ನನ್ನಿವಾಳ ಸರ್ಕಾರಿ ಶಾಲೆಗೆ 4 ಹಸಿರು ಹಲಗೆಗಳ ಕೊಡುಗೆ; ಎಲ್ಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ (Challakere Govt School)

ಸರ್ಕಾರದಿಂದ ದೊರೆಯದ, ಮಕ್ಕಳಿಗೆ ಅಗತ್ಯವಿರುವ ಶೈಕ್ಷಣಿಕ ಪರಿಕರಗಳನ್ನು ದಾನಿಗಳ ನೆರವಿನಿಂದ ಒದಗಿಸುತ್ತಿರುವುದು ಶ್ಲಾಘನೀಯ: C.S. ವೆಂಕಟೇಶ್ (Challakere Govt School)

ಚಳ್ಳಕೆರೆ: ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ವೃದ್ಧಿ ಹಾಗೂ ಮಕ್ಕಳ ಕಲಿಕಾ ಪ್ರಕ್ರಿಯೆಯನ್ನು ಪರಿಣಾಮಕಾರಿಗೊಳಿಸುವ ಉದ್ದೇಶದಿಂದ ಚಳ್ಳಕೆರೆ (Challakere Govt School) ತಾಲ್ಲೂಕಿನ ನನ್ನಿವಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಮಾರುತೇಶ ಸ್ನೇಹಿತರ ಬಳಗದ ವತಿಯಿಂದ 4 ಹಸಿರು ಹಲಗೆಗಳನ್ನು ಹಾಗೂ ಬೆಂಗಳೂರಿನ Need Base ಟ್ರಸ್ಟ್ ವತಿಯಿಂದ ಶಾಲೆಯ ಎಲ್ಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಕೊಡುಗೆಯಾಗಿ ವಿತರಿಸಲಾಯಿತು.

Challakere Govt School
ನನ್ನಿವಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ: Niyatam News

ಈ ಸಂದರ್ಭದಲ್ಲಿ ಜಿಲ್ಲಾ ಉಪ ಯೋಜನಾಧಿಕಾರಿಗಳಾದ ಶ್ರೀ C.S. ವೆಂಕಟೇಶ್ ಮಾತನಾಡಿ, “ಸರ್ಕಾರದಿಂದ ದೊರೆಯದ, ಆದರೆ ಮಕ್ಕಳ ಕಲಿಕೆಗೆ ಅತ್ಯಗತ್ಯವಾಗಿರುವ ಶೈಕ್ಷಣಿಕ ಪರಿಕರಗಳನ್ನು ದಾನಿಗಳ ನೆರವಿನಿಂದ ಪಡೆದು ವಿತರಿಸುತ್ತಿರುವುದು ಅತ್ಯಂತ ಶ್ಲಾಘನೀಯ. ಇಂತಹ ಕಾರ್ಯಗಳು ಸರ್ಕಾರಿ ಶಾಲೆಗಳ ಶೈಕ್ಷಣಿಕ ಬಲವರ್ಧನೆಗೆ ಪೂರಕವಾಗಿದ್ದು, ಮಕ್ಕಳ ಕಲಿಕಾ ಆಸಕ್ತಿ ಮತ್ತು ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ. ದಾನಿಗಳ ಸಹಕಾರವನ್ನು ಮಕ್ಕಳು ಸದುಪಯೋಗಪಡಿಸಿಕೊಂಡು ಗುಣಮಟ್ಟದ ಶಿಕ್ಷಣ ಪಡೆದು ಉತ್ತಮ ಪ್ರಜೆಗಳಾಗಬೇಕು” ಎಂದು ತಿಳಿಸಿದರು. (Challakere Govt School)

71ನೇ Karnataka Rajyotsava: 12 ಮಹಿಳೆಯರು ಸೇರಿದಂತೆ 71 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ

ಬಡ್ತಿ ಮುಖ್ಯೋಪಾಧ್ಯಾಯರಾದ ಶ್ರೀ ಮಾರುತೇಶ.ಆರ್. ಮಾತನಾಡಿ, “ಸರ್ಕಾರಿ ಶಾಲೆಗಳು ಗ್ರಾಮೀಣ ಮಕ್ಕಳ ಭವಿಷ್ಯ ರೂಪಿಸುವ ಜ್ಞಾನಮಂದಿರಗಳಾಗಿವೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರ ಪರಿಶ್ರಮದ ಜೊತೆಗೆ ಅಗತ್ಯ ಶೈಕ್ಷಣಿಕ ಪರಿಕರಗಳು ಹಾಗೂ ಸಮುದಾಯದ ಸಹಕಾರವೂ ಅತ್ಯವಶ್ಯಕ. ಶಾಲೆಯ ಅಗತ್ಯಗಳನ್ನು ಗುರುತಿಸಿ, ಮಕ್ಕಳ ಕಲಿಕೆಗೆ ನೆರವಾಗುವ ಹಸಿರು ಹಲಗೆಗಳು ಹಾಗೂ ನೋಟ್ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಬೆಂಗಳೂರಿನ ನಮ್ಮ ಸ್ನೇಹಿತರ ಬಳಗ ಮತ್ತು Need Base ಟ್ರಸ್ಟ್‌ನ ಸೇವಾ ಮನೋಭಾವ ಅಭಿನಂದನೀಯ. ದಾನಿಗಳ ಈ ಸಹಕಾರವು ಮಕ್ಕಳಲ್ಲಿ ಕಲಿಕೆಯ ಉತ್ಸಾಹ ಹೆಚ್ಚಿಸುವುದರೊಂದಿಗೆ ಸರ್ಕಾರಿ ಶಾಲೆಗಳ ಮೇಲಿನ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುತ್ತದೆ” ಎಂದು ಕೃತಜ್ಞತೆ ಸಲ್ಲಿಸಿದರು.

ಮಕ್ಕಳಿಗೆ ಅಗತ್ಯವಾದ ಕಲಿಕಾ ಸಾಮಗ್ರಿಗಳನ್ನು ಒದಗಿಸುವ ಮೂಲಕ ಅವರಲ್ಲಿ ಕಲಿಕೆಯ ಆಸಕ್ತಿ, ಸೃಜನಶೀಲತೆ, ವೈಚಾರಿಕತೆ ಹಾಗೂ ಶೈಕ್ಷಣಿಕ ಸಾಧನೆಯನ್ನು ಉತ್ತೇಜಿಸುವುದು ಇಂತಹ ಕಾರ್ಯಕ್ರಮಗಳ ಮುಖ್ಯ ಉದ್ದೇಶವಾಗಿದೆ. ಶಾಲೆಯ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ ಸರ್ಕಾರಿ ಶಾಲೆಗಳ ಪ್ರಗತಿಗೆ ಹೊಸ ಆಯಾಮ ನೀಡುತ್ತಿದೆ.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಕರಿಬಸಮ್ಮ, ಜಯಮ್ಮ, ಯರ್ರಯ್ಯ, ಅಖಲೇಶ್, ಮೇಘ ಹಾಗೂ ಅತಿಥಿ ಶಿಕ್ಷಕರಾದ ತ್ರಿವೇಣಿ ಮತ್ತು ಸುರೇಶ್ ಉಪಸ್ಥಿತರಿದ್ದರು.