PM Modi Dr Rajkumar Yoga: ಮೋದಿ ಭಾಷಣದಲ್ಲಿ ಡಾ. ರಾಜ್‌ಕುಮಾರ್ ನೆನಪು – ಕಲೆಗಷ್ಟೇ ಅಲ್ಲ, ಯೋಗಕ್ಕೂ ವರನಟನ ಕೊಡುಗೆ!
ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವದಲ್ಲಿ ಪ್ರಧಾನಿ ಮೋದಿ - ಡಾ. ರಾಜ್‌ಕುಮಾರ್ ಯೋಗಕ್ಕೆ ನೀಡಿದ ಕೊಡುಗೆ ಸ್ಮರಣೆ! ಕರ್ನಾಟಕ ಯೋಗದ ತವರು ಎಂದ ಮೋದಿ, ಎಚ್.ವಿ. ಶೇಷಾದ್ರಿ ಸಾಧನೆಗೆ ಶ್ಲಾಘನೆ. ಪೂರ್ತಿ ವಿವರ ಇಲ್ಲಿದೆ. (PM Modi Dr Rajkumar Yoga)
ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವದಲ್ಲಿ ಪ್ರಧಾನಿ – ಕರ್ನಾಟಕ ದಶಕಗಳಿಂದ ಯೋಗದ ತವರು, ಅರಬ್ ದೇಶಗಳಲ್ಲೂ ಯೋಗಕ್ಕೆ ಕ್ರೇಜ್ ಎಂದ ಮೋದಿ! (PM Modi Dr Rajkumar Yoga)

| ಹೈಲೈಟ್ಸ್: |
| ಡಾ. ರಾಜ್‌ಕುಮಾರ್ ಕೇವಲ ನಟ ಮಾತ್ರವಲ್ಲ, ಯೋಗ ಸಾಧಕ ಕೂಡ – ಅವರ ಕೊಡುಗೆ ಅಪಾರ ಎಂದ ಪ್ರಧಾನಿ |
| ಕರ್ನಾಟಕ ದಶಕಗಳಿಂದ ಯೋಗಕ್ಕೆ ಕೊಡುಗೆ ನೀಡುತ್ತಿರುವ ನಾಡು ಎಂದ ಮೋದಿ ಶ್ಲಾಘನೆ |
| ಜಿಗಣಿಯ ಪ್ರಶಾಂತಿ ಕುಟೀರ – S-VYASA ಯೋಗ ವಿಶ್ವವಿದ್ಯಾಲಯಕ್ಕೆ ಸುವರ್ಣ ಮಹೋತ್ಸವ |
| ಅಮೆರಿಕ, ಯುರೋಪ್ ಮಾತ್ರವಲ್ಲ ಅರಬ್ ದೇಶಗಳಲ್ಲೂ ಯೋಗಕ್ಕೆ ಭಾರೀ ಬೇಡಿಕೆ ಎಂದ ಪ್ರಧಾನಿ |
| ಎಚ್.ವಿ. ಶೇಷಾದ್ರಿ ಕೇವಲ ಸಂಘಟಕರಲ್ಲ, ಸಮಾಜ ಸೇವಕ ಮತ್ತು ಯೋಗ ಮಾರ್ಗದರ್ಶಕ ಎಂದ ಮೋದಿ |
ಬೆಂಗಳೂರು: ಜಿಗಣಿಯ ಪ್ರಶಾಂತಿ ಕುಟೀರದ ವೇದಿಕೆಯಲ್ಲಿ ಪ್ರಧಾನಿ ಮೋದಿ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕನ್ನಡಿಗರ ಆರಾಧ್ಯ ದೈವ ಡಾ. ರಾಜ್‌ಕುಮಾರ್ ಅವರ ಹೆಸರು ಬಂತು. ಕಲೆಗಷ್ಟೇ ಅಲ್ಲ, ಯೋಗಕ್ಕೂ ಅಣ್ಣಾವ್ರು ನೀಡಿದ ದೊಡ್ಡ ಕೊಡುಗೆಯನ್ನು ಮೋದಿ ಮನತುಂಬಿ ಸ್ಮರಿಸಿದರು.
“ಡಾ. ರಾಜ್‌ಕುಮಾರ್ ಅವರು ಕಲೆಯ ಜೊತೆಗೆ ಯೋಗಕ್ಕೂ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅವರ ಸಾಧನೆ, ಶಿಸ್ತು ಇಂದಿಗೂ ಸ್ಫೂರ್ತಿ” – ಎಂದು ಮೋದಿ ಹೇಳುತ್ತಿದ್ದಂತೆ ಸಭಾಂಗಣದಲ್ಲಿ ಚಪ್ಪಾಳೆ ಮೊಳಗಿತು.
ಕನ್ನಡ ಚಿತ್ರರಂಗದ ದಿಗ್ಗಜನನ್ನು ಯೋಗದ ಸಂದರ್ಭದಲ್ಲಿ ನೆನಪಿಸಿಕೊಳ್ಳುವ ಮೂಲಕ ಮೋದಿ ಕನ್ನಡಿಗರ ಮನಗೆದ್ದರು ಎಂಬುದು ಅಲ್ಲಿದ್ದವರ ಅಭಿಪ್ರಾಯ. (PM Modi Dr Rajkumar Yoga)
VIDEO | Bengaluru: Speaking during the Golden Jubilee Celebrations of Prashanti Kutiram, PM Modi, says, “Today in Bengaluru, I have the opportunity to experience the extraordinary energy of yoga. Karnataka has been a centre of yoga for centuries. Several renowned yoga gurus and… pic.twitter.com/RXqSmeTVqw
— Press Trust of India (@PTI_News) November 13, 2026
“>Speaking during the Golden Jubilee Celebrations of Prashanti Kutiram
ಕರ್ನಾಟಕವೇ ಯೋಗದ ತವರು!
ಕರ್ನಾಟಕದ ಬಗ್ಗೆ ಮಾತನಾಡಿದ ಮೋದಿ, “ಈ ನಾಡು ದಶಕಗಳಿಂದ ಯೋಗಕ್ಕೆ ಅಪಾರ ಕೊಡುಗೆ ನೀಡಿದೆ. ಇಲ್ಲಿನ ಗುರು ಪರಂಪರೆ, ಸಂಸ್ಥೆಗಳು ಯೋಗವನ್ನು ವಿಜ್ಞಾನದ ಜೊತೆ ಬೆಸೆದು ಜಗತ್ತಿಗೆ ಕೊಟ್ಟಿವೆ” ಎಂದು ಹೇಳಿದರು. (PM Modi Dr Rajkumar Yoga)
ವಿದೇಶಿ ಪ್ರವಾಸದ ಅನುಭವ ಹಂಚಿಕೊಂಡ ಮೋದಿ, “ನಾನು ಯಾವ ದೇಶಕ್ಕೆ ಹೋದರೂ ಅಲ್ಲಿನ ರಾಷ್ಟ್ರಾಧ್ಯಕ್ಷರು ಯೋಗದ ಬಗ್ಗೆ ಮಾತನಾಡುತ್ತಾರೆ. ಅವರ ಕುಟುಂಬದಲ್ಲಿ ಒಬ್ಬರಾದರೂ ಯೋಗ ಮಾಡುತ್ತಿರುತ್ತಾರೆ. ಪಶ್ಚಿಮ ದೇಶಗಳಷ್ಟೇ ಅಲ್ಲ, ಅರಬ್ ದೇಶಗಳಲ್ಲೂ ಈಗ ಯೋಗಕ್ಕೆ ದೊಡ್ಡ ಕ್ರೇಜ್ ಇದೆ” ಎಂದರು.
ತಾವು ಯೋಗ ಪರಿಣತರಲ್ಲದಿದ್ದರೂ ಪ್ರತಿದಿನ ಯೋಗಾಭ್ಯಾಸ ಮಾಡುತ್ತೇನೆ ಎಂದು ಮೋದಿ ಮುಕ್ತವಾಗಿ ಹೇಳಿಕೊಂಡರು.
“ಯೋಗವು ಭಾರತೀಯ ಸಂಸ್ಕೃತಿಯನ್ನು ಅರಿಯುವ ಮಾರ್ಗ. ಆಯುರ್ವೇದ ಮತ್ತು ಯೋಗದ ಲಾಭ ಪ್ರತಿಯೊಬ್ಬ ಭಾರತೀಯನಿಗೂ ಸಿಗಬೇಕು. ಅದಕ್ಕಾಗಿಯೇ ಸ್ವಾತಂತ್ರ್ಯದ ನಂತರ ಆಯುಷ್ ಸಚಿವಾಲಯವನ್ನು ಆರಂಭಿಸಲಾಯಿತು” ಎಂದು ಮೋದಿ ವಿವರಿಸಿದರು.
ಶೇಷಾದ್ರಿ ಅವರನ್ನು ಮರೆಯದ ಮೋದಿ
ಇದೇ ವೇದಿಕೆಯಲ್ಲಿ ಮೋದಿ ತಮ್ಮ ಹಳೆಯ ಮಾರ್ಗದರ್ಶಕ ಎಚ್.ವಿ. ಶೇಷಾದ್ರಿ ಅವರನ್ನು ಕೃತಜ್ಞತೆಯಿಂದ ನೆನಪಿಸಿಕೊಂಡರು.
“ಶೇಷಾದ್ರಿಜೀ ಕೇವಲ ಸಂಘಟನೆಯ ಮನುಷ್ಯರಾಗಿರಲಿಲ್ಲ. ಸಮಾಜ ಸೇವೆಯಲ್ಲಿ ನಿಷ್ಠೆಯಿಂದ ತೊಡಗಿಸಿಕೊಂಡಿದ್ದರು. ತಮ್ಮ ಜೀವನವನ್ನೇ ದೇಶಕ್ಕೆ ಸಮರ್ಪಿಸಿದ್ದರು. ಕೋಟ್ಯಂತರ ಸ್ವಯಂಸೇವಕರಿಗೆ ಸ್ಫೂರ್ತಿಯಾಗಿದ್ದರು” ಎಂದು ಮೋದಿ ಭಾವುಕರಾದರು. (PM Modi Dr Rajkumar Yoga)
ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಕೂಡ ಮಾತನಾಡಿ, “ಶೇಷಾದ್ರಿಯವರು ಕರ್ನಾಟಕದಲ್ಲಿ ಸಂಘಟನೆ ಕಟ್ಟಿದ್ದಲ್ಲದೆ, ಯೋಗ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಸಾಧನೆ ಮಾಡಿದ್ದರು. ಮೋದಿಜೀ ಜೊತೆ ಅವರಿಗೆ ಆತ್ಮೀಯ ಬಾಂಧವ್ಯವಿತ್ತು” ಎಂದು ಸ್ಮರಿಸಿದರು. (PM Modi Dr Rajkumar Yoga)
ಪ್ರಶಾಂತಿ ಕುಟೀರ ಯಾಕೆ ಸ್ಪೆಷಲ್?
ಆನೇಕಲ್ ತಾಲ್ಲೂಕಿನ ಜಿಗಣಿ ಬಳಿ ಇರುವ ಪ್ರಶಾಂತಿ ಕುಟೀರ S-VYASA ಯೋಗ ವಿಶ್ವವಿದ್ಯಾಲಯದ ಪ್ರಮುಖ ಕ್ಯಾಂಪಸ್. ಕಳೆದ 5 ದಶಕಗಳಿಂದ ಯೋಗ, ಆಧ್ಯಾತ್ಮ, ವೈಜ್ಞಾನಿಕ ಸಂಶೋಧನೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ. ಇದೀಗ 50ರ ಸಂಭ್ರಮ. “Towards Viksit Bharat 2047” ಥೀಮ್‌ನಲ್ಲಿ ನವೆಂಬರ್ 13ರಿಂದ 23ರವರೆಗೆ ಆಚರಣೆ ನಡೆಯಲಿದೆ.

[…] […]
[…] […]