| ಹೈಲೈಟ್ಸ್: |
|
ಹೌದು! ಋತುಚಕ್ರದ ಬದಲಾವಣೆಗಳು ಪುರುಷರಲ್ಲಿಯೂ ಆಗುತ್ತದೆ. ಆದರೆ ಅವರಿಗೆ ಹೆಣ್ಣಿನ ತರಹ ಗರ್ಭಾಶಯ ಇಲ್ಲದ ಕಾರಣ ಮುಟ್ಟು ಬರುವುದಿಲ್ಲ. ಇಷ್ಟಾದರೂ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು ಮುಟ್ಟಾದಂತೆ ಪುರುಷರಿಗೂ ಪಿರಿಯಡ್ಸ್ ಆಗುತ್ತದೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಚರ್ಚೆಯಾಗುತ್ತಿರುತ್ತದೆ.
ಜೈವಿಕವಾಗಿ ಪುರುಷರಲ್ಲಿ ಗರ್ಭಾಶಯ ಇಲ್ಲದ ಕಾರಣ ರಕ್ತಸ್ರಾವದಂತಹ ಮುಟ್ಟು ಬರುವುದಿಲ್ಲ. ಆದರೆ, ‘ಮೇಲ್ ಪಿರಿಯಡ್ಸ್’ ಅಥವಾ ‘ಇರಿಟಬಲ್ ಮೇಲ್ ಸಿಂಡ್ರೋಮ್ (IMS)’ ಎಂಬ ಪರಿಕಲ್ಪನೆ ಸುಳ್ಳಲ್ಲ. ಇದು ಪುರುಷರ ಪ್ರಮುಖ ಹಾರ್ಮೋನ್ ಆದ ಟೆಸ್ಟೋಸ್ಟೆರಾನ್ (Male Testosterone) ನ ಏರಿಳಿತಕ್ಕೆ ಸಂಬಂಧಿಸಿದೆ.
Male Testosterone: ಏನಿದು ಪುರುಷರ ಋತುಚಕ್ರ?
ಸಾಮಾನ್ಯವಾಗಿ “Male Period” ಎಂದು ಕರೆಯಲ್ಪಡುವ ಇದು ಪುರುಷರ Testosterone ಹಾರ್ಮೋನ್ಗಳ ಬದಲಾವಣೆಗಳನ್ನು ಸೂಚಿಸುತ್ತದೆ. ಮಹಿಳೆಯರಲ್ಲಿ ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನ್ಗಳು 28 ದಿನಗಳ ಚಕ್ರದಲ್ಲಿ ಏರಿಳಿತ ಕಂಡರೆ, ಪುರುಷರಲ್ಲಿ ಟೆಸ್ಟೋಸ್ಟೆರಾನ್ ಪ್ರತಿದಿನ, ಪ್ರತಿ ಋತುವಿನಲ್ಲಿ ಮತ್ತು ವಯಸ್ಸಿಗೆ ಅನುಗುಣವಾಗಿ ಏರಿಳಿತವಾಗುತ್ತದೆ.
ವೈದ್ಯಕೀಯ ಸಂಶೋಧನೆಗಳ ಪ್ರಕಾರ, ಪುರುಷರಲ್ಲಿ Testosterone ಮಟ್ಟವು ದಿನದ 24 ಗಂಟೆಗಳಲ್ಲಿ ಬದಲಾಗುತ್ತದೆ. ಬೆಳಿಗ್ಗೆ 6 ರಿಂದ 8 ಗಂಟೆಯ ನಡುವೆ Testosterone ಅತ್ಯಂತ ಹೆಚ್ಚಿನ ಮಟ್ಟದಲ್ಲಿರುತ್ತದೆ. ಸಂಜೆ 7 ಗಂಟೆಯ ನಂತರ ಅದು ಶೇ.20 ರಿಂದ 30ರಷ್ಟು ಇಳಿಕೆಯಾಗುತ್ತದೆ. ಇದೇ ಕಾರಣಕ್ಕೆ ಪುರುಷರು ಬೆಳಿಗ್ಗೆ ಹೆಚ್ಚು ಉತ್ಸಾಹ ಮತ್ತು ಶಕ್ತಿಯಿಂದ ಇರುತ್ತಾರೆ, ಸಂಜೆ ವೇಳೆಗೆ ಸುಸ್ತು, ಬೇಸರ ಅಥವಾ ಕಿರಿಕಿರಿಯನ್ನು ಅನುಭವಿಸುತ್ತಾರೆ.
ಕೆಲವು ಅಧ್ಯಯನಗಳ ಪ್ರಕಾರ, ಪುರುಷರ Testosterone ಮಟ್ಟವು ತಿಂಗಳಿಗೊಮ್ಮೆ ಸ್ವಲ್ಪ ಮಟ್ಟಿಗೆ ಇಳಿಕೆಯಾಗುತ್ತದೆ ಎಂದು ಹೇಳುತ್ತವೆ. ಈ ಸಮಯದಲ್ಲಿ ಪುರುಷರು ಮಹಿಳೆಯರ PMS ರೀತಿಯಲ್ಲೇ ಕೆಲವು ಲಕ್ಷಣಗಳನ್ನು ತೋರಿಸುತ್ತಾರೆ. ಇದನ್ನೇ ತಜ್ಞರು ಇರಿಟಬಲ್ ಮೇಲ್ ಸಿಂಡ್ರೋಮ್ (IMS) ಎಂದು ಕರೆಯುತ್ತಾರೆ.
Hanuman Ansh Movie : ಹನುಮಾನ್ ಅಂಶ್ ಸಿನಿಮಾಗೆ ಅಮಿತ್ ಶಾ ಸಾಥ್! ₹2 ಕೋಟಿ ಸಿನಿಮಾ ₹347 ಕೋಟಿ ಗಳಿಸಿದ್ದು ನಿಜನಾ?
Irritable Male Syndrome (IMS) ನ ಲಕ್ಷಣಗಳೇನು?
ಈ ಅವಧಿಯಲ್ಲಿ ಪುರುಷರಲ್ಲಿ ಕಾರಣವಿಲ್ಲದೆ ಕಿರಿಕಿರಿ, ಸಿಟ್ಟು, ಮಾನಸಿಕ ಒತ್ತಡ, ಆತಂಕ, ಸುಸ್ತು, ಖಿನ್ನತೆ, ಏಕಾಗ್ರತೆ ಕೊರತೆ, ಹಸಿವಿನಲ್ಲಿ ಬದಲಾವಣೆ ಮತ್ತು ಲೈಂಗಿಕ ಆಸಕ್ತಿ ಕಡಿಮೆಯಾಗುವುದು ಕಂಡುಬರುತ್ತದೆ. ಇದು ಸಾಮಾನ್ಯವಾಗಿ 2 ರಿಂದ 3 ದಿನಗಳವರೆಗೆ ಇರುತ್ತದೆ. ಎಲ್ಲ ಪುರುಷರಿಗೂ ಒಂದೇ ರೀತಿ ಕಾಣಿಸಿಕೊಳ್ಳುವುದಿಲ್ಲ. ಕೆಲವರಲ್ಲಿ ತೀವ್ರವಾಗಿದ್ದರೆ, ಕೆಲವರಲ್ಲಿ ಅತ್ಯಂತ ಸೌಮ್ಯವಾಗಿರುತ್ತದೆ.
ಇದಕ್ಕೆ ಪ್ರಮುಖ ಕಾರಣವೆಂದರೆ ಆಧುನಿಕ ಜೀವನಶೈಲಿ ಎನ್ನಬಹುದು. ನಿರಂತರ ಒತ್ತಡದಿಂದಾಗಿ ಕಾರ್ಟಿಸೋಲ್ ಹಾರ್ಮೋನ್ ಹೆಚ್ಚಾಗಿ Testosterone ಅನ್ನು ಕಡಿಮೆ ಮಾಡುತ್ತದೆ. ನಿದ್ರಾಹೀನತೆ, ಅತಿಯಾದ ಮದ್ಯಪಾನ, ಧೂಮಪಾನ, ಬೊಜ್ಜು ಮತ್ತು ಜಂಕ್ ಫುಡ್ ಸೇವನೆಯು ಹಾರ್ಮೋನ್ ಅಸಮತೋಲನಕ್ಕೆ ನೇರ ಕಾರಣವಾಗಿದೆ. 30 ವರ್ಷದ ನಂತರ ಪುರುಷರಲ್ಲಿ ಪ್ರತಿ ವರ್ಷ ಶೇ.1 ರಷ್ಟು Testosterone ಮಟ್ಟ ನೈಸರ್ಗಿಕವಾಗಿ ಕಡಿಮೆಯಾಗುತ್ತಾ ಹೋಗುತ್ತದೆ.
Male Testosterone: ಹಾಗಾದರೆ ಇದನ್ನು ಹೇಗೆ ನಿಭಾಯಿಸಬೇಕು?
ಇದು ಯಾವುದೇ ಕಾಯಿಲೆಯಲ್ಲ, ದೇಹದ ಸಹಜ ಪ್ರಕ್ರಿಯೆ. ಇದಕ್ಕೆ ಭಯಪಡುವ ಅಗತ್ಯವಿಲ್ಲ. ಆದರೆ ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಂಡರೆ ಈ ಏರಿಳಿತವನ್ನು ಸುಲಭವಾಗಿ ನಿಭಾಯಿಸಬಹುದು.
- ಪ್ರತಿದಿನ 7-8 ಗಂಟೆಗಳ ಕಾಲ ಗಾಢ ನಿದ್ರೆ ಅತ್ಯಗತ್ಯ
- ಪ್ರತಿದಿನ ಕನಿಷ್ಠ 30 ನಿಮಿಷ ವ್ಯಾಯಾಮ, ಅದರಲ್ಲೂ ವೇಟ್ ಲಿಫ್ಟಿಂಗ್ ಮತ್ತು ಕಾರ್ಡಿಯೋ ಟೆಸ್ಟೋಸ್ಟೆರಾನ್ ಹೆಚ್ಚಿಸಲು ಸಹಕಾರಿ
- ಆಹಾರದಲ್ಲಿ ಮೊಟ್ಟೆ, ಮೀನು, ಬಾದಾಮಿ, ಪಾಲಕ್ ಸೊಪ್ಪು, ದಾಳಿಂಬೆ ಮತ್ತು ಅಶ್ವಗಂಧದಂತಹ ನೈಸರ್ಗಿಕ ಆಹಾರಗಳನ್ನು ಸೇರಿಸಿಕೊಳ್ಳಬೇಕು
- ಒತ್ತಡವನ್ನು ಕಡಿಮೆ ಮಾಡಲು ಯೋಗ ಮತ್ತು ಧ್ಯಾನ ಮೊರೆ ಹೋಗಬೇಕು
ಪುರುಷರು ತಮ್ಮ ಮಾನಸಿಕ ಮತ್ತು ದೈಹಿಕ ಬದಲಾವಣೆಗಳನ್ನು ಮುಚ್ಚಿಡದೆ ತಮ್ಮ ಸಂಗಾತಿ ಅಥವಾ ವೈದ್ಯರೊಂದಿಗೆ ಚರ್ಚಿಸುವುದು ಮುಖ್ಯ. ‘ಪುರುಷರಿಗೂ ಪಿರಿಯಡ್ಸ್’ ಎಂಬುದು ಟ್ರೋಲ್ಗಾಗಿ ಬಳಸುವ ಪದವಲ್ಲ, ಅದು ಪುರುಷರ ಹಾರ್ಮೋನ್ ಆರೋಗ್ಯದ ಬಗ್ಗೆ ಇರುವ ಅರಿವಿನ ಕೊರತೆಯನ್ನು ತೋರಿಸುತ್ತದೆ. Testosterone ಎಂಬುದು ಕೇವಲ ಲೈಂಗಿಕ ಹಾರ್ಮೋನ್ ಅಲ್ಲ, ಅದು ಪುರುಷನ ಶಕ್ತಿ, ಮನಸ್ಥಿತಿ ಮತ್ತು ಒಟ್ಟಾರೆ ಆರೋಗ್ಯದ ಆಧಾರ ಸ್ತಂಭವಾಗಿದೆ.

[…] […]