BREAKING News: UP ಚುನಾವಣೆಗೆ ಒವೈಸಿ – ಚಂದ್ರಶೇಖರ್ ಆಜಾದ್ (Owaisi Azad) ಮೈತ್ರಿ!
ಲಕ್ನೋದಲ್ಲಿ ಒವೈಸಿ - ಚಂದ್ರಶೇಖರ್ ಆಜಾದ್ ಸಾಮಾಜಿಕ್ ಪರಿವರ್ತನ್ ಮೋರ್ಚಾ ಘೋಷಣೆ! AIMIM + ASP ಮೈತ್ರಿ, ದಲಿತ-ಮುಸ್ಲಿಂ ವೋಟ್ ಬ್ಯಾಂಕ್ ಗುರಿ, 150 ಸೀಟ್ನಲ್ಲಿ ಸ್ಪರ್ಧೆ ಸಾಧ್ಯತೆ. UP ಚುನಾವಣೆಯಲ್ಲಿ ಏನಾಗುತ್ತೆ? Owaisi Azad
ಲಕ್ನೋದಲ್ಲಿ ‘ಸಾಮಾಜಿಕ್ ಪರಿವರ್ತನ್ ಮೋರ್ಚಾ’ ಘೋಷಣೆ – AIMIM + ಆಜಾದ್ ಸಮಾಜ್ ಪಾರ್ಟಿ ಒಟ್ಟಾಗಿ ಕಣಕ್ಕೆ, UPಯಲ್ಲಿ 3ನೇ ರಂಗ! (Owaisi Azad)

ಲಕ್ನೋ: ಉತ್ತರ ಪ್ರದೇಶದ ರಾಜಕೀಯದಲ್ಲಿ ದೊಡ್ಡ ಬೆಳವಣಿಗೆ ನಡೆದಿದೆ. AIMIM ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಮತ್ತು ಆಜಾದ್ ಸಮಾಜ್ ಪಾರ್ಟಿ (ಕಾನ್ಶಿರಾಮ್) ಅಧ್ಯಕ್ಷ, ನಗೀನಾ ಸಂಸದ ಚಂದ್ರಶೇಖರ್ ಆಜಾದ್ ಅವರು 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮೈತ್ರಿ ಘೋಷಿಸಿದ್ದಾರೆ.
ಇಬ್ಬರು ನಾಯಕರು ಗುರುವಾರ ಲಕ್ನೋದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ‘ಸಾಮಾಜಿಕ್ ಪರಿವರ್ತನ್ ಮೋರ್ಚಾ’ ಹೆಸರಿನ ಹೊಸ ಮೈತ್ರಿಯನ್ನು ಘೋಷಿಸಿದರು. ಇದನ್ನು ಕೆಲವರು ‘ಥರ್ಡ್ ಫ್ರಂಟ್’ ಎಂದರೂ, ಆಜಾದ್ ಅವರು “ಇದು ಸಾಮಾಜಿಕ ಬದಲಾವಣೆಗಾಗಿ ಇರುವ ಫ್ರಂಟ್” ಎಂದು ಹೇಳಿದ್ದಾರೆ.
ಯಾಕೆ ಈ ಮೈತ್ರಿ?
ಒವೈಸಿ ಅವರು UPಯಲ್ಲಿ INDIA ಮೈತ್ರಿಕೂಟದ ಸೀಟ್ ಹಂಚಿಕೆಗೆ ಸೇರಲು ಪ್ರಯತ್ನಿಸಿದ್ದರು. ಅಕ್ಟೋಬರ್ 2ರೊಳಗೆ ಉತ್ತರಿಸುವಂತೆ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ಗೆ ಗಡುವು ಕೊಟ್ಟಿದ್ದರು. ಆದರೆ ಎರಡೂ ಪಕ್ಷಗಳು ಅವರನ್ನು ಮೈತ್ರಿಗೆ ಸೇರಿಸಿಕೊಳ್ಳಲು ಒಪ್ಪಲಿಲ್ಲ. ಅದರ ನಂತರವೇ ಒವೈಸಿ ಮತ್ತು ಆಜಾದ್ ಕೈಜೋಡಿಸಿದ್ದಾರೆ. (Owaisi Azad)
ದಲಿತ ಮತ್ತು ಮುಸ್ಲಿಂ ವೋಟ್ ಬ್ಯಾಂಕ್ – ಇದರ ಗುರಿಯಾಗಿದೆಯೇ?
ಈ ಮೈತ್ರಿಯ ಮುಖ್ಯ ಗುರಿ ದಲಿತ ಮತ್ತು ಅಲ್ಪಸಂಖ್ಯಾತ ಮತಗಳನ್ನು ಒಗ್ಗೂಡಿಸುವುದು. UPಯಲ್ಲಿ ಮುಸ್ಲಿಮರು ಸುಮಾರು 19%, ಪರಿಶಿಷ್ಟ ಜಾತಿಯವರು ಸುಮಾರು 21% ಇದ್ದಾರೆ. ಎರಡೂ ಸೇರಿ ಸುಮಾರು 40-41% ಆಗುತ್ತದೆ. ಇದೇ ಕಾರಣಕ್ಕೆ “ಜೈ ಮೀಮ್, ಜೈ ಭೀಮ್” ಎಂಬ ಘೋಷಣೆಯೊಂದಿಗೆ ಈ ಮೈತ್ರಿ (Owaisi Azad) ಮುಂದೆ ಬಂದಿದೆ.
ಎಷ್ಟು ಸೀಟ್ನಲ್ಲಿ ಸ್ಪರ್ಧೆ?
ಮೂಲಗಳ ಪ್ರಕಾರ, ಮೈತ್ರಿಯು (Owaisi Azad) ಸುಮಾರು 150 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬಗ್ಗೆ ಚರ್ಚೆ ನಡೆದಿದೆ. ಅದರಲ್ಲಿ AIMIM ಸುಮಾರು 40-45 ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿ, ಆಜಾದ್ ಸಮಾಜ್ ಪಾರ್ಟಿ ಉಳಿದ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. ಆದರೆ ಅಧಿಕೃತ ಸೀಟ್ ಹಂಚಿಕೆ ಇನ್ನೂ ಘೋಷಣೆಯಾಗಿಲ್ಲ. ಇನ್ನೂ ಸಣ್ಣ ಪಕ್ಷಗಳು ಕೂಡ ಈ ಮೋರ್ಚಾಗೆ ಸೇರಬಹುದು ಎಂದು AIMIM ವಕ್ತಾರ ಶಾದಾಬ್ ಚೌಹಾಣ್ ಹೇಳಿದ್ದಾರೆ.
ಬೆಂಗಳೂರಿಗರ ಪ್ರಯಾಣಕ್ಕೆ ಇನ್ಮುಂದೆ ಡಿಜಿಟಲ್ ಸ್ಪರ್ಶ – BMTC 2.0 App ಬಿಡುಗಡೆ!
ಹಿಂದಿನ ಚುನಾವಣೆಯಲ್ಲಿ ಏನಾಗಿತ್ತು?
2022ರ UP ಚುನಾವಣೆಯಲ್ಲಿ AIMIM 95 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಒಂದೂ ಗೆದ್ದಿರಲಿಲ್ಲ, ಸುಮಾರು 0.49% ಮತ ಪಡೆದಿತ್ತು. ASP ಕೂಡ 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸುಮಾರು 0.13% ಮತ ಪಡೆದಿತ್ತು.
ಆದರೆ ಬಿಹಾರದ 2025ರ ಚುನಾವಣೆಯಲ್ಲಿ AIMIM 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸೀಮಾಂಚಲ್ನಲ್ಲಿ 5 ಸೀಟ್ ಗೆದ್ದಿತ್ತು. ಈ ಗೆಲುವು ಒವೈಸಿಗೆ UPಯಲ್ಲಿ ಹೊಸ ಉತ್ಸಾಹ ಕೊಟ್ಟಿದೆ.
ಯಾರಿಗೆ ತಲೆನೋವು?
ಈ ಮೈತ್ರಿ ಬಿಜೆಪಿ ನೇತೃತ್ವದ NDA ಮತ್ತು ಸಮಾಜವಾದಿ ಪಕ್ಷ-ಕಾಂಗ್ರೆಸ್ ನೇತೃತ್ವದ INDIA ಮೈತ್ರಿಕೂಟದ ಹೊರಗೆ 3ನೇ ರಂಗವಾಗಿ ನಿಲ್ಲುತ್ತದೆ. ವಿಶೇಷವಾಗಿ ಸಮಾಜವಾದಿ ಪಕ್ಷದ PDA (ಹಿಂದುಳಿದ, ದಲಿತ, ಅಲ್ಪಸಂಖ್ಯಾತ) ಸೂತ್ರಕ್ಕೆ ಇದು ಹೊಡೆತ ಕೊಡಬಹುದು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಒಟ್ಟಾರೆ, UP ಚುನಾವಣೆ ಇನ್ನು ಕೇವಲ ಬಿಜೆಪಿ vs SP ಅಲ್ಲ, 3ನೇ ರಂಗದ ಎಂಟ್ರಿಯಿಂದ ಮತ್ತಷ್ಟು ರೋಚಕವಾಗಿದೆ.

[…] BREAKING News: UP ಚುನಾವಣೆಗೆ ಒವೈಸಿ – ಚಂದ್ರಶೇಖರ್ ಆ… […]