ಅಮೆರಿಕದಲ್ಲಿ ನವೆಂಬರ್ 3 ರಂದು ನಡೆಯಲಿರುವ ಮಧ್ಯಂತರ ಚುನಾವಣೆಯ ಕಾವು ಏರುತ್ತಿರುವಂತೆಯೇ, ಟೆಕ್ಸಾಸ್ ರಾಜ್ಯದಲ್ಲಿ ಧಾರ್ಮಿಕ ಸಹಿಷ್ಣುತೆಯ ಪ್ರಶ್ನೆಯೊಂದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಟೆಕ್ಸಾಸ್ನ ಶುಗರ್ಲ್ಯಾಂಡ್ನಲ್ಲಿರುವ ಶ್ರೀ ಅಷ್ಟಲಕ್ಷ್ಮಿ ದೇವಸ್ಥಾನದ 90 ಅಡಿ ಎತ್ತರದ ಭವ್ಯ ಹನುಮಾನ್ ವಿಗ್ರಹ (Texas Hanuman Statue) ವನ್ನು ಕೆಡವುದಾಗಿ ಬೆದರಿಕೆ ಹಾಕಿರುವ ಸಂಪ್ರದಾಯವಾದಿ ಯೂಟ್ಯೂಬರ್ ಒಬ್ಬರ ಹೇಳಿಕೆ, ಅಮೆರಿಕದಾದ್ಯಂತ ಇರುವ 5 ಲಕ್ಷಕ್ಕೂ ಹೆಚ್ಚು ಭಾರತೀಯ-ಅಮೆರಿಕನ್ನರಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು, ರಾಜಕೀಯ ತಿರುವನ್ನು ಪಡೆದುಕೊಂಡಿದೆ.
ಈ ವಿಗ್ರಹಕ್ಕೆ ‘ಸ್ಟ್ಯಾಚ್ಯೂ ಆಫ್ ಯೂನಿಯನ್’ ಎಂದು ಹೆಸರಿಡಲಾಗಿದೆ. ಆಗಸ್ಟ್ 2024 ರಲ್ಲಿ ಪ್ರತಿಷ್ಠಾಪನೆಯಾದಾಗಿನಿಂದಲೂ ಇದು ಹಿಂದೂ ಸಮುದಾಯದ ಹೆಮ್ಮೆಯ ಸಂಕೇತವಾಗಿದೆ. ಉತ್ತರ ಅಮೆರಿಕದಲ್ಲೇ ಅತಿ ಎತ್ತರದ ಹನುಮಾನ್ ವಿಗ್ರಹ (Texas Hanuman Statue) ಗಳಲ್ಲಿ ಒಂದಾಗಿರುವ ಇದು, ಭಕ್ತರಿಗೆ ಆಕರ್ಷಣೆಯ ಕೇಂದ್ರವಾಗಿದೆ. ಆದರೆ ಪ್ರತಿಷ್ಠಾಪನೆಯಾದಾಗಿನಿಂದಲೂ ಕೆಲವು ಕ್ರಿಶ್ಚಿಯನ್ ಸಂಪ್ರದಾಯವಾದಿ ಗುಂಪುಗಳು ಇದನ್ನು ‘ಅನ್-ಕ್ರಿಶ್ಚಿಯನ್’ ಎಂದು ಕರೆಯುತ್ತಾ ವಿರೋಧಿಸುತ್ತಾ ಬಂದಿದ್ದವು.
So grateful for your service Ruchir ji. You inspire our entire team. We share your horror at the open religious bigotry being mainstreamed on this platform and are proud to fight it alongside you https://t.co/oSqIpqNBph
— CoHNA (Coalition of Hindus of North America) (@CoHNAOfficial) September 21, 2026
ಈಗ ವಿವಾದವನ್ನು ಮತ್ತಷ್ಟು ಉಲ್ಬಣಗೊಳಿಸಿರುವುದು MAGA – Make America Great Again ಬೆಂಬಲಿಗ ಮತ್ತು ಯೂಟ್ಯೂಬರ್ ಜೆಸ್ಸಿ ಹ್ಯೂಸ್. ಅವರು ತಮ್ಮ X ಖಾತೆಯಲ್ಲಿ ಹನುಮಾನ್ ವಿಗ್ರಹದ ಫೋಟೋವನ್ನು ಹಂಚಿಕೊಂಡು, “Btw, when we win, we are tearing this down – ಅಂದರೆ, ನಾವು ಗೆದ್ದಾಗ ಇದನ್ನು ಕೆಡವುತ್ತೇವೆ” ಎಂದು ಬರೆದುಕೊಂಡಿದ್ದಾರೆ. ‘ಗೆದ್ದಾಗ’ ಎಂದರೆ ಏನು ಎಂಬುದನ್ನು ಅವರು ಸ್ಪಷ್ಟಪಡಿಸದಿದ್ದರೂ, ಮುಂಬರುವ ಮಧ್ಯಂತರ ಚುನಾವಣೆಯಲ್ಲಿ ತಮ್ಮ ಪಕ್ಷ ಗೆದ್ದಾಗ ಎಂಬ ಅರ್ಥದಲ್ಲಿಯೇ ಇದನ್ನು ಬರೆಯಲಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
Texas Hanuman Statue: ಹ್ಯೂಸ್ ಪೋಸ್ಟ್ಗೆ ಜಗತ್ತಿನಾದ್ಯಂತ ವ್ಯಾಪಕ ವಿರೋಧ
ಹ್ಯೂಸ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಬೆಂಕಿಯಂತೆ ಹರಡುತ್ತಿದ್ದಂತೆ, ಹಿಂದೂ ಸಂಘಟನೆಗಳು ಮತ್ತು ಚಿಂತಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಈ ವಿವಾದದಲ್ಲಿ ಪ್ರತಿಕ್ರಿಯಿಸಿರುವ ಅಮೆರಿಕದ ಸೇನೆಯ ವೆಟರನ್ ಮತ್ತು ತಮ್ಮನ್ನು ತಾವು ಅಮೆರಿಕನ್-ಹಿಂದೂ ಎಂದು ಗುರುತಿಸಿಕೊಳ್ಳುವ ರುಚಿರ್ ಬಕ್ಷಿ. ಅವರು ಹ್ಯೂಸ್ ಅವರ ಹೇಳಿಕೆಯನ್ನು ದೇಶಪ್ರೇಮ ವಿರೋಧಿ ಮತ್ತು “ಹಿಂದೂ ಧರ್ಮದ ಮೇಲಿನ ನೇರ ಬೆದರಿಕೆ” ಎಂದು ಖಂಡಿಸಿದ್ದಾರೆ.
“ನೀವು ಒಳಗಿರುವ ನಂಬಿಕೆಯನ್ನು ದ್ವೇಷಿಸುತ್ತೀರಿ ಎಂಬ ಕಾರಣಕ್ಕಾಗಿ ಮತ್ತೊಂದು ಅಮೆರಿಕನ್ ಸಮುದಾಯದ ಪ್ರಾರ್ಥನಾ ಮಂದಿರವನ್ನು ಧ್ವಂಸ ಮಾಡುವುದು, ಅದೇ ಹಿಂದೂ ಧರ್ಮದ ಮೇಲಿನ ಬೆದರಿಕೆ” ಎಂದು ಬಕ್ಷಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಅಮೆರಿಕದಲ್ಲಿ ಗೆಲ್ಲುವುದು ಎಂದರೆ ಹಿಂದೂ ದೇವಾಲಯಗಳನ್ನು ಕೆಡವುವುದು ಎಂದಾದರೆ, ನಾನು ಹೋರಾಡಿದ ದೇಶ ನಿಮಗೆ ಬೇಕಾಗಿಲ್ಲ. ನಿಮ್ಮಂತಲ್ಲದ ಜನರ ಹಿಂದೆ ಬೀಳಲು ನಿಮಗೆ ಕೇವಲ ಒಂದು ಪರವಾನಗಿ ಬೇಕು ಅಷ್ಟೇ” ಎಂದು ಅವರು X ನಲ್ಲಿ ಬರೆದುಕೊಂಡಿದ್ದಾರೆ.
ಬಕ್ಷಿ ಅವರ ನಿಲುವಿಗೆ ಉತ್ತರ ಅಮೆರಿಕದ ಹಿಂದೂಗಳ ಒಕ್ಕೂಟ (CoHNA) ಮತ್ತು ಟೆಕ್ಸಾಸ್ ಮೂಲದ ಮತ್ತೊಬ್ಬ ಸೇನಾ ವೆಟರನ್ ಹಾಗೂ ರಾಜಕೀಯ ವಿಶ್ಲೇಷಕ ಕಾರ್ಲ್ ವೀಲೆಸ್ ಬೆಂಬಲ ಸೂಚಿಸಿದ್ದಾರೆ. “ಈ ವೇದಿಕೆಯಲ್ಲಿ ಮುಖ್ಯವಾಹಿನಿಯಾಗುತ್ತಿರುವ ಬಹಿರಂಗ ಧಾರ್ಮಿಕ ಮತಾಂಧತೆಯ ಬಗ್ಗೆ ನಿಮ್ಮ ಭೀತಿಯನ್ನು ನಾವು ಹಂಚಿಕೊಳ್ಳುತ್ತೇವೆ ಮತ್ತು ಅದರ ವಿರುದ್ಧ ನಿಮ್ಮೊಂದಿಗೆ ಹೋರಾಡಲು ನಾವು ಹೆಮ್ಮೆಪಡುತ್ತೇವೆ” ಎಂದು CoHNA ಹೇಳಿದೆ.
Texas Hanuman Statue ವಿವಾದ ಭಾರತ ವಿರೋಧಿ ನಿರೂಪಣೆಯ ಸಂಕೇತವೇ?
ಟೆಕ್ಸಾಸ್ನಲ್ಲಿ ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ವಲಸೆ-ವಿರೋಧಿ ನಿರೂಪಣೆಯು ಪದೇ ಪದೇ ಕೇಳಿಬರುತ್ತಿದೆ. ಟೆಕ್ಸಾಸ್ನಲ್ಲಿ 5 ಲಕ್ಷಕ್ಕೂ ಹೆಚ್ಚು ಭಾರತೀಯ-ಅಮೆರಿಕನ್ನರು ವಾಸಿಸುತ್ತಿದ್ದು, ಅವರು ಪ್ರಮುಖ ಮತದಾರರಾಗಿದ್ದಾರೆ. ಇತ್ತೀಚೆಗೆ ಟೆಕ್ಸಾಸ್ ರೈಲ್ರೋಡ್ ಕಮಿಷನರ್ ಹುದ್ದೆಗೆ ಸ್ಪರ್ಧಿಸಿದ್ದ ರಿಪಬ್ಲಿಕನ್ ಅಭ್ಯರ್ಥಿ ಬೋ ಫ್ರೆಂಚ್ ಕೂಡ ದಕ್ಷಿಣ ಏಷ್ಯಾ ಮೂಲದ ವಿದ್ಯಾರ್ಥಿಗಳ ಫುಟ್ಬಾಲ್ ಸಂಭ್ರಮಾಚರಣೆಯ ಫೋಟೋವನ್ನು ಹಂಚಿಕೊಂಡು ವರ್ಣಭೇದ ನೀತಿ ಹೇಳಿಕೆ ನೀಡಿದ್ದರು.
ಈ ಹನುಮಾನ್ ವಿಗ್ರಹ (Texas Hanuman Statue) ವಿವಾದವು ಅಮೆರಿಕದಲ್ಲಿ ಹೆಚ್ಚುತ್ತಿರುವ ಹಿಂದು-ವಿರೋಧಿ ದ್ವೇಷದ ಬಗ್ಗೆ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ. ಅಮೆರಿಕವು ಧಾರ್ಮಿಕ ಸ್ವಾತಂತ್ರ್ಯದ ನಾಡು ಎಂದು ಹೇಳಿಕೊಳ್ಳುತ್ತದೆಯಾದರೂ, ಚುನಾವಣೆಯ ಲಾಭಕ್ಕಾಗಿ ಧಾರ್ಮಿಕ ಸಂಕೇತಗಳನ್ನು ಗುರಿಯಾಗಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. ಸದ್ಯ ಟೆಕ್ಸಾಸ್ ಪೊಲೀಸರು ದೇವಸ್ಥಾನದ ಸುತ್ತ ಭದ್ರತೆಯನ್ನು ಹೆಚ್ಚಿಸಿದ್ದು, ಹಿಂದೂ ಸಮುದಾಯ ಈ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಹೋರಾಟಕ್ಕೆ ಮುಂದಾಗಿದೆ.
