗುರುತಿಸದಿದ್ದರೆ ಋಣಾತ್ಮಕ ಮೌಲ್ಯಮಾಪನ; ಆದರೆ KPSC ಪಾರದರ್ಶಕತೆ, ಆಯೋಗದ ಸದಸ್ಯರ ಮೇಲೆ ಅಭ್ಯರ್ಥಿಗಳಿಗೆ ಇನ್ನೂ ವಿಶ್ವಾಸ ಇಲ್ಲ – ಏಕೆ?

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ನವೆಂಬರ್ 15, 2026ರಂದು ನಡೆಯಲಿರುವ KAS Exam Gazetted Probationer Group A & B – GP-319 ಪರೀಕ್ಷೆಯ ಹಾಲ್ ಟಿಕೆಟ್ ಬಿಡುಗಡೆ ಮಾಡಿದೆ.
ಅಭ್ಯರ್ಥಿಗಳ ಮೊಬೈಲ್ಗೆ AX-KPSCKA-S ನಿಂದ SMS ಬಂದಿದ್ದು,
Your Hall Ticket for the exam 2026-27 GAZETTED PROBATIONER GROUP A & B POSTS, Dated 15/11/2026 is been generated, login to KPSC Udyoga to download ಎಂದು ತಿಳಿಸಲಾಗಿದೆ.
ಅಭ್ಯರ್ಥಿಗಳು KPSC Udyoga ಪೋರ್ಟಲ್ಗೆ ಲಾಗಿನ್ ಆಗಿ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಬೇಕು. ಹಾಲ್ ಟಿಕೆಟ್ನಲ್ಲಿ ಪರೀಕ್ಷಾ ಕೇಂದ್ರ, ಸಮಯ, ಸೂಚನೆಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಗುರುತಿನ ಚೀಟಿ ಇಲ್ಲದೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಇಲ್ಲ.
5ನೇ ಆಯ್ಕೆ ಕಡ್ಡಾಯ – ಇಲ್ಲದಿದ್ದರೆ 1/4 ಅಂಕ ಕಟ್!
ಈ ಬಾರಿಯ KAS Exam ನ ಅತೀ ಮುಖ್ಯ ನಿಯಮವೆಂದರೆ OMR ನಲ್ಲಿ 5ನೇ ಆಯ್ಕೆಯನ್ನು ಕಡ್ಡಾಯವಾಗಿ ಗುರುತಿಸಬೇಕು. ಯಾವುದೇ ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದರೆ, 1,2,3,4 ಆಯ್ಕೆ ಬಿಟ್ಟು 5ನೇ ಆಯ್ಕೆ (Not Attempted) ಅನ್ನು ಗುರುತಿಸಬೇಕು. ಹಾಗೆ ಮಾಡದಿದ್ದರೆ, ಆ ಪ್ರಶ್ನೆಗೆ 1/4 ಅಂಕಗಳ ಋಣಾತ್ಮಕ ಮೌಲ್ಯಮಾಪನ (Negative Marking) ವಿಧಿಸಲಾಗುತ್ತದೆ. ಅಂದರೆ ಗೊತ್ತಿಲ್ಲದ ಪ್ರಶ್ನೆಯನ್ನು ಸುಮ್ಮನೆ ಬಿಟ್ಟರೂ ಅಂಕ ಕಡಿತವಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ತುಂಬಾ ಎಚ್ಚರಿಕೆಯಿಂದ OMR ತುಂಬಬೇಕು.
KPSC ಮೇಲೆ ವಿಶ್ವಾಸ ಇಲ್ಲ – ಅಭ್ಯರ್ಥಿಗಳ ಆಕ್ರೋಶ
ಹಾಲ್ ಟಿಕೆಟ್ ಬಂದರೂ ಅಭ್ಯರ್ಥಿಗಳಲ್ಲಿ ಖುಷಿ ಇಲ್ಲ. ಕಾರಣ – KPSCಯ ಕಾರ್ಯವೈಖರಿಯ ಪಾರದರ್ಶಕತೆ ಮತ್ತು ಆಯೋಗದ ಸದಸ್ಯರ ಮೇಲೆ ವಿಶ್ವಾಸಾರ್ಹತೆ ಇಲ್ಲ ಎಂಬುದು ಅಭ್ಯರ್ಥಿಗಳ ಆರೋಪವಾಗಿದೆ. ಹಿಂದಿನ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಉತ್ತರದ ಕೀ ತಪ್ಪು, ಫಲಿತಾಂಶ ವಿಳಂಬ, ಕೋರ್ಟ್ ಕೇಸ್ಗಳಿಂದ ಅಭ್ಯರ್ಥಿಗಳು ಬೇಸತ್ತಿದ್ದಾರೆ. KAS Exam ಬರೆಯೋದು ನಮ್ಮ ಕೆಲಸ, ಆದರೆ ಫಲಿತಾಂಶ ಸರಿಯಾಗಿ ಬರುತ್ತಾ? ಎಂಬುದೇ ದೊಡ್ಡ ಪ್ರಶ್ನೆ ಎಂದು ಅಭ್ಯರ್ಥಿಗಳು ಪ್ರಶ್ನಿಸುತ್ತಿದ್ದಾರೆ.
ಅಭ್ಯರ್ಥಿಗಳು ಏನು ಮಾಡಬೇಕು?
- ಇಂದೇ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿ, ಪ್ರಿಂಟ್ ತೆಗೆದುಕೊಳ್ಳಿ
- ಪರೀಕ್ಷಾ ಕೇಂದ್ರವನ್ನು ಮೊದಲೇ ನೋಡಿಕೊಂಡು ಬನ್ನಿ
- OMR ನಲ್ಲಿ 5ನೇ ಆಯ್ಕೆ ನಿಯಮವನ್ನು 2-3 ಬಾರಿ ಅಭ್ಯಾಸ ಮಾಡಿ
- ನವೆಂಬರ್ 15ರಂದು 1 ಗಂಟೆ ಮುಂಚಿತವಾಗಿ ಕೇಂದ್ರ ತಲುಪಿ
ಒಟ್ಟಿನಲ್ಲಿ ನವೆಂಬರ್ 15ರ KAS Exam ಕ್ಷಣಗಣನೆ ಶುರುವಾಗಿದೆ. ಆದರೆ ಪರೀಕ್ಷೆಗಿಂತ ಹೆಚ್ಚು, KPSC ಪಾರದರ್ಶಕವಾಗಿ ಪರೀಕ್ಷೆ ನಡೆಸುತ್ತಾ ಎಂಬುದೇ ಈಗ ದೊಡ್ಡ ಚರ್ಚೆ.

[…] […]