EKA-1 AI Model India: ಭಾರತದ ಸ್ವದೇಶಿ AI ಕ್ರಾಂತಿ: EKA-1, ಧೀರ್ 2B ಮತ್ತು 5B ಲಾಂಚ್; ಇಂಟರ್ನೆಟ್ ಇಲ್ಲದೇ ಫೋನ್‌ನಲ್ಲೇ ಕೆಲಸ ಮಾಡುವ AI

ChatGPT, Gemini ಗೆ ಪರ್ಯಾಯವಾಗಿ ಬೆಂಗಳೂರಿನ 2 ಸ್ಟಾರ್ಟಪ್‌ಗಳಿಂದ ತಯಾರಾದ 3 AI ಮಾಡೆಲ್‌ಗಳು; ಕನ್ನಡ ಸೇರಿ 22 ಭಾರತೀಯ ಭಾಷೆಗಳಲ್ಲಿ ಕೆಲಸ, ಬ್ಯಾಂಕಿಂಗ್-ರಕ್ಷಣಾ ಕ್ಷೇತ್ರಕ್ಕೆ ಸುರಕ್ಷಿತ (EKA-1 AI Model India) 

EKA-1 AI Model India
ಭಾರತದ ಸ್ವದೇಶಿ AI ಮಾಡೆಲ್ EKA-1, ಧೀರ್ 2B ಮತ್ತು 5B – IndiaAI Mission ಲಾಂಚ್

ನವದೆಹಲಿ: ಭಾರತವು AI ಕ್ಷೇತ್ರದಲ್ಲಿ ವಿದೇಶಿ ಕಂಪನಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮಹತ್ವದ ಹೆಜ್ಜೆ ಇಟ್ಟಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ನವೆಂಬರ್ 3 ರಂದು IndiaAI Mission ಅಡಿಯಲ್ಲಿ 3 ಸ್ವದೇಶಿ AI ಫೌಂಡೇಶನ್ ಮಾಡೆಲ್‌ಗಳನ್ನು ಲಾಂಚ್ ಮಾಡಿದೆ – EKA-1, ಧೀರ್ 2B ಮತ್ತು ಧೀರ್ 5B.

ಇವುಗಳನ್ನು ಬೆಂಗಳೂರು ಮೂಲದ Soket Labs (ಸೋಕೆಟ್ AI) ಮತ್ತು ZenteiQ AiTech ಕಂಪನಿಗಳು ಅಭಿವೃದ್ಧಿಪಡಿಸಿವೆ. MeitY ಕಾರ್ಯದರ್ಶಿ ಎಸ್. ಕೃಷ್ಣನ್ ಅವರು ನವದೆಹಲಿಯಲ್ಲಿ ಈ ಮಾಡೆಲ್‌ಗಳನ್ನು ಬಿಡುಗಡೆ ಮಾಡಿದರು. (EKA-1 AI Model India)

1. EKA-1 – ಭಾರತದ ಅತಿದೊಡ್ಡ AI ಮಾಡೆಲ್:

Soket Labs ತಯಾರಿಸಿದ EKA-1 ನಲ್ಲಿ 26.3 ಬಿಲಿಯನ್ ಪ್ಯಾರಾಮೀಟರ್ ಗಳಿವೆ. ಇದನ್ನು ಸುಮಾರು 7.5 ಟ್ರಿಲಿಯನ್ ಟೋಕನ್ ಗಳಿಂದ ಟ್ರೈನ್ ಮಾಡಲಾಗಿದೆ. ಇದರ ವಿಶೇಷತೆ ಎಂದರೆ, ಇದು ಕನ್ನಡ ಸೇರಿ ಎಲ್ಲಾ 22 ಅನುಸೂಚಿತ ಭಾರತೀಯ ಭಾಷೆಗಳು + ಇಂಗ್ಲಿಷ್ ನಲ್ಲಿ ಕೆಲಸ ಮಾಡುತ್ತದೆ. ಗಣಿತ, ಕೋಡಿಂಗ್, ರೀಸನಿಂಗ್ ಮತ್ತು ಏಜೆಂಟಿಕ್ AI ಕೆಲಸಗಳಿಗೆ ಇದು ಸಿದ್ಧವಾಗಿದೆ. ಬ್ಯಾಂಕಿಂಗ್, ಸೈಬರ್ ಸೆಕ್ಯುರಿಟಿ ಮತ್ತು ಸರ್ಕಾರಿ ಕೆಲಸಗಳಿಗೆ ಇದನ್ನು ಪ್ರೈವೇಟ್ ಸರ್ವರ್‌ನಲ್ಲಿ ಸುರಕ್ಷಿತವಾಗಿ ಬಳಸಬಹುದು. ಮುಂದಿನ 1 ತಿಂಗಳಲ್ಲಿ ಇದರ ಮಾಡೆಲ್ ವೇಟ್‌ಗಳನ್ನು ಓಪನ್ ಸೋರ್ಸ್ ಮಾಡಲಾಗುವುದು. (EKA-1 AI Model India)

Mercedes Benz: ಭಾರತದಲ್ಲಿ ಮರ್ಸಿಡೀಸ್ ಬೆಂಝ್ GLC ಎಲೆಕ್ಟ್ರಿಕ್ ಲಾಂಚ್; 715 ಕಿ.ಮೀ ಮೈಲೇಜ್, ಬೆಲೆ ₹78.50 ಲಕ್ಷದಿಂದ ಶುರು

2. ಧೀರ್ 2B ಮತ್ತು ಧೀರ್ 5B – ಇಂಟರ್ನೆಟ್ ಇಲ್ಲದೇ ಕೆಲಸ ಮಾಡುವ AI:

ZenteiQ ತಯಾರಿಸಿದ ಈ 2 ಮಾಡೆಲ್‌ಗಳು ಚಿಕ್ಕದಾಗಿದ್ದು, ಇಂಟರ್ನೆಟ್ ಇಲ್ಲದೇ ನೇರವಾಗಿ ನಿಮ್ಮ ಮೊಬೈಲ್ ಫೋನ್‌ನಲ್ಲೇ ಕೆಲಸ ಮಾಡುತ್ತವೆ. ಇವು ಇಂಗ್ಲಿಷ್ + 10 ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತವೆ. AIKosh ಪ್ಲಾಟ್‌ಫಾರ್ಮ್‌ನಲ್ಲಿ ಈಗಾಗಲೇ ಇವುಗಳ ವೇಟ್‌ಗಳು ಉಚಿತವಾಗಿ ಲಭ್ಯವಿವೆ. ಡಿಸೆಂಬರ್‌ನಲ್ಲಿ 9B ಪ್ಯಾರಾಮೀಟರ್ ಮಾಡೆಲ್ ಕೂಡ ಬರಲಿದೆ. (EKA-1 AI Model India)

ಇದರಿಂದ ಭಾರತಕ್ಕೆ ಏನು ಲಾಭ?

ಇದುವರೆಗೆ ChatGPT, Gemini, Claude ನಂತಹ ಅಮೆರಿಕನ್ AI ಗಳನ್ನು ಬಳಸಬೇಕಿತ್ತು. ಈಗ ಡೇಟಾ ಭಾರತದಲ್ಲೇ ಉಳಿಯುತ್ತದೆ. ರಕ್ಷಣಾ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಡೇಟಾ ಹೊರಗೆ ಹೋಗುವ ಭಯವಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ರೈತರಿಗೆ ಕನ್ನಡದಲ್ಲಿ AI ಸಹಾಯ ಸಿಗಲಿದೆ.

IndiaAI Mission ಅನ್ನು 2024 ರ ಮಾರ್ಚ್ 7 ರಂದು ₹10,371 ಕೋಟಿ ಅನುದಾನದೊಂದಿಗೆ ಅನುಮೋದಿಸಲಾಗಿತ್ತು. ಈಗಾಗಲೇ 34,000 ಕ್ಕೂ ಹೆಚ್ಚು GPU ಗಳ ಸಾಮರ್ಥ್ಯವನ್ನು ಸೃಷ್ಟಿಸಲಾಗಿದೆ.