CBSE Board Exam 2027: ಟೈಮ್ಟೇಬಲ್ ಬಿಡುಗಡೆ! ಫೆಬ್ರವರಿ 16ರಿಂದ ಪರೀಕ್ಷೆ ಆರಂಭ, 46 ಲಕ್ಷ ವಿದ್ಯಾರ್ಥಿಗಳು ಹಾಜರು
CBSE Board Exam 2027, Timetable ಬಿಡುಗಡೆ. ಫೆಬ್ರವರಿ 16ರಿಂದ ಪರೀಕ್ಷೆ, 46 ಲಕ್ಷ ವಿದ್ಯಾರ್ಥಿಗಳು. 10th, 12th ಪ್ರಮುಖ ವಿಷಯಗಳ ದಿನಾಂಕ, ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
10ನೇ ತರಗತಿಗೆ ಫೆಬ್ರವರಿ 17ರಿಂದ, 12ನೇ ತರಗತಿಗೆ ಫೆಬ್ರವರಿ 16ರಿಂದ ಶುರು – ಬೆಳಿಗ್ಗೆ 10:30ಕ್ಕೆ ಪರೀಕ್ಷೆ, ತಯಾರಿಗೆ ಇನ್ನೂ 101 ದಿನ ಬಾಕಿ! ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ನವದೆಹಲಿ: 2027ನೇ ಸಾಲಿನ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ತಯಾರಾಗುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಹತ್ವದ ಅಪ್ಡೇಟ್ ಹೊರಬಿದ್ದಿದೆ. ಹೌದು, ಸಿಬಿಎಸ್ಇ ಮಂಡಳಿಯು 2027ರ ಬೋರ್ಡ್ ಪರೀಕ್ಷೆಗಳ ಅಂತಿಮ ದಿನಾಂಕ ಹಾಗೂ ಸಂಪೂರ್ಣ ವೇಳಾಪಟ್ಟಿಯನ್ನ ಅಧಿಕೃತವಾಗಿ ಪ್ರಕಟಿಸಿದೆ.
ಬಿಡುಗಡೆಯಾಗಿರುವ ಟೈಮ್ಟೇಬಲ್ ಪ್ರಕಾರ, 2027ರ ಫೆಬ್ರವರಿ 16 ರಿಂದಲೇ ಪರೀಕ್ಷೆಗಳು ಆರಂಭವಾಗಲಿದ್ದು, ಎರಡೂ ತರಗತಿಗಳ ಪರೀಕ್ಷೆಗಳು ಪ್ರತಿದಿನ ಬೆಳಿಗ್ಗೆ 10:30ಕ್ಕೆ ಪ್ರಾರಂಭವಾಗಲಿವೆ. ನವೆಂಬರ್ 6ರಂದೇ ಟೈಮ್ಟೇಬಲ್ ಬಿಡುಗಡೆಯಾಗಿರುವುದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ ಮಾಡಿಕೊಳ್ಳಲು ಬರೋಬ್ಬರಿ 101 ದಿನಗಳ ಕಾಲಾವಕಾಶ ಸಿಕ್ಕಿದೆ.
46 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗೆ ನೋಂದಣಿ!
ಮಂಡಳಿಯ ಅಧಿಕೃತ ಅಧಿಸೂಚನೆಯ ಪ್ರಕಾರ, ಈ ಬಾರಿಯ 10ನೇ ತರಗತಿ ಸಿಬಿಎಸ್ಇ ಬೋರ್ಡ್ ಪರೀಕ್ಷೆ ಬರೆಯಲು ದೇಶಾದ್ಯಂತ ಒಟ್ಟು 26.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಅದೇ ರೀತಿ, 12ನೇ ತರಗತಿಯ ಬೋರ್ಡ್ ಪರೀಕ್ಷೆ ಎದುರಿಸಲು 19.8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ. (CBSE Board Exam)
10ನೇ ತರಗತಿ ವಿದ್ಯಾರ್ಥಿಗಳು ಒಟ್ಟು 83 ವಿಷಯಗಳಲ್ಲಿ ಪರೀಕ್ಷೆ ಎದುರಿಸಲಿದ್ದರೆ, 12ನೇ ತರಗತಿ ವಿದ್ಯಾರ್ಥಿಗಳು ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳು ಸೇರಿ ಬರೋಬ್ಬರಿ 121 ವಿಷಯಗಳಿಗೆ ಪರೀಕ್ಷೆ ಬರೆಯಲಿದ್ದಾರೆ.
10ನೇ ತರಗತಿಯ ಪ್ರಮುಖ ವಿಷಯಗಳ ಪರೀಕ್ಷಾ ವೇಳಾಪಟ್ಟಿ
ಮಂಡಳಿಯು ಪ್ರಕಟಿಸಿರುವ ವೇಳಾಪಟ್ಟಿಯಂತೆ 10ನೇ ತರಗತಿಯ ಮುಖ್ಯ ಪರೀಕ್ಷೆಗಳು ಫೆಬ್ರವರಿ 17 ರಿಂದ ಆರಂಭವಾಗಿ ಮಾರ್ಚ್ 9ರವರೆಗೆ ನಡೆಯಲಿವೆ. (CBSE Board Exam) ಪ್ರಮುಖ ವಿಷಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ:
| ವಿಷಯ | ದಿನಾಂಕ |
| ಗಣಿತ | ಫೆಬ್ರವರಿ 17, 2027 |
| ವಿಜ್ಞಾನ | ಫೆಬ್ರವರಿ 22, 2027 |
| ಇಂಗ್ಲಿಷ್ | ಫೆಬ್ರವರಿ 26, 2027 |
| ಹಿಂದಿ | ಮಾರ್ಚ್ 3, 2027 |
| ಸಮಾಜ ವಿಜ್ಞಾನ | ಮಾರ್ಚ್ 8, 2027 |
12ನೇ ತರಗತಿಯ ಪ್ರಮುಖ ವಿಷಯಗಳ ಪರೀಕ್ಷಾ ವೇಳಾಪಟ್ಟಿ
12ನೇ ತರಗತಿಯ ಮುಖ್ಯ ಪರೀಕ್ಷೆಗಳು ಫೆಬ್ರವರಿ 16 ರಿಂದಲೇ ಶುರುವಾಗಿ, ಏಪ್ರಿಲ್ 1ರವರೆಗೆ ನಡೆಯಲಿವೆ. ಪ್ರಮುಖ ವಿಷಯಗಳ ಪರೀಕ್ಷಾ ದಿನಾಂಕಗಳು ಹೀಗಿವೆ:
| ವಿಷಯ | ದಿನಾಂಕ |
| ಭೌತಶಾಸ್ತ್ರ | ಫೆಬ್ರವರಿ 16, 202 |
| ಅಕೌಂಟೆನ್ಸಿ | ಫೆಬ್ರವರಿ 23, 202 |
| ರಸಾಯನಶಾಸ್ತ್ರ | ಫೆಬ್ರವರಿ 27, 202 |
| ಇಂಗ್ಲಿಷ್ | ಮಾರ್ಚ್ 5, 2027 |
| ಗಣಿತ | ಮಾರ್ಚ್ 11, 2027 |
| ಜೀವಶಾಸ್ತ್ರ | ಮಾರ್ಚ್ 25, 2027 |
ಈ ಬಾರಿ ವೇಳಾಪಟ್ಟಿ ವಿಳಂಬವಾಗಿದ್ದೇಕೆ?

ಕಳೆದ ವರ್ಷದ ಪರೀಕ್ಷೆಗಳಿಗೆ ಸೆಪ್ಟೆಂಬರ್ ತಿಂಗಳಿನಲ್ಲೇ ತಾತ್ಕಾಲಿಕ ವೇಳಾಪಟ್ಟಿಯನ್ನ ಪ್ರಕಟಿಸಲಾಗಿತ್ತು, ನಂತರ ಅಕ್ಟೋಬರ್ ಅಂತ್ಯಕ್ಕೆ ಫೈನಲ್ ಟೈಮ್ಟೇಬಲ್ ನೀಡಲಾಗಿತ್ತು. (CBSE Board Exam) ಆದರೆ ಈ ಬಾರಿ ನೇರವಾಗಿ ನವೆಂಬರ್ನಲ್ಲಿ ಅಂತಿಮ ಪಟ್ಟಿಯನ್ನ ಬಿಡುಗಡೆ ಮಾಡಲಾಗಿದೆ.
ಶಾಲೆಗಳಿಂದ ಲಿಸ್ಟ್ ಆಫ್ ಕ್ಯಾಂಡಿಡೇಟ್ಸ್ (LOC) ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳ್ಳಲು ಕಾದಿದ್ದೆವು ಎಂದು ಮಂಡಳಿ ಸ್ಪಷ್ಟಪಡಿಸಿದೆ. ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿರುವ ವಿಷಯಗಳ ಬಗ್ಗೆ ನಿಖರವಾದ ಡೇಟಾ ಲಭ್ಯವಾದ ಬಳಿಕ, ಯಾವುದೇ ಇಬ್ಬರು ವಿದ್ಯಾರ್ಥಿಗಳ ಪರೀಕ್ಷೆಗಳು ಒಂದೇ ದಿನ ಕ್ಲ್ಯಾಶ್ ಆಗದಂತೆ ನೋಡಿಕೊಳ್ಳಲು 40,000ಕ್ಕೂ ಹೆಚ್ಚು ವಿಷಯ ಸಂಯೋಜನೆಗಳನ್ನು ಪರಿಗಣಿಸಿ ಈ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. (CBSE Board Exam)
ಜೊತೆಗೆ, 12ನೇ ತರಗತಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳ ದಿನಾಂಕಗಳನ್ನ ಸಹ ಗಮನದಲ್ಲಿಟ್ಟುಕೊಳ್ಳಲಾಗಿದೆ. ಇಷ್ಟು ಮುಂಚಿತವಾಗಿ ವೇಳಾಪಟ್ಟಿ ಬಿಡುಗಡೆಯಾಗಿರುವುದು ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನವನ್ನ ವ್ಯವಸ್ಥಿತವಾಗಿ ಯೋಜಿಸಲು ಹಾಗೂ ಪರೀಕ್ಷಾ ಆತಂಕವನ್ನು ಕಡಿಮೆ ಮಾಡಲು ನೆರವಾಗಲಿದೆ.

[…] CBSE Board Exam 2027: ಟೈಮ್ಟೇಬಲ್ ಬಿಡುಗಡೆ! ಫೆಬ್ರವರಿ… […]
[…] CBSE Board Exam 2027: ಟೈಮ್ಟೇಬಲ್ ಬಿಡುಗಡೆ! ಫೆಬ್ರವರಿ… […]