ಅಂತರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಹೇಳಿದ Cristiano Ronaldo – 23 ವರ್ಷ, 234 ಪಂದ್ಯ, 146 ಗೋಲ್‌ಗಳ ದಂತಕಥೆ ಅಂತ್ಯ!

ನಂಬರ್ 7 ಜರ್ಸಿಯನ್ನು ಹಿಂದಿರುಗಿಸುವ ದಿನ ಬಂದಿದೆ - ಭಾವುಕ ವಿಡಿಯೋದಲ್ಲಿ Cristiano Ronaldo ಘೋಷಣೆ; ಕೋಚ್ ಜಾರ್ಜ್ ಜೀಸಸ್ ಜೊತೆ ಜಗಳದ ನಂತರವೇ ಈ ನಿರ್ಧಾರ, ಮೆಸ್ಸಿ ನಂತರ ರೊನಾಲ್ಡೋ ಕೂಡ ವಿದಾಯ

ನಂಬರ್ 7 ಜರ್ಸಿಯನ್ನು ಹಿಂದಿರುಗಿಸುವ ದಿನ ಬಂದಿದೆ – ಭಾವುಕ ವಿಡಿಯೋದಲ್ಲಿ Cristiano Ronaldo ಘೋಷಣೆ; ಕೋಚ್ ಜಾರ್ಜ್ ಜೀಸಸ್ ಜೊತೆ ಜಗಳದ ನಂತರವೇ ಈ ನಿರ್ಧಾರ, ಮೆಸ್ಸಿ ನಂತರ ರೊನಾಲ್ಡೋ ಕೂಡ ವಿದಾಯ

Cristiano Ronaldo
ಪೋರ್ಚುಗಲ್ ನಂಬರ್ 7 ಜರ್ಸಿಯಲ್ಲಿ ಕ್ರಿಸ್ಟಿಯಾನೋ ರೊನಾಲ್ಡೋ, ಅಂತರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ

ಲಿಸ್ಬನ್: ಫುಟ್‌ಬಾಲ್ ಜಗತ್ತಿನ ದಂತಕಥೆ Cristiano Ronaldo ಅಂತರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಹೇಳಿದ್ದಾರೆ. 41 ವರ್ಷದ ರೊನಾಲ್ಡೋ ಗುರುವಾರ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಭಾವುಕ ವಿಡಿಯೋ ಬಿಡುಗಡೆ ಮಾಡಿ, ಪೋರ್ಚುಗಲ್ ಜನತೆಗೆ, ನಮ್ಮ ರಾಷ್ಟ್ರೀಯ ತಂಡದ ನಂಬರ್ 7 ಜರ್ಸಿಯನ್ನು ಹಿಂದಿರುಗಿಸುವ ದಿನ ಬಂದಿದೆ ಎಂದು ಘೋಷಿಸಿದರು.

`23 ವರ್ಷಗಳ ಕಾಲ ಈ ಜರ್ಸಿಯನ್ನು ಧರಿಸುವ ಸೌಭಾಗ್ಯ, ಜವಾಬ್ದಾರಿ ನನ್ನದಾಗಿತ್ತು. ಇಂದು ಅದನ್ನು ಭವಿಷ್ಯಕ್ಕೆ ಹಸ್ತಾಂತರಿಸುವ ಸಮಯ ಬಂದಿದೆ. ಇದು ಸುಲಭದ ನಿರ್ಧಾರವಲ್ಲ, ಕೆಲವು ನಿರ್ಧಾರಗಳು ಮನಸ್ಸಿನಿಂದ ಮಾತ್ರವಲ್ಲ, ಹೃದಯದಿಂದಲೂ ಮಾಡಲ್ಪಡುತ್ತವೆ

                                 – ಕ್ರಿಸ್ಟಿಯಾನೋ ರೊನಾಲ್ಡೋ, ಅಂತರಾಷ್ಟ್ರೀಯ ಫುಟ್‌ಬಾಲ್‌ ಆಟಗಾರ 

Cristiano Ronaldo

2003ರಿಂದ 2026ರವರೆಗಿನ ಸುವರ್ಣ ಯುಗ – Cristiano Ronaldo ಪಯಣ ಆಗಸ್ಟ್ 2003ರಲ್ಲಿ ಆರಂಭವಾಯಿತು. ಅಂದಿನಿಂದ 234 ಪಂದ್ಯಗಳಲ್ಲಿ ಆಡಿ, 146 ಗೋಲ್ ಗಳಿಸಿದ್ದಾರೆ. ಇದು ಪುರುಷರ ಅಂತರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ವಿಶ್ವ ದಾಖಲೆ. ಯಾವ ಆಟಗಾರನೂ ಇಷ್ಟು ಪಂದ್ಯ, ಇಷ್ಟು ಗೋಲ್ ಗಳಿಸಿಲ್ಲ. 6 ವಿಶ್ವಕಪ್‌ಗಳಲ್ಲಿ ಆಡಿದ ಏಕೈಕ ಆಟಗಾರ. 2016ರ ಯುರೋ ಕಪ್‌ನಲ್ಲಿ ಪೋರ್ಚುಗಲ್‌ಗೆ ಮೊದಲ ಪ್ರಮುಖ ಟ್ರೋಫಿ ಗೆದ್ದುಕೊಟ್ಟರು. 2019 ಮತ್ತು 2025ರಲ್ಲಿ UEFA ನೇಷನ್ಸ್ ಲೀಗ್ ಗೆದ್ದುಕೊಟ್ಟರು.

ಜಗಳದ ನಂತರದ ವಿದಾಯ – ಕಹಿ ಅಂತ್ಯ

ಆದರೆ ಈ ವಿದಾಯ ಕಹಿಯಾಗಿ ಕೊನೆಗೊಂಡಿದೆ. ಹೊಸ ಕೋಚ್ ಜಾರ್ಜ್ ಜೀಸಸ್ ಜೊತೆ ಜಗಳದ ನಂತರ Cristiano Ronaldo ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅಕ್ಟೋಬರ್‌ನಲ್ಲಿ ನಾರ್ವೆ ವಿರುದ್ಧದ ಪಂದ್ಯದಲ್ಲಿ ಜೀಸಸ್ ಅವರನ್ನು ಬೆಂಚ್‌ನಲ್ಲೇ ಕೂರಿಸಿದ್ದರು. ಮುಂದಿನ ಪಂದ್ಯದಲ್ಲೂ ಆಡಿಸುವುದಿಲ್ಲ ಎಂದಾಗ, ರೊನಾಲ್ಡೋ ಕ್ಯಾಂಪ್ ಬಿಟ್ಟು ಹೊರನಡೆದಿದ್ದರು. ಪೋರ್ಚುಗಲ್ ಫುಟ್‌ಬಾಲ್ ಫೆಡರೇಷನ್ ಅವರಿಗೆ 30 ದಿನಗಳ ಅಮಾನತು ಮತ್ತು ದಂಡ ವಿಧಿಸಿತ್ತು. ಅವರ ಕೊನೆಯ ಪಂದ್ಯ ಸೆಪ್ಟೆಂಬರ್ 24ರಂದು ವೇಲ್ಸ್ ವಿರುದ್ಧ 1-0 ಗೆಲುವು.

ಮೆಸ್ಸಿ ನಂತರ ರೊನಾಲ್ಡೋ – ಒಂದು ಯುಗದ ಅಂತ್ಯ

ಕಳೆದ ತಿಂಗಳು ಲಿಯೋನೆಲ್ ಮೆಸ್ಸಿ ಅರ್ಜೆಂಟೀನಾಗೆ ವಿದಾಯ ಹೇಳಿದ್ದರು. ಈಗ Cristiano Ronaldo ಕೂಡ ವಿದಾಯ ಹೇಳಿರುವುದರಿಂದ ಫುಟ್‌ಬಾಲ್‌ನ ಸುವರ್ಣ ಯುಗವೊಂದು ಮುಗಿದಂತಾಗಿದೆ. ಪೋರ್ಚುಗಲ್ ಫೆಡರೇಷನ್ ಅಗಾಧ ಕೃತಜ್ಞತೆ, ಅಪಾರ ಮೆಚ್ಚುಗೆ` ವ್ಯಕ್ತಪಡಿಸಿದ್ದು, `ಗ್ರೇಟೆಸ್ಟ್ ಆಫ್ ಆಲ್ ಟೈಮ್ ಗೆ ಗೌರವ ಸಮಾರಂಭ ನಡೆಸುವುದಾಗಿ ಹೇಳಿದೆ.

Mercedes Benz: ಭಾರತದಲ್ಲಿ ಮರ್ಸಿಡೀಸ್ ಬೆಂಝ್ GLC ಎಲೆಕ್ಟ್ರಿಕ್ ಲಾಂಚ್; 715 ಕಿ.ಮೀ ಮೈಲೇಜ್, ಬೆಲೆ ₹78.50 ಲಕ್ಷದಿಂದ ಶುರು

ಕ್ಲಬ್ ಫುಟ್‌ಬಾಲ್ ಮುಂದುವರಿಯಲಿದೆ – 1000 ಗೋಲ್ ಗುರಿ

ರೊನಾಲ್ಡೋ ಸಂಪೂರ್ಣ ನಿವೃತ್ತರಾಗಿಲ್ಲ. ಸೌದಿ ಕ್ಲಬ್ ಅಲ್-ನಸ್ರ್ ಪರ ಆಡುವುದನ್ನು ಮುಂದುವರಿಸಲಿದ್ದಾರೆ. ಈ ಋತುವಿನ ಅಂತ್ಯಕ್ಕೆ ಕ್ಲಬ್ ವೃತ್ತಿಜೀವನ ಮುಗಿಸುವ ನಿರೀಕ್ಷೆ ಇದೆ. ಅವರ ಒಟ್ಟು ಗೋಲ್ ಸಂಖ್ಯೆ ಈಗ 985. 1000 ಗೋಲ್ ಗುರಿ ತಲುಪಲು ಇನ್ನು 15 ಗೋಲ್ ಬೇಕು. ಪೋರ್ಚುಗಲ್ ಯಾವಾಗಲೂ ನನ್ನಲ್ಲಿರುತ್ತದೆ ಎಂದು ಅವರು ವಿಡಿಯೋಗೆ ಬರೆದಿದ್ದಾರೆ.