Davanagere PLI RPLI: ದಾವಣಗೆರೆಯಲ್ಲಿ PLI – RPLI ಸೇವೆಗಳು ತಾತ್ಕಾಲಿಕ ಸ್ಥಗಿತ!

ದಾವಣಗೆರೆ ಅಂಚೆ ವಿಭಾಗದಲ್ಲಿ PLI ಮತ್ತು RPLI ಸೇವೆಗಳು ತಾತ್ಕಾಲಿಕ ಸ್ಥಗಿತ! ನವೆಂಬರ್ 16ರಿಂದ 24ರವರೆಗೆ ಕೌಂಟರ್ ಹಾಗೂ ಆನ್‌ಲೈನ್ ವಹಿವಾಟು ಬಂದ್. ಪ್ರೀಮಿಯಂ ಪಾವತಿಗೆ ನವೆಂಬರ್ 14 ಕೊನೆ ದಿನ. ನವೆಂಬರ್ 25ರಿಂದ ಹೊಸ IMS ತಂತ್ರಾಂಶದಲ್ಲಿ ಸೇವೆ ಆರಂಭ. ಪೂರ್ತಿ ವಿವರ ಇಲ್ಲಿದೆ. Davanagere PLI RPLI

ನವೆಂಬರ್ 16ರಿಂದ 24ರವರೆಗೆ ಅಂಚೆ ಜೀವ ವಿಮಾ ವಹಿವಾಟು ಬಂದ್ – ಪ್ರೀಮಿಯಂ ಪಾವತಿಗೆ ನವೆಂಬರ್ 14ರೊಳಗೆ ಅವಕಾಶ, ನವೆಂಬರ್ 25ರಿಂದ ಹೊಸ IMS ತಂತ್ರಾಂಶದಲ್ಲಿ ಸೇವೆ ಪುನರಾರಂಭ! (Davanagere PLI RPLI)

davanagere-pli-rpli-services-suspended

ದಾವಣಗೆರೆ: ದಾವಣಗೆರೆ ಅಂಚೆ ವಿಭಾಗದಲ್ಲಿ PLI (ಅಂಚೆ ಜೀವ ವಿಮಾ) ಮತ್ತು RPLI (ಗ್ರಾಮೀಣ ಅಂಚೆ ಜೀವ ವಿಮಾ) ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ.ಅಂಚೆ ಇಲಾಖೆಯು ತನ್ನ ವಿಮಾ ತಂತ್ರಾಂಶವನ್ನು ಅತ್ಯಾಧುನಿಕ ‘ಇನ್ಶೂರೆನ್ಸ್ ಮ್ಯಾನೇಜ್ಮೆಂಟ್ ಸೊಲ್ಯೂಷನ್’ (IMS) ತಂತ್ರಾಂಶಕ್ಕೆ ಮೇಲ್ದರ್ಜೆಗೇರಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಯಾವಾಗ ಬಂದ್?

ನವೆಂಬರ್ 16 ರಿಂದ 24 ರವರೆಗೆ – ಕೌಂಟರ್ ಹಾಗೂ ಆನ್‌ಲೈನ್ ಮೂಲಕ ನಡೆಯುವ ಎಲ್ಲಾ PLI ಮತ್ತು RPLI (Davanagere PLI RPLI) ವಹಿವಾಟುಗಳು ಸಂಪೂರ್ಣ ಸ್ಥಗಿತ.

ಏನು ಮಾಡಬೇಕು?

davanagere-pli-rpli-services-suspended 1

ಪಾಲಿಸಿದಾರರು ತಮ್ಮ ಪ್ರೀಮಿಯಂ ಪಾವತಿ, ಹೊಸ ಪ್ರಸ್ತಾವನೆ, ಸೇವಾ ವಿನಂತಿಗಳನ್ನು ನವೆಂಬರ್ 14 ಅಥವಾ ಅದಕ್ಕಿಂತ ಮುಂಚಿತವಾಗಿ ಹತ್ತಿರದ ಅಂಚೆ ಕಚೇರಿಯಲ್ಲಿ ಅಥವಾ ಆನ್‌ಲೈನ್ ಮೂಲಕ ಪೂರ್ಣಗೊಳಿಸಬೇಕು. (Davanagere PLI RPLI)

PM Modi in Bengaluru: ಬೆಂಗಳೂರಿಗೆ ಆಗಮಿಸಿದ ಮೋದಿಗೆ ಡಿಕೆಶಿ ಆತ್ಮೀಯ ಸ್ವಾಗತ – ಪಿಂಕ್ ಲೈನ್ ಮೆಟ್ರೋ ಉದ್ಘಾಟನೆಗೆ ಕ್ಷಣಗಣನೆ!

ಮತ್ತೆ ಯಾವಾಗ ಆರಂಭ?

ನವೆಂಬರ್ 25 ರಿಂದ ಹೊಸ IMS ತಂತ್ರಾಂಶದ ಮೂಲಕ ಎಲ್ಲಾ ಅಂಚೆ ಜೀವ ವಿಮಾ ಸೇವೆಗಳು ಎಂದಿನಂತೆ ಮರುಪ್ರಾರಂಭಗೊಳ್ಳಲಿದೆ.

ಆದ್ದರಿಂದ ದಾವಣಗೆರೆ ವಿಭಾಗದ ಎಲ್ಲಾ PLI ಮತ್ತು RPLI ಪಾಲಿಸಿದಾರರು ಇಲಾಖೆಯೊಂದಿಗೆ ಸಹಕರಿಸುವಂತೆ ದಾವಣಗೆರೆ ವಿಭಾಗ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.