Gauri Mantra: ಗೌರಿ ಅಷ್ಟೋತ್ತರ ಶತನಾಮಾವಳಿ: 108 ದಿವ್ಯನಾಮಗಳ ಅರ್ಥ, ಮಹತ್ವ ಮತ್ತು ತಾತ್ಪರ್ಯ

ಗೌರಿ ಹಬ್ಬವು ಕರ್ನಾಟಕದ ಮನೆ ಮನೆಗಳಲ್ಲಿ ಅತ್ಯಂತ ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲ್ಪಡುವ ಹಬ್ಬ. ಗೌರಿ ಎಂದರೆ ಪಾರ್ವತಿ ದೇವಿಯ ಒಂದು ರೂಪ. ಗೌರವರ್ಣದವಳು, ಶುಭವನ್ನುಂಟು ಮಾಡುವವಳು ಎಂಬ ಕಾರಣಕ್ಕೆ ಆಕೆಗೆ ಗೌರಿ ಎಂಬ ಹೆಸರು ಬಂದಿದೆ. ಈ ದಿನ ಗೌರಿ ಅಷ್ಟೋತ್ತರ ಶತನಾಮಾವಳಿ (Gauri Mantra) ಯನ್ನು ಪಠಿಸುವುದು ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲಾಗಿದೆ.

ಗೌರಿಯನ್ನು ಪೂಜಿಸುವುದರಿಂದ ಸೌಭಾಗ್ಯ, ಮಂಗಳ, ದಾಂಪತ್ಯದಲ್ಲಿ ಅನ್ಯೋನ್ಯತೆ ಹೆಚ್ಚುತ್ತದೆ ಎಂಬ ನಂಬಿಕೆ ನಮ್ಮ ಹಿಂದೂ ಧರ್ಮದಲ್ಲಿ ನಂಬಲಾಗಿದೆ. 108 ನಾಮಗಳ (Gauri Mantra) ಪಠಣದಿಂದ ಏನೆಲ್ಲಾ ಫಲ ಸಿಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಗೌರಿ ಹಬ್ಬವು ಕರ್ನಾಟಕದ ಮನೆ ಮನೆಗಳಲ್ಲಿ ಅತ್ಯಂತ ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲ್ಪಡುವ ಹಬ್ಬ. ಗೌರಿ ಎಂದರೆ ಪಾರ್ವತಿ ದೇವಿಯ ಒಂದು ರೂಪ. ಗೌರವರ್ಣದವಳು, ಶುಭವನ್ನುಂಟು ಮಾಡುವವಳು ಎಂಬ ಕಾರಣಕ್ಕೆ ಆಕೆಗೆ ಗೌರಿ ಎಂಬ ಹೆಸರು ಬಂದಿದೆ. ಈ ದಿನ ಗೌರಿ ಅಷ್ಟೋತ್ತರ ಶತನಾಮಾವಳಿಯನ್ನು ಪಠಿಸುವುದು ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲಾಗಿದೆ.

Gauri Mantra
Gauri Ganesha

ಅಷ್ಟೋತ್ತರ ಶತನಾಮಾವಳಿ (Gauri Mantra) ಎಂದರೇನು?

ಅಷ್ಟೋತ್ತರ ಎಂದರೆ ನೂರ ಎಂಟು. ದೇವಿಯ 108 ದಿವ್ಯ ನಾಮಗಳನ್ನು ಒಳಗೊಂಡಿರುವ ಸ್ತೋತ್ರವೇ ಅಷ್ಟೋತ್ತರ ಶತನಾಮಾವಳಿ. ಪ್ರತಿಯೊಂದು ನಾಮವೂ ದೇವಿಯ ಒಂದು ಗುಣ, ಶಕ್ತಿ ಮತ್ತು ಲೀಲೆಯನ್ನು ವರ್ಣಿಸುತ್ತದೆ.

ಅದರಲ್ಲಿ ಗೌರಿ ದೇವಿಯ 8 ಪ್ರಮುಖ ನಾಮಗಳ ಅರ್ಥ ಮತ್ತು ತಾತ್ಪರ್ಯವನ್ನು ಗಮನಿಸುವುದಾದರೆ –
1. ಓಂ ಶಿವಾಯೈ ನಮಃ – ಮಂಗಳ ಸ್ವರೂಪಿಣಿಯಾದವಳು. ಶಿವನಿಗೆ ಶುಭವನ್ನು ನೀಡುವವಳು.
2. ಓಂ ಗೌರ್ಯೈ ನಮಃ – ಗೌರವರ್ಣದ ಕಾಂತಿಯನ್ನು ಹೊಂದಿರುವವಳು. ಶ್ವೇತ, ಶುಭ್ರತೆಯ ಪ್ರತೀಕ.
3. ಓಂ ಶಾಂಭವ್ಯೈ ನಮಃ – ಶಂಭುವಿನ ಪತ್ನಿ, ಜಗತ್ತಿಗೆ ಶಾಂತಿಯನ್ನು ನೀಡುವವಳು.
4. ಓಂ ಸರ್ವಮಂಗಳಾಯೈ ನಮಃ – ಸಕಲ ಮಂಗಳಗಳನ್ನು ನೀಡುವವಳು. ಮದುವೆಯಾದ ಮಹಿಳೆಯರು ಈ ನಾಮವನ್ನು ಪಠಿಸಿದರೆ ಅಖಂಡ ಸೌಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
5. ಓಂ ಅಪರ್ಣಾಯೈ ನಮಃ – ತಪಸ್ಸಿನ ಸಮಯದಲ್ಲಿ ಎಲೆಯನ್ನೂ ತ್ಯಜಿಸಿದವಳು. ಕಠಿಣ ತಪಸ್ಸಿನ ಪ್ರತೀಕ.
6. ಓಂ ಪಾರ್ವತ್ಯೈ ನಮಃ – ಪರ್ವತರಾಜ ಹಿಮವಂತನ ಮಗಳು.
7. ಓಂ ಜಗನ್ಮಾತ್ರೇ ನಮಃ – ಇಡೀ ಜಗತ್ತಿಗೆ ತಾಯಿಯಾದವಳು.
8. ಓಂ ಅನ್ನಪೂರ್ಣಾಯೈ ನಮಃ – ಅನ್ನವನ್ನು ನೀಡಿ ಜಗತ್ತನ್ನು ಪೊರೆಯುವವಳು.ಈ ರೀತಿ ಪ್ರತಿ ನಾಮವು ದೇವಿಯ ಆದಿಶಕ್ತಿ, ಜ್ಞಾನ, ಐಶ್ವರ್ಯ, ಧೈರ್ಯ ಸ್ವರೂಪವನ್ನು ತಿಳಿಸುತ್ತದೆ.

Gauri Mantra ಪಠಣದ ಮಹತ್ವ ಮತ್ತು ಫಲ:

ಗೌರಿ ಅಷ್ಟೋತ್ತರವನ್ನು ಶ್ರದ್ಧೆಯಿಂದ ಪಠಿಸುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ನಮ್ಮ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಅವಿವಾಹಿತ ಹೆಣ್ಣುಮಕ್ಕಳು ಉತ್ತಮ ವರನನ್ನು ಪಡೆಯಲು, ಸುಮಂಗಲಿಯರು ತಮ್ಮ ಪತಿಯ ಆಯುರಾರೋಗ್ಯಕ್ಕಾಗಿ ಮತ್ತು ದಾಂಪತ್ಯದಲ್ಲಿ ಸುಖ, ಶಾಂತಿ, ಅನ್ಯೋನ್ಯತೆ ಹೆಚ್ಚಲು ಇದನ್ನು ಪಠಿಸುತ್ತಾರೆ.

ಈ 108 ನಾಮಗಳನ್ನು ಅರಿಶಿನ, ಕುಂಕುಮ ಅಥವಾ ಹೂವುಗಳಿಂದ ಅರ್ಚನೆ ಮಾಡುತ್ತಾ ಹೇಳುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ದೂರವಾಗಿ, ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಮಾನಸಿಕ ನೆಮ್ಮದಿ, ಆತ್ಮವಿಶ್ವಾಸ ಮತ್ತು ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ.

ಗೌರಿ ಅಷ್ಟೋತ್ತರವು ಕೇವಲ ಒಂದು ಸ್ತೋತ್ರವಲ್ಲ, ಅದು ಸ್ತ್ರೀ ಶಕ್ತಿಯ ಆರಾಧನೆ. ಪ್ರತಿಯೊಂದು ಹೆಣ್ಣಿನಲ್ಲೂ ಅಡಗಿರುವ ಗೌರಿಯ ಅಂಶವನ್ನು ಜಾಗೃತಗೊಳಿಸುವ ಮಂತ್ರ. ಭಕ್ತಿಯಿಂದ ಒಂದು ನಾಮವನ್ನು ಹೇಳಿದರೂ ಸಾಕು, ದೇವಿಯು ಪ್ರಸನ್ನಳಾಗಿ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾಳೆ ಎಂಬುದು ಭಕ್ತರ ದೃಢ ನಂಬಿಕೆ. ಆದ್ದರಿಂದ ಈ ಗೌರಿ ಹಬ್ಬದಂದು ಕುಟುಂಬದೊಂದಿಗೆ ಕುಳಿತು ಗೌರಿ ಅಷ್ಟೋತ್ತರ ಶತನಾಮಾವಳಿಯನ್ನು ಪಠಿಸಿ, ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.

Blue Zones: 100 ವರ್ಷ ದಾಟಿದರೂ ಚುರುಕಿನ ಬದುಕು! ಜಗತ್ತಿನ ಈ 5 ಪ್ರದೇಶಗಳ ಜನರ ದೀರ್ಘಾಯುಷ್ಯದ ಹಿಂದಿದೆ ಈ ರಹಸ್ಯ

ಗೌರಿ ಅಷ್ಟೋತ್ತರ ಶತನಾಮಾವಳಿ| Gowri Ashtottara Shatanamavali (Gauri Mantra) Lyrics In Kannada:

ಓಂ ಶಿವಾಯೈ ನಮಃ ।
ಓಂ ಶ್ರೀಮಹಾವಿದ್ಯಾಯೈ ನಮಃ ।
ಓಂ ಶ್ರೀಮನ್ಮಕುಟಮಂಡಿತಾಯೈ ನಮಃ ।
ಓಂ ಕಲ್ಯಾಣ್ಯೈ ನಮಃ ।

ಓಂ ಕರುಣಾರಸಸಾಗರಾಯೈ ನಮಃ ।
ಓಂ ಕಮಲಾರಾಧ್ಯಾಯೈ ನಮಃ ।
ಓಂ ಕಲಿಪ್ರಭೃತಿಸಂಸೇವಾಯೈ ನಮಃ ।
ಓಂ ಕಮಲಾಸನಸಂಸ್ತುತಾಯೈ ನಮಃ ।

ಓಂ ಅಂಬಿಕಾಯೈ ನಮಃ ।
ಓಂ ಅನೇಕಸೌಭಾಗ್ಯದಾತ್ರ್ಯೈ ನಮಃ |10|

ಓಂ ಆನಂದವಿಗ್ರಹಾಯೈ ನಮಃ ।
ಓಂ ಈಷಣತ್ರಯನಿರ್ಮುಕ್ತಾಯೈ ನಮಃ ।
ಓಂ ಹೃತ್ಸರೋರುವಾಸಿನ್ಯೈ ನಮಃ ।
ಓಂ ಆದ್ಯಂತರಹಿತಾಯೈ ನಮಃ ।

ಓಂ ಅನೇಕಕೋಟಿಭಾಸ್ಕರವಲ್ಲಭಾಯೈ ನಮಃ ।
ಓಂ ಈಶರೋತ್ಸಂಗನಿಲಯಾಯೈ ನಮಃ ।
ಓಂ ಈತಿಭಾದಾವಿನಾಶಿನ್ಯೈ ನಮಃ ।
ಓಂ ಇಂದಿರಾರತಿಸಂಸೇವ್ಯಾಯೈ ನಮಃ ।

ಓಂ ಈಶ್ವರಾರ್ಧಶರೀರಿಣ್ಯೈ ನಮಃ ।
ಓಂ ಲಕ್ಷ್ಯಾರ್ಥರೂಪಾಯೈ ನಮಃ |20|

ಓಂ ಲಕ್ಷ್ಮೀಶಬ್ರಹ್ಮೇಶಾಮರ ಪೂಜಿತಾಯೈ ನಮಃ ।
ಓಂ ಉತ್ಪತ್ಯಾದಿವಿನಿರ್ಮುಕ್ತಾಯೈ ನಮಃ ।
ಓಂ ವಿದ್ಯಾಪ್ರತಿಪಾದಿನ್ಯೈ ನಮಃ ।
ಓಂ ಊರ್ಧ್ವಲೋಕಪ್ರದಾತ್ರ್ಯೈ ನಮಃ ।

ಓಂ ಹಾನಿವೃದ್ಧಿವಿವರ್ಜಿತಾಯೈ ನಮಃ ।
ಓಂ ಸರ್ವೇಶ್ವರ್ಯೈ ನಮಃ ।
ಓಂ ಸರ್ವಲಭ್ಯಾಯೈ ನಮಃ ।
ಓಂ ಗುರುಮೂರ್ತಿಸ್ವರೂಪಿಣ್ಯೈ ನಮಃ ।

ಓಂ ಸಮಸ್ತಪ್ರಾಣಿನಿಲಯಾಯೈ ನಮಃ ।
ಓಂ ಸರ್ವಮಂಗಳಾಯೈ ನಮಃ |30|

ಓಂ ಸರ್ವಲೋಕಸುಂದರ್ಯೈ ನಮಃ ।
ಓಂ ಕಾಮಾಕ್ಷ್ಯೈ ನಮಃ ।
ಓಂ ಕಾಮದಾತ್ರ್ಯೈ ನಮಃ ।
ಓಂ ಕಾಮೇಶಾಂಕನಿವಾಸಿನ್ಯೈ ನಮಃ ।

ಓಂ ಹರಾರ್ಧದೇಹಾಯೈ ನಮಃ ।
ಓಂ ಕಲ್ಹಾರಭೂಷಿತಾಯೈ ನಮಃ ।
ಓಂ ಹರಿಲೋಚನಾಯೈ ನಮಃ ।
ಓಂ ಲಲಿತಾಯೈ ನಮಃ ।

ಓಂ ಲಾಕಿನೀಸೇವ್ಯಾಯೈ ನಮಃ ।
ಓಂ ಲಬ್ಧೈಶ್ವರ್ಯಪ್ರವರ್ತಿನ್ಯೈ ನಮಃ |40|

ಓಂ ಹ್ರೀಂಕಾರಪದ್ಮನಿಲಯಾಯೈ ನಮಃ ।
ಓಂ ಹ್ರೀಂಕಾರಾರ್ಣವಕೌಸ್ತುಭಾಯೈ ನಮಃ ।
ಓಂ ಸಮಸ್ತಲೋಕಜನನ್ಯೈ ನಮಃ ।
ಓಂ ಸರ್ವಭೂತೇಶ್ವರ್ಯೈ ನಮಃ ।

ಓಂ ಕರೀಂದ್ರರೂಢಸಂಸೇವ್ಯಾಯೈ ನಮಃ ।
ಓಂ ಕಮಲೇಶಸಹೋದರ್ಯೈ ನಮಃ ।
ಓಂ ಕಷ್ಟದಾರಿದ್ರ್ಯಶಮನ್ಯೈ ನಮಃ ।
ಓಂ ಲಕ್ಷಗಾಘೋಷಾಂಬಾಯೈ ನಮಃ ।

ಓಂ ಹ್ರೀಂಕಾರ ಬಿಂದುಲಕ್ಷಿತಾಯೈ ನಮಃ ।
ಓಂ ಏಕಾಕ್ಷರ್ಯೈ ನಮಃ |50|

ಓಂ ಏಕರೂಪಾಯೈ ನಮಃ ।
ಓಂ ಐಶ್ವರ್ಯಫಲದಾಯಿನ್ಯೈ ನಮಃ ।
ಓಂ ಓಂಕಾರವರ್ಣನಿಲಯಾಯೈ ನಮಃ ।
ಓಂ ಔದಾರ್ಯಾದಿಪ್ರದಾಯೈ ನಮಃ ।

ಓಂ ಗಾಯತ್ರ್ಯೈ ನಮಃ ।
ಓಂ ಗಿರಿಜಾಕನ್ಯಾಯೈ ನಮಃ ।
ಓಂ ಗೂಢಾರ್ಥಬೋಧಿನ್ಯೈ ನಮಃ ।
ಓಂ ಚಂದ್ರಶೇಕರರ್ಧಾಂಗ್ಯೈ ನಮಃ ।

ಓಂ ಚೂಡಾಮಣಿವಿಭೂಷಿತಾಯೈ ನಮಃ ।
ಓಂ ಜಾಜಿಚಂಪಕಪುನ್ನಾಗಕೇತಕೀಕುಸುಮಾರ್ಚಿತಾಯೈ ನಮಃ |60|

ಓಂ ತನುಮಧ್ಯಾಯೈ ನಮಃ ।
ಓಂ ದಾನವೇಂದ್ರಸಂಹೃತ್ಯೈ ನಮಃ ।
ಓಂ ದೀನರಕ್ಷಿಣ್ಯೈ ನಮಃ ।
ಓಂ ಸ್ವಧರ್ಮಪರಸಂಸೇವ್ಯಾಯೈ ನಮಃ ।

ಓಂ ಧನಧಾನ್ಯಾಭಿವೃದ್ಧಿದಾಯೈ ನಮಃ ।
ಓಂ ನಾಮರೂಪವಿವರ್ಜಿತಾಯೈ ನಮಃ ।
ಓಂ ಅಪರಾಜಿತಾಯೈ ನಮಃ ।
ಓಂ ಪರಮಾನಂದರೂಪಾಯೈ ನಮಃ |70|

ಓಂ ಪಾಶಾಂಕುಶಭಯಾವರವಿಲಸತ್ಕರಪಲ್ಲವಾಯೈ ನಮಃ ।
ಓಂ ಪುರಾಣಪುರುಷಸೇವ್ಯಾಯೈ ನಮಃ ।
ಓಂ ಪುಷ್ಪಮಾಲಾವಿರಾಜಿತಾಯೈ ನಮಃ ।
ಓಂ ಫಣೀಂದ್ರರತ್ನಶೋಭಾಢ್ಯಾಯೈ ನಮಃ ।

ಓಂ ಬದರೀವನವಾಸಿನ್ಯೈ ನಮಃ ।
ಓಂ ಬಾಲಾಯೈ ನಮಃ ।
ಓಂ ವಿಕ್ರಮಸಂಹೃಷ್ಟಾಯೈ ನಮಃ ।
ಓಂ ಬಿಂಬೋಷ್ಟ್ಯೆೈ ನಮಃ ।
ಓಂ ಬಿಲ್ವಪೂಜಿತಾಯೈ ನಮಃ |80|

ಓಂ ಬಿಂದುಚಕ್ರೈಕನಿಲಯಾಯೈ ನಮಃ ।
ಓಂ ಭವಾರಣ್ಯದವಾನಲಾಯೈ ನಮಃ ।
ಓಂ ಭವಾನ್ಯೈ ನಮಃ ।
ಓಂ ಭವರೋಗ್ಯೈ ನಮಃ ।

ಓಂ ಭಾವದೇಹಾರ್ಧಧಾರಿಣ್ಯೈ ನಮಃ ।
ಓಂ ಭಕ್ತಸೇವ್ಯಾಯೈ ನಮಃ ।
ಓಂ ಭಕ್ತಗಣ್ಯಾಯೈ ನಮಃ ।
ಓಂ ಭಾಗ್ಯವೃದ್ಧಿಪ್ರದಾಯಿನ್ಯೈ ನಮಃ ।

ಓಂ ಭೂತಿದಾತ್ರ್ಯೈ ನಮಃ ।
ಓಂ ಭೈರವಾದಿಸಂವೃತಾಯೈ ನಮಃ ।
ಓಂ ಶ್ರೀ ಮಹೇಶ್ವರ್ಯೈ ನಮಃ |90|

ಓಂ ಸರ್ವೇಷ್ಟಾಯೈ ನಮಃ ।
ಓಂ ಶ್ರೀ ಮಹಾದೇವ್ಯೈ ನಮಃ ।
ಓಂ ತ್ರಿಪುರಸೌಂದರ್ಯೈ ನಮಃ ।
ಓಂ ಮುಕ್ತಿದಾತ್ರೇ ನಮಃ ।

ಓಂ ರಾಜರಾಜೇಶ್ವರ್ಯೈ ನಮಃ ।
ಓಂ ವಿದ್ಯಾಪ್ರದಾಯಿನ್ಯೈ ನಮಃ ।
ಓಂ ಭಾವರೂಪಾಯೈ ನಮಃ ।
ಓಂ ವಿಶ್ವಮೋಹಿನ್ಯೈ ನಮಃ ।

ಓಂ ಶಾಂಕರ್ಯೈ ನಮಃ ।
ಓಂ ಶತೃಸಂಹತ್ರ್ಯೈ ನಮಃ |100|

ಓಂ ತ್ರಿಪುರಾಯೈ ನಮಃ ।
ಓಂ ತ್ರಿಪುರೇಶ್ವರ್ಯೈ ನಮಃ ।
ಓಂ ಶ್ರೀ ಶಾರದಾಸಂಸೇವ್ಯಾಯೈ ನಮಃ ।
ಓಂ ಮದ್ಸಿಂಹಾಸನೇಶ್ವರ್ಯೈ ನಮಃ ।

ಓಂ ಶ್ರೀ ಮನ್ಮುನೀಂದ್ರ ಸಂಸೇವ್ಯಾಯೈ ನಮಃ ।
ಓಂ ಮನ್ನಮರನಾಯಿಕಾಯೈ ನಮಃ ।
ಓಂ ಶ್ರೀ ರಾಜರಾಜೇಶ್ವರ್ಯೈ ನಮಃ ।
ಓಂ ಶ್ರೀ ಸ್ವರ್ಣಗೌರ್ಯೈ ನಮಃ |108|

।।ಶ್ರೀ ಗೌರಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣಂ।।