ICC Test Rankings: ಭಾರತ ಡಬಲ್ ಧಮಾಕಾ! ಪಂತ್ 8ನೇ, ಗಿಲ್ 10ನೇ ಸ್ಥಾನಕ್ಕೆ ಜಿಗಿತ – ಜಡೇಜಾ ನಂ.2, ಬುಮ್ರಾ ನಂ.5!
ICC Test Rankings ನಲ್ಲಿ ರಿಷಭ್ ಪಂತ್ 8ನೇ, ಶುಭಮನ್ ಗಿಲ್ 10ನೇ ಸ್ಥಾನಕ್ಕೆ! ಜಡೇಜಾ ಆಲ್ರೌಂಡರ್ನಲ್ಲಿ 2ನೇ, ಬುಮ್ರಾ ಬೌಲಿಂಗ್ನಲ್ಲಿ 5ನೇ. ರಹಮತ್ ಶಾ 173 ರನ್ನೊಂದಿಗೆ ಅಫ್ಘಾನಿಸ್ತಾನದ ಮೊದಲ ಟಾಪ್ 10 ಆಟಗಾರ. ಅಕ್ಷರ್ ಪಟೇಲ್ ODIನಲ್ಲಿ 21ನೇ ಸ್ಥಾನಕ್ಕೆ ಜಿಗಿತ.
ಜಿಂಬಾಬ್ವೆ ವಿರುದ್ಧ 173 ರನ್ ಬಾರಿಸಿದ ಅಫ್ಘಾನಿಸ್ತಾನದ ರಹಮತ್ ಶಾ ಇತಿಹಾಸ ಸೃಷ್ಟಿಸಿದರು – ಟಾಪ್ 10 ಪ್ರವೇಶಿಸಿದ ತಮ್ಮ ದೇಶದ ಮೊದಲ ಆಟಗಾರ! ಏಕದಿನ ರ್ಯಾಂಕಿಂಗ್ನಲ್ಲೂ ಅಕ್ಷರ್ ಪಟೇಲ್ 23 ಸ್ಥಾನ ಜಿಗಿದು 21ನೇ ಸ್ಥಾನಕ್ಕೆ! ICC Test Rankings

ದುಬೈ: ಐಸಿಸಿ ಬಿಡುಗಡೆ ಮಾಡಿರುವ ನೂತನ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭಾರತದ ರಿಷಭ್ ಪಂತ್ ಮತ್ತು ನಾಯಕ ಶುಭಮನ್ ಗಿಲ್ ಟಾಪ್ 10ರೊಳಗೆ ಸ್ಥಾನ ಪಡೆದಿದ್ದಾರೆ. ಪಂತ್ 8ನೇ ಹಾಗೂ ಗಿಲ್ 10ನೇ ಸ್ಥಾನದಲ್ಲಿದ್ದಾರೆ. ಮತ್ತೊಬ್ಬ ಭಾರತೀಯ ಬ್ಯಾಟರ್ ಯಶಸ್ವಿ ಜೈಸ್ವಾಲ್ 13ನೇ ಸ್ಥಾನದಲ್ಲಿದ್ದಾರೆ. (ICC Test Rankings)
ಇಂಗ್ಲೆಂಡ್ನ ಹ್ಯಾರಿ ಬ್ರೂಕ್ ಮತ್ತು ಜೋ ರೂಟ್ ಮೊದಲ ಎರಡು ಸ್ಥಾನಗಳಲ್ಲಿದ್ದರೆ, ಟ್ರಾವಿಸ್ ಹೆಡ್, ಟೆಂಬಾ ಬವುಮಾ ಮತ್ತು ಸ್ಟೀವ್ ಸ್ಮಿತ್ ನಂತರದ ಸ್ಥಾನಗಳಲ್ಲಿದ್ದಾರೆ.
ಅಫ್ಘಾನಿಸ್ತಾನದ ಟೆಸ್ಟ್ ನಾಯಕ ರಹಮತ್ ಶಾ ಐಸಿಸಿ ಟೆಸ್ಟ್ ಶ್ರೇಯಾಂಕದ ಯಾವುದೇ ವಿಭಾಗದಲ್ಲಾದರೂ ಟಾಪ್ 10 ಪ್ರವೇಶಿಸಿದ ತಮ್ಮ ದೇಶದ ಮೊದಲ ಆಟಗಾರ ಎಂಬ ಐತಿಹಾಸಿಕ ಮೈಲಿಗಲ್ಲು ನೆಟ್ಟಿದ್ದಾರೆ. ಜಿಂಬಾಬೈ ವಿರುದ್ಧದ ಪಂದ್ಯದಲ್ಲಿ 173 ರನ್ ಗಳಿಸಿದ ರಹಮತ್, 6 ಸ್ಥಾನಗಳ ಏರಿಕೆ ಕಂಡು 7ನೇ ಶ್ರೇಯಾಂಕಕ್ಕೇರಿದ್ದಾರೆ.
IND vs NZ: ಅಕ್ಲಂಡ್ನಲ್ಲಿ ಕಿಂಗ್ ಕೊಹ್ಲಿ ದರ್ಬಾರ್, ಅರ್ಶದೀಪ್ ಅಬ್ಬರ; ಕಿವೀಸ್ ನಾಡಲ್ಲಿ ಟೀಂ ಇಂಡಿಯಾ ಶುಭಾರಂಭ
ಬೌಲಿಂಗ್ ರ್ಯಾಂಕಿಂಗ್ – ಸ್ಟಾರ್ಕ್ ನಂ.1, ಬುಮ್ರಾ ನಂ.5!
ಬೌಲಿಂಗ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಅಗ್ರಸ್ಥಾನದಲ್ಲಿದ್ದರೆ, ಭಾರತದ ಜಸೀತ್ ಬುಮ್ರಾ 5ನೇ ಸ್ಥಾನದಲ್ಲಿದ್ದಾರೆ. ಆಲ್ರೌಂಡರ್ಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಮಾರ್ಕೊ ಜಾನ್ಸೆನ್ ಮೊದಲ ಸ್ಥಾನದಲ್ಲಿದ್ದು, ಭಾರತದ ರವೀಂದ್ರ ಜಡೇಜಾ 2ನೇ ಹಾಗೂ ವಾಷಿಂಗ್ಟನ್ ಸುಂದರ್ 7ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ICC Test Rankings
ಏಕದಿನ ಬೌಲಿಂಗ್ನಲ್ಲೂ ಭಾರತೀಯರ ಭರ್ಜರಿ ಏರಿಕೆ!
ಇದೇ ವೇಳೆ ಏಕದಿನ ಬೌಲಿಂಗ್ (ICC Test Rankings) ಶ್ರೇಯಾಂಕದಲ್ಲೂ ಭಾರತೀಯ ಬೌಲರ್ಗಳು ಗಮನಾರ್ಹ ಏರಿಕೆ ಕಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯ ಪ್ರದರ್ಶನದ ಆಧಾರದ ಮೇಲೆ ಅಕ್ಷರ್ ಪಟೇಲ್ 23 ಸ್ಥಾನಗಳ ಜಿಗಿತ ಕಂಡು 21ನೇ ಶ್ರೇಯಾಂಕಕ್ಕೆ ತಲುಪಿದ್ದರೆ, ಅರ್ಷದೀಪ್ ಸಿಂಗ್ 31ನೇ ಸ್ಥಾನಕ್ಕೆ ಮೇಲೇರಿದ್ದಾರೆ. ಸರಣಿಯಲ್ಲಿ 7 ವಿಕೆಟ್ ಕಬಳಿಸಿರುವ ವೇಗಿ ಗುರ್ನೂರ್ ಬ್ರಾರ್ 48ನೇ ಶ್ರೇಯಾಂಕಕ್ಕೆ ಜಿಗಿದಿದ್ದಾರೆ.

[…] […]