ಡಯಾಲಿಸಿಸ್ (Dialysis), ಆಂಜಿಯೋಪ್ಲಾಸ್ಟಿ ದುಬಾರಿ ಆಗುತ್ತೆ! ಸರ್ಕಾರದ ಹೊಸ ನಿಯಮಕ್ಕೆ ಡಾಕ್ಟರ್‌ಗಳ ವಿರೋಧ ಯಾಕೆ?

Dialysis, ಆಂಜಿಯೋಪ್ಲಾಸ್ಟಿ ಬೆಲೆ 75% ವರೆಗೆ ಏರುತ್ತಾ? ಸಿಂಗಲ್-ಯೂಸ್ ಸಾಧನ ಮರುಬಳಕೆ ಬ್ಯಾನ್‌ಗೆ ದೊಡ್ಡ ಆಸ್ಪತ್ರೆಗಳ ವಿರೋಧ. 5 ಲಕ್ಷ ಡಯಾಲಿಸಿಸ್ ರೋಗಿಗಳಿಗೆ ಏನಾಗುತ್ತೆ? ಕರ್ನಾಟಕದಲ್ಲೂ ಪರಿಣಾಮ!

 ಒಂದೇ ಸಲ ಬಳಸುವ ವೈದ್ಯಕೀಯ ಸಾಧನ ಮರುಬಳಕೆ ಬ್ಯಾನ್ – 5 ಲಕ್ಷ ಡಯಾಲಿಸಿಸ್ (Dialysis) ರೋಗಿಗಳಿಗೆ ಏನಾಗುತ್ತೆ? ಕರ್ನಾಟಕದಲ್ಲೂ ಪರಿಣಾಮ ಬೀಳುತ್ತಾ?

Dialysis

ನವದೆಹಲಿ: ಕೇಂದ್ರ ಆರೋಗ್ಯ ಇಲಾಖೆಯ DGHS (Directorate General of Health Services) ಕೇಂದ್ರವು “ಒಂದೇ ಸಲ ಬಳಸಬೇಕು (Single-Use) ಎಂದು ಬರೆದಿರುವ ಯಾವುದೇ ವೈದ್ಯಕೀಯ ಸಾಧನವನ್ನು ಮತ್ತೆ ಬಳಸುವಂತಿಲ್ಲ. ಸ್ಟೆರಿಲೈಸ್ ಮಾಡಿ ಮರುಬಳಕೆ ಮಾಡುವುದು ಸಂಪೂರ್ಣ ನಿಷೇಧವಾಗಿದ್ದು, ಇದು ಸರ್ಕಾರಿ ಮತ್ತು ಖಾಸಗಿಯ ಎಲ್ಲಾ ಆಸ್ಪತ್ರೆಗಳಿಗೂ ಅನ್ವಯವಾಗುತ್ತದೆ ಎಂದು ಅಕ್ಟೋಬರ್ 16 ರಂದು ಒಂದು ಕಠಿಣ ಆದೇಶ ಹೊರಡಿಸಿತ್ತು.

ಯಾವ ಸಾಧನಗಳಿಗೆ ಬ್ಯಾನ್?

  1. ಹೃದಯದ ಆಂಜಿಯೋಪ್ಲಾಸ್ಟಿಗೆ ಬಳಸುವ ಕ್ಯಾಥೆಟರ್, ಗೈಡ್‌ವೈರ್, ಬಲೂನ್
  2. ಡಯಾಲಿಸಿಸ್‌ಗೆ (Dialysis) ಬಳಸುವ ಡಯಲೈಸರ್ (ಕೃತಕ ಕಿಡ್ನಿ), ಬ್ಲಡ್ ಟ್ಯೂಬಿಂಗ್
  3. ಸರ್ಜರಿಗೆ ಬಳಸುವ ಸ್ಟೇಪ್ಲರ್, ಲ್ಯಾಪರೋಸ್ಕೋಪಿಕ್ ಟ್ರೋಕರ್, ಆರ್ಥೋ ಡ್ರಿಲ್ ಬಿಟ್
  4. ಸಿರಿಂಜ್, ಸೂಜಿ

ಯಾವ ವಿಭಾಗಗಳಲ್ಲಿ?

ಕಾರ್ಡಿಯಾಲಜಿ, ನೆಫ್ರಾಲಜಿ (ಕಿಡ್ನಿ), ಆಂಕಾಲಜಿ (ಕ್ಯಾನ್ಸರ್), ಹೃದಯ ಶಸ್ತ್ರಚಿಕಿತ್ಸೆ, ನ್ಯೂರೋ ಸರ್ಜರಿ

ಸರ್ಕಾರ ಯಾಕೆ ಬ್ಯಾನ್ ಮಾಡಿತು? – ಕಾರಣ ಏನು?

ಸರ್ಕಾರದ ಪ್ರಕಾರ, ಕೆಲವು ಖಾಸಗಿ / ಕಾರ್ಪೊರೇಟ್ ಆಸ್ಪತ್ರೆಗಳು:

  1. ಒಬ್ಬ ರೋಗಿಗೆ ಬಳಸಿದ ಸಾಧನವನ್ನು ಸ್ಟೆರಿಲೈಸ್ ಮಾಡಿ, ಇನ್ನೊಬ್ಬ ರೋಗಿಗೆ ಬಳಸುತ್ತಿದ್ದರು
  2. ಆದರೂ ರೋಗಿಯಿಂದ ಹೊಸ ಸಾಧನದ ಪೂರ್ತಿ ಬೆಲೆ ವಸೂಲಿ ಮಾಡುತ್ತಿದ್ದರು
  3. ಸರ್ಕಾರಿ ಯೋಜನೆಗಳಿಂದಲೂ ಪೂರ್ತಿ ಹಣ ಕ್ಲೈಮ್ ಮಾಡುತ್ತಿದ್ದರು

ಇದರಿಂದ ಅಪಾಯ ಏನು?

  • HIV, ಹೆಪಟೈಟಿಸ್ B / C, ಬ್ಯಾಕ್ಟೀರಿಯಾ ಸೋಂಕು ಹರಡುವ ಭಯ
  • ಸಾಧನ ಮಧ್ಯದಲ್ಲಿ ಮುರಿದುಹೋಗುವುದು / ಫೇಲ್ ಆಗುವುದು
  • ಸಾಧನದ ಕಾರ್ಯಕ್ಷಮತೆ ಕಡಿಮೆ ಆಗುವುದು

ಸುಪ್ರೀಂ ಕೋರ್ಟ್‌ಗೆ ಸರ್ಕಾರ ಕೊಟ್ಟ ಅಫಿಡವಿಟ್ ಪ್ರಕಾರ, ಆಸ್ಪತ್ರೆಗಳಲ್ಲಿ ಬಳಸುವ ವಸ್ತುಗಳ ಮೇಲೆ 100% ದಿಂದ 1000% ವರೆಗೆ ಲಾಭ ಇಡಲಾಗುತ್ತಿದೆ ಎಂದು ಹೇಳಲಾಗಿದೆ. (Dialysis)

ಅದಕ್ಕೇ ಸರ್ಕಾರ – “ರೋಗಿಯ ಸುರಕ್ಷತೆ ಮೊದಲು” ಎಂದು ಈ ಕಠಿಣ ನಿರ್ಧಾರ ತೆಗೆದುಕೊಂಡಿದೆ. ವೈದ್ಯಕೀಯ ಸಾಧನ ತಯಾರಕರ ಸಂಘ AiMeD ಕೂಡ ಈ ನಿರ್ಧಾರವನ್ನು ಸ್ವಾಗತಿಸಿದೆ.

dialysis-angioplasty-cost-increase

ಡಾಕ್ಟರ್‌ಗಳು ಯಾಕೆ ವಿರೋಧ ಮಾಡುತ್ತಿದ್ದಾರೆ? – ಬೆಲೆ ದುಪ್ಪಟ್ಟು ಆಗುತ್ತಾ?

ನಾರಾಯಣ ಹೆಲ್ತ್, ಮಣಿಪಾಲ್ ಹಾಸ್ಪಿಟಲ್, ಫೋರ್ಟಿಸ್, KIMS, ಮೆಡಾಂತ ಸೇರಿದಂತೆ ದೊಡ್ಡ ಆಸ್ಪತ್ರೆಗಳು ಮತ್ತು AHPI, NATHEALTH ಸಂಘಟನೆಗಳು ಈ ಆದೇಶಕ್ಕೆ ವಿರೋಧ ಮಾಡುವುದಲ್ಲದೇ, ಕೇಂದ್ರಕ್ಕೆ ಪತ್ರ ಬರೆದಿವೆ. (Dialysis)

“ಒಳ್ಳೆಯ ಗುಣಮಟ್ಟದ ಗೈಡ್‌ವೈರ್ ಅನ್ನು 5-6 ಸಲ, ಬಲೂನ್ ಅನ್ನು 3-4 ಸಲ ಸುರಕ್ಷಿತವಾಗಿ ಬಳಸಬಹುದು. ಅನೇಕ ಆಸ್ಪತ್ರೆಗಳು ಮೊದಲ ರೋಗಿಯಿಂದ 70% ಬೆಲೆ, ಎರಡನೇ ರೋಗಿಯಿಂದ 30% ಮಾತ್ರ ತೆಗೆದುಕೊಳ್ಳುತ್ತವೆ. ಕೆಲವರು ಎರಡನೇ ಬಾರಿ ಹಣವನ್ನೇ ತೆಗೆದುಕೊಳ್ಳುವುದಿಲ್ಲ. ಈ ಬ್ಯಾನ್ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ತಟ್ಟುತ್ತದೆ.”

                                          – ಡಾ. ಆರ್.ಸಿ. ಶ್ರೀಕುಮಾರ್, ಅಧ್ಯಕ್ಷ, Vascular Society of India

ಬೆಲೆ ಎಷ್ಟು ಏರುತ್ತೆ? – ಆಸ್ಪತ್ರೆಗಳ ಪ್ರಕಾರ, ಸಂಕೀರ್ಣ ಚಿಕಿತ್ಸೆಗಳ ಬೆಲೆ 25% ದಿಂದ 75% ವರೆಗೆ ಏರಬಹುದು!

ಡಯಾಲಿಸಿಸ್ ರೋಗಿಗಳಿಗೆ ದೊಡ್ಡ ಹೊಡೆತ

ವಿವರ ಅಂಕಿ
ಭಾರತದಲ್ಲಿ ಡಯಾಲಿಸಿಸ್ ರೋಗಿಗಳು ಸುಮಾರು 5 ಲಕ್ಷ
ವರ್ಷಕ್ಕೆ ಡಯಾಲಿಸಿಸ್ ಸೆಷನ್ 4 ಕೋಟಿ
ಈಗ ಮರುಬಳಕೆ ಆಗುವ ಡಯಲೈಸರ್ 60% ಕ್ಕಿಂತ ಹೆಚ್ಚು ಸೆಷನ್‌ಗಳಲ್ಲಿ
ಹೊಸ ಡಯಲೈಸರ್ ಪ್ರತಿ ಸಲ ಬಳಸಿದರೆ ಬೇಕಾಗುವ ಸಾಧನ 6-7 ಪಟ್ಟು ಜಾಸ್ತಿ

2020ರಲ್ಲಿ ಕೇರಳದಲ್ಲಿ ಡಯಾಲಿಸಿಸ್ (Dialysis) ರೋಗಿಗಳು 43,740 ಇದ್ದರು. 2024ರಲ್ಲಿ 2,18,410 ಕ್ಕೆ ಏರಿದ್ದು, ಇದೀಗ 5 ಪಟ್ಟು ಹೆಚ್ಚಾಗಿದೆ. ಅಂತೆಯೇ, ಕರ್ನಾಟಕದಲ್ಲಿ ಕಿಡ್ನಿ ರೋಗಿಗಳು ದಿನೇ ದಿನೇ ಜಾಸ್ತಿ ಆಗುತ್ತಿದ್ದಾರೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿಯಲ್ಲಿ ಡಯಾಲಿಸಿಸ್ ಸೆಂಟರ್‌ಗಳು ತುಂಬಿ ತುಳುಕುತ್ತಿವೆ. ಈಗಾಗಲೇ ಅರ್ಧದಷ್ಟು ರೋಗಿಗಳಿಗೆ ಡಯಾಲಿಸಿಸ್‌ಗೂ ಹಣ ಹೊಂದಿಸಲು ಆಗುತ್ತಿಲ್ಲ ಎಂದು ಡಾಕ್ಟರ್‌ಗಳು ಹೇಳುತ್ತಿದ್ದಾರೆ. ಬೆಲೆ ದುಪ್ಪಟ್ಟಾದರೆ, ಅವರು ಚಿಕಿತ್ಸೆಯನ್ನೇ ನಿಲ್ಲಿಸಬೇಕಾಗುತ್ತದೆ.

ಪ್ರಧಾನಮಂತ್ರಿ ಡಯಾಲಿಸಿಸ್ ಯೋಜನೆಯಲ್ಲೂ ಗೊಂದಲ: PM National Dialysis Programme ನಲ್ಲಿ ಅದೇ ರೋಗಿಗೆ ಡಯಲೈಸರ್ ಅನ್ನು ನಿಯಮಬದ್ಧವಾಗಿ ಮರುಬಳಕೆ ಮಾಡಲು ಅವಕಾಶ ಇದೆ. ಈಗ ಹೊಸ DGHS ಆದೇಶ ಅದಕ್ಕೆ ವಿರುದ್ಧವಾಗಿದೆ. ಯಾವುದನ್ನು ಪಾಲಿಸಬೇಕು ಎಂದು ಆಸ್ಪತ್ರೆಗಳಿಗೆ ಗೊಂದಲವಾಗಿದೆ.

ಕರ್ನಾಟಕದಲ್ಲಿ ಕಬ್ಬು (Sugarcane) ರೈತರಿಗೆ ಬಿಗ್ ವಿನ್! ಟನ್‌ಗೆ ₹3,600 ರಿಂದ ₹4,200 ವರೆಗೆ ಬೆಲೆ – ಈಗ ಸರ್ಕಾರದಿಂದ ₹1,000 ಪ್ರೋತ್ಸಾಹಧನಕ್ಕೆ ಪಟ್ಟು

ಆಂಜಿಯೋಪ್ಲಾಸ್ಟಿ ಮಾಡಿಸುವವರಿಗೆ ಏನಾಗುತ್ತೆ?

ಹೃದಯದ ಬ್ಲಾಕ್‌ಗೆ ಸ್ಟಂಟ್ ಹಾಕುವಾಗ ಬಳಸುವ ಕ್ಯಾಥೆಟರ್, ಬಲೂನ್‌ಗಳು ತುಂಬಾ ದುಬಾರಿ. ಈಗ ಒಂದು ಬಲೂನ್ ಅನ್ನು 3-4 ರೋಗಿಗಳಿಗೆ ಬಳಸಿ ಖರ್ಚು ಹಂಚಿಕೊಳ್ಳಲಾಗುತ್ತಿತ್ತು. ಇನ್ನು ಮುಂದೆ ಪ್ರತಿ ರೋಗಿಗೆ ಹೊಸದೇ ಬೇಕು ಎಂದರೆ, ಆಂಜಿಯೋಪ್ಲಾಸ್ಟಿ ಬಿಲ್ ₹50,000 ದಿಂದ ₹1 ಲಕ್ಷ ವರೆಗೆ ಜಾಸ್ತಿ ಆಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ನವೆಂಬರ್ 8ರಂದು ಕೇರಳದಲ್ಲಿ ನಡೆದ Cardiological Society of India ಸಮ್ಮೇಳನದಲ್ಲೂ ಇದೇ ವಿಷಯ ಚರ್ಚೆಯಾಗಿದೆ. ಕೆಲವು ಕ್ಯಾಥೆಟರ್‌ಗಳನ್ನು ವೈಜ್ಞಾನಿಕವಾಗಿ ಸುರಕ್ಷಿತವಾಗಿ ಮರುಬಳಕೆ ಮಾಡಬಹುದು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಡಯಾಲಿಸಿಸ್ / ಆಂಜಿಯೋಪ್ಲಾಸ್ಟಿ ಮಾಡಿಸುವವರು ಏನು ಮಾಡಬೇಕು?

  1. “ಈ ಡಯಲೈಸರ್ / ಕ್ಯಾಥೆಟರ್ ಹೊಸದಾ? ಅದರ ಪ್ಯಾಕೆಟ್ ನನಗೆ ತೋರಿಸಿ” ಎಂದು ಕೇಳುವ ಹಕ್ಕು ನಿಮಗಿದೆ.
  2. ಚಿಕಿತ್ಸೆಗೂ ಮುಂಚೆ ಎಸ್ಟಿಮೇಟ್ ತೆಗೆದುಕೊಳ್ಳಿ. ಹಳೆ ಬೆಲೆಗೂ ಹೊಸ ಬೆಲೆಗೂ ವ್ಯತ್ಯಾಸ ಇರಬಹುದು.
  3. ನೀವು ಆಯುಷ್ಮಾನ್ ಭಾರತ್ / ಕರ್ನಾಟಕದ ಆರೋಗ್ಯ ಯೋಜನೆಯಲ್ಲಿ ಇದ್ದರೆ, ನಿಮ್ಮ ಪ್ಯಾಕೇಜ್‌ನಲ್ಲಿ ಡಯಾಲಿಸಿಸ್ / ಆಂಜಿಯೋಪ್ಲಾಸ್ಟಿ ಇದೆಯಾ ಎಂದು ಮೊದಲೇ ಚೆಕ್ ಮಾಡಿ.
  4. ಚಿಕಿತ್ಸೆ ನಂತರ ಜ್ವರ, ನೋವು, ಊತ ಬಂದರೆ ತಕ್ಷಣ ಡಾಕ್ಟರ್‌ಗೆ ಹೇಳಿ.