PM Narendra Modi: ದೇಶದ ಜನತೆಗೆ ಪ್ರಧಾನಿಗಳ ದೀಪಾವಳಿ ಶುಭಾಶಯ – ನಂಬಿಕೆ ಮತ್ತು ಏಕತೆಯ ಸಂಕೇತ ಎಂದ ಮೋದಿ

ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ ಪಿಎಂ ನರೇಂದ್ರ ಮೋದಿ. ಬೆಳಕು, ಸಂತಸ, ಸಮೃದ್ಧಿ ತರಲಿ ಎಂದು ಹಾರೈಕೆ. ವೋಕಲ್ ಫಾರ್ ಲೋಕಲ್, ಯೋಧರಿಗೆ ವಿಶೇಷ ಸ್ಮರಣೆ. (PM Narendra Modi)

ನವದೆಹಲಿ: ದೇಶದ ಜನರಿಗೆ ಪ್ರಧಾನಿ ಮೋದಿ (PM Narendra Modi) ದೀಪಾವಳಿ ಶುಭಾಶಯಗಳನ್ನು ತಿಳಿಸಿದ್ದಾರೆ. ಕತ್ತಲೆಯ ಮೇಲೆ ಬೆಳಕಿನ, ಕೆಟ್ಟದ್ದರ ಮೇಲೆ ಒಳ್ಳೆಯದರ ಮತ್ತು ಹತಾಶೆಯ ಮೇಲೆ ಭರವಸೆಯ ಶಾಶ್ವತ ವಿಜಯವನ್ನು ಈ ಹಬ್ಬ ಸಂಭ್ರಮಿಸುತ್ತದೆ ಎಂದಿದ್ದಾರೆ.

PM Narendra Modi

ಈ ಹಬ್ಬದ ಋತುವು ಎಲ್ಲರಲ್ಲೂ ದಯೆಯನ್ನು ಪಸರಿಸಲು, ಸಕಾರಾತ್ಮಕತೆಯನ್ನು ಅಳವಡಿಸಿಕೊಳ್ಳಲು ಮತ್ತು ಉಜ್ವಲ ಭವಿಷ್ಯದತ್ತ ಶ್ರಮಿಸಲು ಸ್ಫೂರ್ತಿ ನೀಡಲಿ ಎಂದು ಪ್ರಧಾನಿ ಆಶಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಬ್ಬದ ಶುಭಾಶಯ ತಿಳಿಸಿದರುವ ಅವರು, ಪ್ರೀತಿಯ ಸಹ ನಾಗರಿಕರೇ, ದೀಪಾವಳಿಯ ಈ ಶುಭ ಸಂದರ್ಭದಲ್ಲಿ ನಿಮಗೆ ಹಾರ್ದಿಕ ಶುಭಾಶಯಗಳು. ಈ ಹಬ್ಬವು ಕತ್ತಲೆಯ ಮೇಲೆ ಬೆಳಕಿನ, ಕೆಡುಕಿನ ಮೇಲೆ ಒಳಿತಿನ ಹಾಗೂ ಹತಾಶೆಯ ಮೇಲೆ ಭರವಸೆಯ ಶಾಶ್ವತ ವಿಜಯವನ್ನು ಸಂಭ್ರಮಿಸುತ್ತದೆ. ದೀಪಾವಳಿಯು ಭಾರತದ ಶ್ರೀಮಂತ ಸಂಪ್ರದಾಯಗಳನ್ನು ಗೌರವಿಸಲು ಮತ್ತು ಒಗ್ಗಟ್ಟಿನ ಬಂಧ ಬಲಪಡಿಸಲು ಸಿಕ್ಕಿರುವ ಒಂದು ಶುಭ ಸಂದರ್ಭವಾಗಿದೆ ಎಂದು ಬರೆದುಕೊಂಡಿದ್ದಾರೆ.

ದೀಪಾವಳಿಯು ಪ್ರತಿಯೊಂದು ಮನೆಯನ್ನು ಸಂತೋಷ, ಸಾಮರಸ್ಯ ಮತ್ತು ಸಮೃದ್ಧಿಯಿಂದ ಬೆಳಗಿಸಲಿ. ಈ ಹಬ್ಬದ ಋತುವು ದಯೆಯನ್ನು ಹರಡಲು, ಸಕಾರಾತ್ಮಕತೆಯನ್ನು ಸ್ವೀಕರಿಸಲು ಮತ್ತು ಉಜ್ವಲ ಭವಿಷ್ಯಕ್ಕಾಗಿ ಕೆಲಸ ಮಾಡಲು ನಮಗೆ ಸ್ಫೂರ್ತಿ ನೀಡಲಿ ಎಂದು ಶುಭ ಹಾರೈಸಿದರು.

ಸಮೃದ್ಧ ಮತ್ತು ವಿಕಸಿತ ಭಾರತವನ್ನು ನಿರ್ಮಿಸಲು, ಹೊಸ ಹುರುಪು ಹಾಗೂ ದೃಢ ಸಂಕಲ್ಪದೊಂದಿಗೆ ಮುನ್ನಡೆಯುವಂತೆ ಕೋರುವ ಮೂಲಕ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದ್ದಾರೆ.

ದೀಪಾವಳಿ ಸಂಭ್ರಮದಲ್ಲಿ ಟ್ರಂಪ್​ ಭಾಗಿ:

ವೈಟ್ ಹೌಸ್‌ನಲ್ಲಿ ಶುಕ್ರವಾರ ನಡೆದ ದೀಪಾವಳಿ ಆಚರಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದರು. ಓವಲ್​ ಕಚೇರಿಯಲ್ಲಿ ನಡೆದ ಸಂಭ್ರಮದಲ್ಲಿ ಅಮೆರಿಕದಲ್ಲಿನ ಭಾರತದ ರಾಯಭಾರಿ ವಿನಯ್ ಕ್ವಾತ್ರಾ ಕೂಡ ಭಾಗಿಯಾಗಿದ್ದರು.

2003ರಲ್ಲಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ. ಬುಷ್ ವೈಟ್​ಹೌಸ್​ನಲ್ಲಿ ದೀಪಾವಳಿ ಆಚರಿಸುವ ಸಂಪ್ರದಾಯ ಪ್ರಾರಂಭಿಸಿದರು. ಇದಕ್ಕೂ ಮೊದಲು, ಈ ಕಾರ್ಯಕ್ರಮಗಳನ್ನು ಹೆಚ್ಚಾಗಿ ಐಸೆನ್‌ಹೋವರ್ ಎಕ್ಸಿಕ್ಯೂಟಿವ್ ಆಫೀಸ್ ಕಟ್ಟಡದಲ್ಲಿ, ಭಾರತೀಯ ಅಮೆರಿಕನ್ ಸಮುದಾಯದ ಸದಸ್ಯರು ಮತ್ತು ಭಾರತೀಯ ರಾಜತಾಂತ್ರಿಕರ ಸಮ್ಮುಖದಲ್ಲಿ ನಡೆಸಲಾಗುತ್ತಿತ್ತು. (PM Narendra Modi)

2009ರಲ್ಲಿ, ಅಧ್ಯಕ್ಷ ಬರಾಕ್ ಒಬಾಮಾ ಅವರು ವೈಟ್ ಹೌಸ್‌ನ ಈಸ್ಟ್ ರೂಮ್​ನಲ್ಲಿ ನಡೆದ ಸಮಾರಂಭವೊಂದರಲ್ಲಿ ದೀಪವನ್ನು ಬೆಳಗಿದ ಮೊದಲ ಅಧ್ಯಕ್ಷರಾದರು. ಅಂದಿನಿಂದ, ಓವಲ್ ಆಫೀಸ್ ಮತ್ತು ರೂಸ್‌ವೆಲ್ಟ್ ರೂಮ್ ಸೇರಿದಂತೆ ವೈಟ್ ಹೌಸ್‌ನ ವಿವಿಧ ಸ್ಥಳಗಳಲ್ಲಿ ದೀಪ ಬೆಳಗುವ ಸಮಾರಂಭಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.

MGNREGA: ಮನ್ರೇಗಾ ಕಾರ್ಮಿಕರಿಗೆ ಸಿಹಿಸುದ್ದಿ! ಬಾಕಿ ಕೂಲಿ ₹35 ಕೋಟಿ ಬಿಡುಗಡೆ – ಈಶ್ವರ ಖಂಡ್ರೆ ಘೋಷಣೆ, ಖಾತೆಗೆ ನೇರ ಜಮಾ

ಸೈನಿಕರಿಗೆ ವಿಶೇಷ ಸ್ಮರಣೆ

ಇದೇ ವೇಳೆ ಗಡಿಯಲ್ಲಿ ದೇಶ ಕಾಯುತ್ತಿರುವ ಯೋಧರನ್ನು ಸ್ಮರಿಸಿದ ಪ್ರಧಾನಿ ಮೋದಿ (PM Narendra Modi), ತಮ್ಮ ಕುಟುಂಬಗಳಿಂದ ದೂರವಿದ್ದು ದೇಶಕ್ಕಾಗಿ ದೀಪಾವಳಿ ಆಚರಿಸುತ್ತಿರುವ ಯೋಧರ ತ್ಯಾಗಕ್ಕೆ ದೇಶ ಸದಾ ಋಣಿಯಾಗಿದೆ ಎಂದು ಹೇಳಿದ್ದಾರೆ. ಪ್ರತಿಯೊಬ್ಬ ನಾಗರಿಕರು ದೀಪ ಬೆಳಗಿಸುವಾಗ ಯೋಧರಿಗಾಗಿ ಒಂದು ದೀಪ ಬೆಳಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಪರಿಸರ ಸ್ನೇಹಿ ದೀಪಾವಳಿ ಆಚರಿಸಿ

ಪಟಾಕಿ ಸಿಡಿಸುವಾಗ ಎಚ್ಚರಿಕೆ ವಹಿಸಿ, ಪರಿಸರ ಸ್ನೇಹಿ ಮತ್ತು ಸುರಕ್ಷಿತ ದೀಪಾವಳಿ ಆಚರಿಸಬೇಕು ಎಂದು ಪ್ರಧಾನಿ (PM Narendra Modi) ಕಿವಿಮಾತು ಹೇಳಿದ್ದಾರೆ. ಮಕ್ಕಳು ಮತ್ತು ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಸಂತಸದ ಹಬ್ಬವು ಎಲ್ಲರಿಗೂ ಸುರಕ್ಷಿತವಾಗಿರಲಿ ಎಂದು ಅವರು ಹಾರೈಸಿದ್ದಾರೆ. ದೇಶಾದ್ಯಂತ ಅಯೋಧ್ಯೆ, ವಾರಾಣಸಿ, ಬೆಂಗಳೂರು, ಮೈಸೂರು ಸೇರಿದಂತೆ ಎಲ್ಲೆಡೆ ದೀಪಾವಳಿ ಸಂಭ್ರಮ ಜೋರಾಗಿದೆ.