Super Intelligence: AI ಇನ್ನು ಮುಂದೆ SI! ಡೊನಾಲ್ಡ್ ಟ್ರಂಪ್ ಘೋಷಣೆ: ಅಮೆರಿಕದಲ್ಲಿ ಅಧಿಕೃತವಾಗಿ ‘ಸೂಪರ್ ಇಂಟೆಲಿಜೆನ್ಸ್’ ಯುಗ ಆರಂಭ

ವಿಶ್ವಸಂಸ್ಥೆಯ ವೇದಿಕೆಯಲ್ಲೇ AI ಹೆಸರನ್ನು SI (Super Intelligence) ಎಂದು  ಬದಲಿಸಿದ ಅಮೆರಿಕ ಅಧ್ಯಕ್ಷ, ‘ಆರ್ಟಿಫಿಶಿಯಲ್’ ಪದ ಸುಳ್ಳಿನ ಭಾವನೆ ಮೂಡಿಸುತ್ತದೆ ಎಂದ ಟ್ರಂಪ್ - ಜಾಗತಿಕ ನಿಯಂತ್ರಣದ ಪ್ರಸ್ತಾಪವನ್ನು ‘ಗ್ಲೋಬಲಿಸ್ಟ್ ಷಡ್ಯಂತ್ರ’ ಎಂದು ತಳ್ಳಿಹಾಕಿದರು

ಕೃತಕ ಬುದ್ಧಿಮತ್ತೆ ಜಗತ್ತಿನಲ್ಲಿ ಇದುವರೆಗೆ AI – Artificial Intelligence ಎಂದು ಕರೆಯಲ್ಪಡುತ್ತಿದ್ದ ತಂತ್ರಜ್ಞಾನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೊಸ ನಾಮಕರಣ ಮಾಡಿದ್ದಾರೆ. ಇನ್ನು ಮುಂದೆ ಅಮೆರಿಕದ ಎಲ್ಲಾ ಸರ್ಕಾರಿ ದಾಖಲೆಗಳಲ್ಲಿ ಇದನ್ನು AI ಎಂದಲ್ಲ, ಬದಲಿಗೆ SI – Super Intelligence ಎಂದು ಕರೆಯಲಾಗುವುದು ಎಂದು ಅವರು ವಿಶ್ವಸಂಸ್ಥೆಯ 81ನೇ ಮಹಾ ಅಧಿವೇಶನದಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.

ಮಂಗಳವಾರ ನ್ಯೂಯಾರ್ಕ್‌ನಲ್ಲಿ ವಿಶ್ವ ನಾಯಕರನ್ನುದ್ದೇಶಿಸಿ ಮಾತನಾಡಿದ ಟ್ರಂಪ್, “ಆರ್ಟಿಫಿಶಿಯಲ್ ಎಂಬ ಪದವು ಈ ತಂತ್ರಜ್ಞಾನವನ್ನು ನಕಲಿ ಎಂದು ಬಿಂಬಿಸುತ್ತದೆ. ಆದರೆ ಅದು ನಕಲಿಯಲ್ಲ. ‘It makes it sound fake, and it is not fake. It’s actually amazing’ ಎಂದು ಹೇಳುವ ಮೂಲಕ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

“ಇಂದಿನಿಂದ ಅಮೆರಿಕ ಸಂಯುಕ್ತ ಸಂಸ್ಥಾನದ ಎಲ್ಲಾ ದಾಖಲೆಗಳು ಮತ್ತು ಆಶಾದಾಯಕವಾಗಿ ಇಡೀ ಪ್ರಪಂಚದ ದಾಖಲೆಗಳು ‘ಆರ್ಟಿಫಿಶಿಯಲ್’ ಬದಲಿಗೆ ‘ಸೂಪರ್’ ಎಂಬ ಹೆಚ್ಚು ನಿಖರವಾದ ಪದವನ್ನು ಬಳಸುತ್ತವೆ. ಅಂದರೆ ಇದು ಸೂಪರ್ ಇಂಟೆಲಿಜೆನ್ಸ್ – SI” ಎಂದು ಟ್ರಂಪ್ ಘೋಷಿಸಿದರು. ಇದರೊಂದಿಗೆ ಅವರು ಹೊಸದಾಗಿ SI ಪಡೆ ರಚನೆಯ ಸುಳಿವನ್ನೂ ನೀಡಿದ್ದಾರೆ.

Super Intelligence: ಏಕೆ ಈ ಬದಲಾವಣೆ?

ಟ್ರಂಪ್ ಅವರ ಈ ನಿರ್ಧಾರ ಹಠಾತ್ತನೆ ಬಂದಿದ್ದಲ್ಲ. ಕೆಲವು ದಿನಗಳ ಹಿಂದೆ ತಮ್ಮ Truth Social ಖಾತೆಯಲ್ಲಿ ಅವರು ಸಮೀಕ್ಷೆಯೊಂದನ್ನು ನಡೆಸಿದ್ದರು. AI ಗೆ ಬೇರೆ ಹೆಸರೇನು ಇಡಬಹುದು? Superior Intelligence, Extreme Intelligence, Supreme Intelligence ಎಂದು ಆಯ್ಕೆಗಳನ್ನು ನೀಡಿದ್ದರು. ನಂತರ Supreme ಅನ್ನು ತೆಗೆದುಹಾಕಿ, ಅಂತಿಮವಾಗಿ ವಿಶ್ವಸಂಸ್ಥೆಯ ವೇದಿಕೆಯಲ್ಲಿ Super Intelligence ಎಂಬ ಹೆಸರನ್ನು ಅಧಿಕೃತಗೊಳಿಸಿದರು.

ವೈಟ್ ಹೌಸ್ ಮೂಲಗಳ ಪ್ರಕಾರ, ಈ ಮರುನಾಮಕರಣವು ಕೇವಲ ಶಬ್ದ ಬದಲಾವಣೆಯಲ್ಲ, ಅದು ಅಮೆರಿಕದ ತಂತ್ರಜ್ಞಾನದ ಮೇಲಿನ ಹಿಡಿತವನ್ನು ತೋರಿಸುವ ಕಾರ್ಯತಂತ್ರ. ಈ ಹಿಂದೆ ಟ್ರಂಪ್ ಆಡಳಿತವು ಗಲ್ಫ್ ಆಫ್ ಮೆಕ್ಸಿಕೊವನ್ನು ‘ಗಲ್ಫ್ ಆಫ್ ಅಮೆರಿಕ’ ಎಂದು ಮತ್ತು ಲೇಕ್ ಒಂಟಾರಿಯೊವನ್ನು ‘ಲೇಕ್ ಅಮೆರಿಕ’ ಎಂದು ಮರುನಾಮಕರಣ ಮಾಡಿತ್ತು.

ಜಾಗತಿಕ ನಿಯಂತ್ರಣಕ್ಕೆ ಬಿಗ್ ನೋ!

ಟ್ರಂಪ್ ತಮ್ಮ ಭಾಷಣದಲ್ಲಿ AI ಮೇಲಿನ ಜಾಗತಿಕ ನಿಯಂತ್ರಣದ ಪ್ರಯತ್ನಗಳನ್ನು ತೀವ್ರವಾಗಿ ಟೀಕಿಸಿದರು. 20ಕ್ಕೂ ಹೆಚ್ಚು ದೇಶಗಳು AI ಸುರಕ್ಷತೆಗಾಗಿ ಕಠಿಣ ಕಾನೂನು ತರಲು ಒತ್ತಾಯಿಸಿದ್ದವು, ಆದರೆ ಅಮೆರಿಕ ಮತ್ತು ಚೀನಾ ಅದಕ್ಕೆ ಸಹಿ ಹಾಕಿರಲಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, “ಅಮೆರಿಕವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನ್ನು ನಿಯಂತ್ರಿಸಲು ‘ಗ್ಲೋಬಲಿಸ್ಟ್ ಸ್ಕೀಮ್’ ರಚಿಸುವ ಯಾವುದೇ ಪ್ರಯತ್ನವನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತದೆ” ಎಂದು ಗುಡುಗಿದರು.

AI ಅಪಾಯಗಳ ಬಗ್ಗೆ ಎಚ್ಚರಿಸುವ ತಜ್ಞರನ್ನು ಅವರು ಹವಾಮಾನ ಬದಲಾವಣೆಯ ಬಗ್ಗೆ ಎಚ್ಚರಿಸಿದವರಿಗೆ ಹೋಲಿಸಿದರು. “12 ವರ್ಷಗಳಲ್ಲಿ ನಾವೆಲ್ಲರೂ ಜಾಗತಿಕ ತಾಪಮಾನದಿಂದ ಸಾಯುತ್ತೇವೆ ಎಂದು ಹೇಳಿದ ಅದೇ ಜನರು, ಈಗ AI ನಮ್ಮನ್ನೆಲ್ಲಾ ಕೊಲ್ಲುತ್ತದೆ, ರೋಬೋಟ್‌ಗಳು ನಮ್ಮ ಮೇಲೆ ದಾಳಿ ಮಾಡುತ್ತವೆ ಎಂದು ಹೇಳುತ್ತಿದ್ದಾರೆ” ಎಂದು ಲೇವಡಿ ಮಾಡಿದರು.

Male Testosterone: ಪುರುಷರಲ್ಲಿ ಋತುಚಕ್ರ ಹೇಗಿರುತ್ತದೆ? ಪುರುಷರಿಗೂ ಬರುತ್ತಾ ಮುಟ್ಟು? – ಟೆಸ್ಟೋಸ್ಟೆರಾನ್ ಹಿಂದಿದೆ ಹಾರ್ಮೋನ್ ಸತ್ಯ!

ಸೂಪರ್ ಇಂಟೆಲಿಜೆನ್ಸ್ (Super Intelligence) ಪರ್ವ ಮತ್ತು ಹೊಸ ಪಡೆ“ಯಾರು SI ಅನ್ನು ಗೆಲ್ಲುತ್ತಾರೋ, ಅವರೇ ಜಗತ್ತನ್ನು ಗೆಲ್ಲುತ್ತಾರೆ. ಸದ್ಯ ನಾವು ಚೀನಾಕ್ಕಿಂತ ಬಹಳ ಮುಂದಿದ್ದೇವೆ ಮತ್ತು ಹಾಗೆಯೇ ಮುಂದುವರಿಯುತ್ತೇವೆ” ಎಂದು ಟ್ರಂಪ್ ಹೇಳಿದರು. ಅಮೆರಿಕವು ಈ ತಂತ್ರಜ್ಞಾನದ ಬೆಳವಣಿಗೆಯನ್ನು ತಡೆಯುವುದಿಲ್ಲ, ಬದಲಿಗೆ ಪ್ರೋತ್ಸಾಹಿಸುತ್ತದೆ, ಆದರೆ ನ್ಯಾಯ ಇಲಾಖೆಯ (Department of Justice) ಮೂಲಕ ಸೂಕ್ಷ್ಮವಾಗಿ ಗಮನಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಇದರೊಂದಿಗೆ ಅಮೆರಿಕದಲ್ಲಿ ಸೂಪರ್ ಇಂಟೆಲಿಜೆನ್ಸ್‌ಗಾಗಿ ಹೊಸ ವಿಶೇಷ ಟಾಸ್ಕ್ ಫೋರ್ಸ್ ಅಥವಾ ‘ಹೊಸ ಪಡೆ’ ರಚನೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇದು ಕೇವಲ ಸರ್ಕಾರಿ ದಾಖಲೆಗಳ ಭಾಷೆ ಬದಲಾವಣೆಯಲ್ಲ, ಅಮೆರಿಕವನ್ನು SI ಸೂಪರ್ ಪವರ್ ಆಗಿ ಮಾಡುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.

ಆದರೆ ತಂತ್ರಜ್ಞಾನ ವಲಯದಲ್ಲಿ ‘ಸೂಪರ್ ಇಂಟೆಲಿಜೆನ್ಸ್’ ಎಂಬ ಪದಕ್ಕೆ ಈಗಾಗಲೇ ಬೇರೆ ಅರ್ಥವಿದೆ. ಇದು ಮನುಷ್ಯನ ಬುದ್ಧಿಮತ್ತೆಯನ್ನು ಮೀರಿದ ಭವಿಷ್ಯದ ಕಾಲ್ಪನಿಕ AI ವ್ಯವಸ್ಥೆಯನ್ನು ಸೂಚಿಸುತ್ತದೆ, ಇಡೀ AI ಕ್ಷೇತ್ರವನ್ನಲ್ಲ. ಹೀಗಾಗಿ ಟ್ರಂಪ್ ಅವರ ಈ ಘೋಷಣೆ ವೈಜ್ಞಾನಿಕ ಪದಕೋಶಕ್ಕಿಂತ ರಾಜಕೀಯ ಮತ್ತು ಸರ್ಕಾರಿ ನಿರ್ಧಾರವಾಗಿ ಹೆಚ್ಚು ಚರ್ಚೆಗೆ ಕಾರಣವಾಗಿದೆ.