Mahalaya Amavasya: ಪಿತೃಮೋಕ್ಷದ ಮಹಾದಿನ ಮಹಾಲಯ ಅಮಾವಾಸ್ಯೆ: ಇದು ಶುಭವೋ? ಅಶುಭವೋ? ಗರ್ಭಿಣಿಯರು ಮಾಡಬೇಕಾದ್ದು ಏನು?

ಪಿತೃಪಕ್ಷದ ಅಂತ್ಯ (Mahalaya Amavasya) ದ ದಿನವೇ ನವರಾತ್ರಿಯ ಆರಂಭದ ಸಂಕೇತ, ಪೂರ್ವಜರಿಗೆ ತರ್ಪಣ ನೀಡಿದರೆ ಸಕಲ ದೋಷ ನಿವಾರಣೆಯಾಗುತ್ತದೆ ಎಂಬುದು ನಂಬಿಕೆ - ಈ ದಿನದ ಆಚರಣೆ, ನಿಷೇಧ ಮತ್ತು ವೈಜ್ಞಾನಿಕ ಮಹತ್ವದ ಸಂಪೂರ್ಣ ಮಾಹಿತಿ

Mahalaya Amavasya Pitru Paksha
Image Credit: Utsav.gov.in

ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಮಾಸದ ಕೃಷ್ಣಪಕ್ಷದ ಕೊನೆಯ ದಿನವೇ ಮಹಾಲಯ ಅಮಾವಾಸ್ಯೆ (Mahalaya Amavasya) ಅಥವಾ ಸರ್ವಪಿತೃ ಅಮಾವಾಸ್ಯೆ. ಇದು ಕೇವಲ ಒಂದು ಅಮಾವಾಸ್ಯೆಯಲ್ಲ, ಇದು 15 ದಿನಗಳ ಪಿತೃಪಕ್ಷದ ಅತ್ಯಂತ ಪವಿತ್ರವಾದ ಅಂತಿಮ ದಿನ. ಈ ದಿನದಂದೇ ಪಿತೃಗಳು ಭೂಲೋಕದಿಂದ ಪಿತೃಲೋಕಕ್ಕೆ ಮರಳುತ್ತಾರೆ ಎಂಬ ನಂಬಿಕೆಯಿದೆ. ಹಾಗಾಗಿ ಈ ದಿನಕ್ಕೆ ಮಹತ್ವವೇ ಹೆಚ್ಚು.

ಮಹಾಲಯ ಅಮಾವಾಸ್ಯೆ (Mahalaya Amavasya) ಎಂದರೇನು? ಧಾರ್ಮಿಕ ಮಹತ್ವವೇನು? 

‘ಮಹಾಲಯ’ ಎಂದರೆ ‘ಮಹಾ ಆಲಯ’ ಅಂದರೆ ದೊಡ್ಡ ಮನೆ ಅಥವಾ ಪವಿತ್ರ ಸ್ಥಳ ಎಂದು ಅರ್ಥ. ನಮ್ಮ ಪೂರ್ವಜರು ಈ 15 ದಿನಗಳಲ್ಲಿ ಭೂಮಿಗೆ ಬಂದು ತಮ್ಮ ವಂಶಸ್ಥರ ಕೈಯಿಂದ ತರ್ಪಣ, ಪಿಂಡದಾನವನ್ನು ಸ್ವೀಕರಿಸಲು ಕಾಯುತ್ತಾರೆ ಎನ್ನುತ್ತವೆ ಗರುಡ ಪುರಾಣ ಮತ್ತು ಅಗ್ನಿ ಪುರಾಣಗಳು. ಮಹಾಲಯ ಅಮಾವಾಸ್ಯೆಯಂದು ಯಾರ ಪೂರ್ವಜರ ತಿಥಿ ಗೊತ್ತಿಲ್ಲವೋ, ಯಾರು ಸಾವಿನ ದಿನಾಂಕ ಮರೆತಿದ್ದಾರೋ, ಅಥವಾ ಯಾರಿಗೂ ಪಿಂಡದಾನ ಸಿಗದೇ ಇರುವ ಆತ್ಮಗಳಿಗೆ ಈ ದಿನ ಸಾಮೂಹಿಕವಾಗಿ ತರ್ಪಣ ಬಿಡಲಾಗುತ್ತದೆ. ಆದ್ದರಿಂದ ಇದನ್ನು ಸರ್ವಪಿತೃ ಅಮಾವಾಸ್ಯೆ (Mahalaya Amavasya) ಎಂದೂ ಕರೆಯುತ್ತಾರೆ.

ಮಹಾಭಾರತದ ಕಥೆಯ ಪ್ರಕಾರ, ದಾನಶೂರ ಕರ್ಣ (Karna) ನು ಮರಣದ ನಂತರ ಸ್ವರ್ಗಕ್ಕೆ ಹೋದಾಗ ಆಹಾರದ ಬದಲು ಚಿನ್ನ, ಬೆಳ್ಳಿ ಸಿಕ್ಕಿತಂತೆ. ಆಗ ಅವನು ಇಂದ್ರನಲ್ಲಿ ಕಾರಣ ಕೇಳಿದಾಗ, ನೀನು ಜೀವನಪೂರ್ತಿ ಚಿನ್ನ-ಬೆಳ್ಳಿ ದಾನ ಮಾಡಿದ್ದೀಯೆ, ಆದರೆ ಅನ್ನದಾನ ಮತ್ತು ಪಿತೃಗಳಿಗೆ ತರ್ಪಣ ನೀಡಿಲ್ಲ ಎಂದನಂತೆ. ಆಗ ಕರ್ಣನು 15 ದಿನಗಳ ಕಾಲ ಮತ್ತೆ ಭೂಮಿಗೆ ಬಂದು ತನ್ನ ಪಿತೃಗಳಿಗೆ ತರ್ಪಣ ನೀಡಿ ಅನ್ನದಾನ ಮಾಡಿದನಂತೆ. ಆ 15 ದಿನಗಳೇ ಪಿತೃಪಕ್ಷ ಎಂಬುದು ಪ್ರತೀತಿ.

Mahalaya Amavasya: ಇದು ಶುಭವೋ ಅಥವಾ ಅಶುಭವೋ?

ಇದರ ಬಗ್ಗೆ ಅನೇಕರಿಗೆ ಗೊಂದಲವಿದೆ. ಮಹಾಲಯ ಅಮಾವಾಸ್ಯೆ ಅಶುಭವಲ್ಲ, ಅದು ಅತಿ ಶುಭದ ದಿನ. ಆದರೆ ಈ ದಿನ ಹೊಸ ಕಾರ್ಯ, ಗೃಹಪ್ರವೇಶ, ಮದುವೆ, ವಾಹನ ಖರೀದಿ, ಹೊಸ ಬಟ್ಟೆ ಖರೀದಿ, ಕ್ಷೌರದಂತಹ ಶುಭ ಕಾರ್ಯಗಳನ್ನು ಮಾಡಬಾರದು. ಏಕೆಂದರೆ ಇದು ಪಿತೃಗಳಿಗಾಗಿ ಮೀಸಲಾದ ದಿನ. ಈ ದಿನ ಸಂಪೂರ್ಣವಾಗಿ ಪಿತೃಗಳ ಆರಾಧನೆಗೆ ಮೀಸಲಿಡಬೇಕು. ಪಿತೃಗಳನ್ನು ಸಂತೃಪ್ತಿಗೊಳಿಸಿದರೆ ದೇವತೆಗಳು ತಾನಾಗಿಯೇ ಸಂತುಷ್ಟರಾಗುತ್ತಾರೆ ಎಂಬ ನಂಬಿಕೆ ಇದೆ.

ಇದೇ ದಿನ ಮಧ್ಯಾಹ್ನದ ನಂತರ ದೇವಿ ಪಕ್ಷ ಆರಂಭವಾಗುತ್ತದೆ. ಅಂದರೆ ನವರಾತ್ರಿಯ ಕಳಶ ಸ್ಥಾಪನೆಗೆ ಸಿದ್ಧತೆ ನಡೆಯುತ್ತದೆ. ಹೀಗಾಗಿ ಈ ದಿನವು ಪಿತೃ ಮತ್ತು ದೇವಿ ಆರಾಧನೆಯ ಸಂಗಮವಾಗಿದೆ. ಒಂದು ಮುಗಿದು ಇನ್ನೊಂದು ಶುಭದ ಆರಂಭವಾಗುವ ಸಂಧಿಕಾಲ.

ಮಹಾಲಯ ಅಮಾವಾಸ್ಯೆ (Mahalaya Amavasya) ಯಂದು ಏನು ಮಾಡಬೇಕು?

ಈ ದಿನ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ಮನೆಯ ಹಿರಿಯರನ್ನು ಸ್ಮರಿಸಬೇಕು.ಪ ವಿತ್ರ ನದಿ, ಕೆರೆ ಅಥವಾ ಮನೆಯಲ್ಲಿಯೇ ದಕ್ಷಿಣಕ್ಕೆ ಮುಖ ಮಾಡಿ ಎಳ್ಳು, ನೀರು, ಹಾಲಿನಿಂದ ಪಿತೃಗಳಿಗೆ ತರ್ಪಣ ನೀಡಬೇಕು.ಬ್ರಾಹ್ಮಣರಿಗೆ ಅಥವಾ ಬಡವರಿಗೆ ಅನ್ನದಾನ, ವಸ್ತ್ರದಾನ, ದಕ್ಷಿಣೆ ನೀಡಬೇಕು. ಕಾಗೆ, ಹಸು, ನಾಯಿಗೆ ಆಹಾರ ನೀಡುವುದರಿಂದ ಪಿತೃಗಳು ಸಂತುಷ್ಟರಾಗುತ್ತಾರೆ ಎಂದು ಹೇಳಲಾಗುತ್ತದೆ.

ಈ ದಿನ ಮಾಂಸಾಹಾರ, ಮದ್ಯಪಾನ, ಈರುಳ್ಳಿ-ಬೆಳ್ಳುಳ್ಳಿ ಇರುವ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಸಾತ್ವಿಕ ಆಹಾರ ಸೇವಿಸಬೇಕು. ಮನೆಯಲ್ಲಿ ದೀಪವನ್ನು ಬೆಳಗಿ ಪಿತೃ ಸ್ತೋತ್ರ, ಗರುಡ ಪುರಾಣ ಪಠಣ ಮಾಡಬೇಕು.

Gauri Mantra: ಗೌರಿ ಅಷ್ಟೋತ್ತರ ಶತನಾಮಾವಳಿ: 108 ದಿವ್ಯನಾಮಗಳ ಅರ್ಥ, ಮಹತ್ವ ಮತ್ತು ತಾತ್ಪರ್ಯ

ಗರ್ಭಿಣಿ ಮಹಿಳೆಯರು ಏನು ಮಾಡಬೇಕು? ಏನು ಮಾಡಬಾರದು?

ಮಹಾಲಯ ಅಮಾವಾಸ್ಯೆ (Mahalaya Amavasya) ಗರ್ಭಿಣಿ ಮಹಿಳೆಯರಿಗೆ ಅಶುಭವಲ್ಲ, ಆದರೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ವಾಡಿಕೆ.

  1. ಗರ್ಭಿಣಿಯರು ನದಿ ತೀರಕ್ಕೆ ಹೋಗಿ ತರ್ಪಣ ನೀಡುವುದು ಅಥವಾ ಪಿಂಡದಾನದಂತಹ ಕಾರ್ಯಗಳಲ್ಲಿ ನೇರವಾಗಿ ಭಾಗವಹಿಸಬಾರದು. ಅವರ ಬದಲು ಪತಿ ಅಥವಾ ಮನೆಯ ಹಿರಿಯರು ಆ ಕಾರ್ಯವನ್ನು ಮಾಡಬೇಕು.
  2. ಈ ದಿನ ಮಧ್ಯಾಹ್ನದ ಸಮಯದಲ್ಲಿ ಗರ್ಭಿಣಿಯರು ಮನೆಯಿಂದ ಹೊರಗೆ ಹೋಗಬಾರದು, ವಿಶೇಷವಾಗಿ ಸ್ಮಶಾನ, ಬೋಳು ಪ್ರದೇಶ ಅಥವಾ ಹಾಳು ಮನೆಗಳ ಬಳಿ ಹೋಗಬಾರದು ಎಂಬುದು ಹಿರಿಯರ ನಂಬಿಕೆ. ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ – ಅಮಾವಾಸ್ಯೆಯಂದು ಗುರುತ್ವಾಕರ್ಷಣ ಶಕ್ತಿ ಹೆಚ್ಚಾಗಿರುತ್ತದೆ, ಇದು ದೇಹದ ಮೇಲೆ ಪ್ರಭಾವ ಬೀರಬಹುದು.
  3. ಗರ್ಭಿಣಿಯರು ಈ ದಿನ ಮನಸ್ಸಿನಲ್ಲಿ ಪಿತೃಗಳನ್ನು ಸ್ಮರಿಸಿ, ಮನೆಯಲ್ಲಿಯೇ ದೇವರ ಹೆಸರು ಹೇಳಿಕೊಂಡು ದಾನದ ವಸ್ತುಗಳನ್ನು ಸಿದ್ಧಪಡಿಸಿಕೊಡಬಹುದು.
  4. ಕಪ್ಪು ಬಟ್ಟೆ ಧರಿಸಬಾರದು, ಕೂದಲು ಬಿಟ್ಟುಕೊಂಡು ಇರಬಾರದು ಮತ್ತು ಒಬ್ಬಂಟಿಯಾಗಿ ಕತ್ತಲೆಯಲ್ಲಿ ಇರಬಾರದು.
  5. ಅತ್ಯಂತ ಮುಖ್ಯವಾಗಿ, ಯಾವುದೇ ಭಯ, ಆತಂಕ ಪಡುವ ಅಗತ್ಯವಿಲ್ಲ. ಪಿತೃಗಳು ಎಂದಿಗೂ ತಮ್ಮ ಮಕ್ಕಳಿಗೆ ಕೇಡು ಬಯಸುವುದಿಲ್ಲ. ಅವರು ಆಶೀರ್ವಾದ ಮಾಡುವವರೇ ಹೊರತು ಹೆದರಿಸುವವರಲ್ಲ.

ಮಹಾಲಯ ಅಮಾವಾಸ್ಯೆ (Mahalaya Amavasya) ಯು ನಮ್ಮನ್ನು ನಮ್ಮ ಬೇರುಗಳೊಂದಿಗೆ ಬೆಸೆಯುವ ದಿನ. ನಮ್ಮ ಹಿಂದಿನ ಪೀಳಿಗೆಯ ತ್ಯಾಗವನ್ನು ಸ್ಮರಿಸಿ, ಅವರಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ಅವಕಾಶ. ಪಿತೃಗಳ ಆಶೀರ್ವಾದವಿದ್ದರೆ ಮನೆಯಲ್ಲಿ ಸಂತಾನ, ಸಂಪತ್ತು, ಆರೋಗ್ಯ ಎಲ್ಲವೂ ವೃದ್ಧಿಯಾಗುತ್ತದೆ ಎಂಬುದು ನಂಬಿಕೆ.