Horoscope: ಇಂದಿನ ರಾಶಿ ಭವಿಷ್ಯ 5 ನವೆಂಬರ್ 2026: ಗುರುರಾಯರ ಕೃಪೆಯಿಂದ ಈ 4 ರಾಶಿಗಳಿಗೆ ಭರ್ಜರಿ ಧನಲಾಭ, ಯಾರಿಗೆ ಎಚ್ಚರಿಕೆ?

ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ, ಬ್ರಹ್ಮ ಯೋಗ ಹಾಗೂ ಬುಧಾದಿತ್ಯ ಯೋಗ; ಮೇಷದಿಂದ ಮೀನದವರೆಗೆ ನಿಮ್ಮ ಇಂದಿನ ದಿನ ಹೇಗಿದೆ? ಇಲ್ಲಿದೆ ಸಂಪೂರ್ಣ ವಿವರ (Horoscope)

 horoscope
ಮೇಷದಿಂದ ಮೀನದವರೆಗೆ 12 ರಾಶಿಗಳ ದಿನ ಭವಿಷ್ಯ – ಗುರುವಾರ 5 ನವೆಂಬರ್ 2026 (Horoscope)

ಇಂದಿನ ಪಂಚಾಂಗ (Horoscope)

ದಿನಾಂಕ: 5 ನವೆಂಬರ್ 2026, ಗುರುವಾರ
ಸಂವತ್ಸರ: ಶ್ರೀ ಪರಾಭವ ನಾಮ ಸಂವತ್ಸರ
ಆಯನ: ದಕ್ಷಿಣಾಯನ, ಋತು: ಶರತ್ ಋತು
ಮಾಸ: ಆಶ್ವಯುಜ, ಪಕ್ಷ: ಕೃಷ್ಣ ಪಕ್ಷ
ತಿಥಿ: ಏಕಾದಶಿ ಬೆಳಿಗ್ಗೆ 10:36 ರವರೆಗೆ, ನಂತರ ದ್ವಾದಶಿ
ನಕ್ಷತ್ರ: ಉತ್ತರಾಫಲ್ಗುಣಿ ಮರುದಿನ ಮುಂಜಾನೆ 3:56 ರವರೆಗೆ, ನಂತರ ಹಸ್ತ
ಯೋಗ: ಬ್ರಹ್ಮ ಯೋಗ, ಕರಣ: ಬವ ಕರಣ
ಸೂರ್ಯೋದಯ: ಬೆಳಿಗ್ಗೆ 6:15, ಸೂರ್ಯಾಸ್ತ: ಸಂಜೆ 5:52
ರಾಹುಕಾಲ: ಮಧ್ಯಾಹ್ನ 1:30 ರಿಂದ 2:57 ರವರೆಗೆ
ಗುಳಿಕ ಕಾಲ: ಬೆಳಿಗ್ಗೆ 9:15 ರಿಂದ 10:40 ರವರೆಗೆಇಂದಿನ ವಿಶೇಷ: ಚಂದ್ರ ಕನ್ಯಾ ರಾಶಿಯಲ್ಲಿ ಸಂಚರಿಸುವುದರಿಂದ ಕೆಲಸದಲ್ಲಿ ಶಿಸ್ತು, ಹಣಕಾಸಿನಲ್ಲಿ ಲೆಕ್ಕಾಚಾರ ಮುಖ್ಯವಾಗಲಿದೆ. ಗುರು ವಾರವಾದ್ದರಿಂದ ದತ್ತಾತ್ರೇಯ ಮತ್ತು ರಾಘವೇಂದ್ರ ಸ್ವಾಮಿಗಳ ಆರಾಧನೆಗೆ ಶ್ರೇಷ್ಠ ದಿನ.

1. ಮೇಷ ರಾಶಿ: ಕೆಲಸದಲ್ಲಿ ಸಕ್ರಿಯರಾಗಿರಿ (Horoscope)
ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಮುನ್ನಡೆಯುವ ದಿನ. ಹಳೆಯ ಬಾಕಿ ಕೆಲಸಗಳು ಮುಗಿಯುತ್ತವೆ. ಅನಗತ್ಯ ಖರ್ಚಿನ ಬಗ್ಗೆ ಎಚ್ಚರವಿರಲಿ, ಸಾಲ ಪಡೆಯಬೇಡಿ. ಹಿರಿಯರ ಸಲಹೆ ಲಾಭ ತರಲಿದೆ.
ಅದೃಷ್ಟ ಬಣ್ಣ: ಕೆಂಪು, ಅದೃಷ್ಟ ಸಂಖ್ಯೆ: 9

2. ವೃಷಭ ರಾಶಿ: ಕುಟುಂಬದಲ್ಲಿ ಸಂತಸ
ಸ್ನೇಹಿತರು ಮತ್ತು ಪ್ರೀತಿಪಾತ್ರರ ಜೊತೆ ಉತ್ತಮ ಸಮಯ ಕಳೆಯುವಿರಿ. ಬೆಲೆಬಾಳುವ ವಸ್ತು ಖರೀದಿ ಯೋಗ. ಕೆಲಸದಲ್ಲಿ ಹೊಸ ಜವಾಬ್ದಾರಿ ಸಿಗಲಿದೆ. ಆರ್ಥಿಕವಾಗಿ ಸ್ಥಿರತೆ ಇರಲಿದೆ.
ಅದೃಷ್ಟ ಬಣ್ಣ: ಬಿಳಿ, ಅದೃಷ್ಟ ಸಂಖ್ಯೆ: 6

3. ಮಿಥುನ ರಾಶಿ: ಹೊಸ ಆದಾಯದ ಮಾರ್ಗ
ಮನೆ, ಕುಟುಂಬದ ವಿಷಯಗಳಿಗೆ ಹೆಚ್ಚು ಗಮನ ನೀಡುವಿರಿ. ನಿಂತು ಹೋಗಿದ್ದ ಕೆಲಸಗಳು ಮತ್ತೆ ಆರಂಭವಾಗುತ್ತವೆ. ಅನಗತ್ಯ ವಾದಗಳಿಂದ ದೂರವಿರಿ. ಹಳೆಯ ಸ್ನೇಹಿತರ ಭೇಟಿಯಿಂದ ಲಾಭ.
ಅದೃಷ್ಟ ಬಣ್ಣ: ಹಸಿರು, ಅದೃಷ್ಟ ಸಂಖ್ಯೆ: 5

4. ಕರ್ಕಾಟಕ ರಾಶಿ: ಮಾತಿನಿಂದ ಜಯ (Horoscope)
ವಾಕ್ಚಾತುರ್ಯದಿಂದ ಎಲ್ಲರನ್ನು ಆಕರ್ಷಿಸುವಿರಿ. ವಿದೇಶ ಪ್ರಯಾಣದ ಪ್ರಯತ್ನಗಳು ಫಲ ನೀಡುತ್ತವೆ. ಆದರೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ಅನಗತ್ಯ ಖರ್ಚು ಬೇಡ.
ಅದೃಷ್ಟ ಬಣ್ಣ: ಕ್ಷೀರ ಬಿಳಿ, ಅದೃಷ್ಟ ಸಂಖ್ಯೆ: 2

5. ಸಿಂಹ ರಾಶಿ: ಧನಲಾಭದಿಂದ ಸಾಲ ಮುಕ್ತಿ
ಬಂಧು-ಮಿತ್ರರ ಭೇಟಿ, ಆಕಸ್ಮಿಕ ಧನಲಾಭದಿಂದ ಸಾಲದ ಚಿಂತೆ ದೂರವಾಗಲಿದೆ. ಹೊಸ ಗೃಹ ನಿರ್ಮಾಣದ ಪ್ರಯತ್ನಕ್ಕೆ ಶುಭ ದಿನ. ಕುಟುಂಬ ಸೌಖ್ಯ, ಶತ್ರು ಭಯ ದೂರ.
ಅದೃಷ್ಟ ಬಣ್ಣ: ಕೇಸರಿ, ಅದೃಷ್ಟ ಸಂಖ್ಯೆ: 1

6. ಕನ್ಯಾ ರಾಶಿ: ಯೋಜನೆಗಳು ಯಶಸ್ವಿ
ಚಂದ್ರ ನಿಮ್ಮ ರಾಶಿಯಲ್ಲಿ ಇರುವುದರಿಂದ ನಿಮ್ಮ ಯೋಜನೆಗಳೆಲ್ಲವೂ ಸಫಲವಾಗುತ್ತವೆ. ಜೀವನಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳಿ. ಮಾನಸಿಕ ಒತ್ತಡಕ್ಕೆ ಮೆಡಿಟೇಶನ್ ಮಾಡಿ.
ಅದೃಷ್ಟ ಬಣ್ಣ: ನೀಲಿ, ಅದೃಷ್ಟ ಸಂಖ್ಯೆ: 5

IND vs NZ: ಅಕ್ಲಂಡ್‌ನಲ್ಲಿ ಕಿಂಗ್ ಕೊಹ್ಲಿ ದರ್ಬಾರ್, ಅರ್ಶದೀಪ್ ಅಬ್ಬರ; ಕಿವೀಸ್ ನಾಡಲ್ಲಿ ಟೀಂ ಇಂಡಿಯಾ ಶುಭಾರಂಭ

7. ತುಲಾ ರಾಶಿ: ಶಾಂತವಾಗಿ ಯೋಚಿಸಿ
ಹಿಂದೆ ಮಾಡಿದ ಕೆಲಸಗಳ ಬಗ್ಗೆ ಶಾಂತವಾಗಿ ಯೋಚಿಸುವ ದಿನ. ದೊಡ್ಡ ಕೆಲಸಗಳನ್ನು ಪ್ರಾರಂಭಿಸದೆ ಬಾಕಿ ಕೆಲಸ ಮುಗಿಸಿ. ಪ್ರಯಾಣದಲ್ಲಿ ಖರ್ಚು ಹೆಚ್ಚಾಗಬಹುದು, ಹಣಕಾಸಿನಲ್ಲಿ ಹಿಡಿತವಿರಲಿ.
ಅದೃಷ್ಟ ಬಣ್ಣ: ಗುಲಾಬಿ, ಅದೃಷ್ಟ ಸಂಖ್ಯೆ: 6

8. ವೃಶ್ಚಿಕ ರಾಶಿ: ಟೀಂ ವರ್ಕ್‌ನಿಂದ ಗೆಲುವು
ಸಾಮೂಹಿಕ ಕೆಲಸ, ಸ್ನೇಹಿತರ ಸಹಕಾರದಿಂದ ಭಾರಿ ಲಾಭ. ಹಳೆಯ ಹೂಡಿಕೆಯಿಂದ ಹಣ ವಾಪಸ್ ಬರಲಿದೆ. ಪ್ರೀತಿಪಾತ್ರರ ಜೊತೆ ಭವಿಷ್ಯದ ಯೋಜನೆ ಹಂಚಿಕೊಳ್ಳಿ.
ಅದೃಷ್ಟ ಬಣ್ಣ: ಕಡು ಕೆಂಪು, ಅದೃಷ್ಟ ಸಂಖ್ಯೆ: 9

9. ಧನು ರಾಶಿ: ವೃತ್ತಿಯಲ್ಲಿ ಪ್ರಗತಿ
ವೃತ್ತಿ ಜೀವನದಲ್ಲಿ ನಿಮ್ಮ ನಾಯಕತ್ವ ಗುಣಕ್ಕೆ ಮೆಚ್ಚುಗೆ ಸಿಗಲಿದೆ. ಕೆಲಸದಲ್ಲಿ ಸಾರ್ವಜನಿಕ ಗೌರವ ಹೆಚ್ಚಲಿದೆ. ಆದರೆ ಮನೆ ಮತ್ತು ಕೆಲಸದ ನಡುವೆ ಸಮತೋಲನ ಕಾಪಾಡಿ.
ಅದೃಷ್ಟ ಬಣ್ಣ: ಹಳದಿ, ಅದೃಷ್ಟ ಸಂಖ್ಯೆ: 3

10. ಮಕರ ರಾಶಿ: ಸಂಪತ್ತು ಮತ್ತು ಗೌರವ
ಇಂದು ಅತ್ಯಂತ ಶುಭ ದಿನ. ಕೆಲಸದಲ್ಲಿ ಬಡ್ತಿ, ವ್ಯಾಪಾರದಲ್ಲಿ ಲಾಭದ ಯೋಗ. ಸಮಾಜದಲ್ಲಿ ಗೌರವ ಹೆಚ್ಚಲಿದೆ. ದೀರ್ಘಕಾಲದ ಸಮಸ್ಯೆಗಳು ಪರಿಹಾರವಾಗುತ್ತವೆ.
ಅದೃಷ್ಟ ಬಣ್ಣ: ಕಂದು, ಅದೃಷ್ಟ ಸಂಖ್ಯೆ: 8

11. ಕುಂಭ ರಾಶಿ: ಹೊಸ ಅವಕಾಶಗಳು
ಹೊಸ ಜವಾಬ್ದಾರಿ ಮತ್ತು ಹೊಸ ಅವಕಾಶಗಳು ಎದುರಾಗುತ್ತವೆ. ಆರ್ಥಿಕವಾಗಿ ಉತ್ತಮ ದಿನ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಸಂಗಾತಿಯಿಂದ ಸಂಪೂರ್ಣ ಬೆಂಬಲ.
ಅದೃಷ್ಟ ಬಣ್ಣ: ನೇರಳೆ, ಅದೃಷ್ಟ ಸಂಖ್ಯೆ: 4

12. ಮೀನ ರಾಶಿ: ಶುಭ ಸುದ್ದಿ
ಇಂದು ಶುಭ ದಿನ, ಸಂಪತ್ತು ಮತ್ತು ಗೌರವ ಎರಡೂ ಸಿಗಲಿದೆ. ಕುಟುಂಬದಲ್ಲಿ ಮಂಗಳಕರ್ಯದ ಮಾತುಕತೆ ನಡೆಯಬಹುದು. ಆರೋಗ್ಯದಲ್ಲಿ ಸುಧಾರಣೆ, ಮನಸ್ಸಿಗೆ ನೆಮ್ಮದಿ.
ಅದೃಷ್ಟ ಬಣ್ಣ: ತಿಳಿ ಹಳದಿ, ಅದೃಷ್ಟ ಸಂಖ್ಯೆ: 7

ಗಮನಿಸಿ: ಇದು ಗೋಚಾರ ಆಧಾರಿತ ಸಾಮಾನ್ಯ ಭವಿಷ್ಯ. ನಿಮ್ಮ ವೈಯಕ್ತಿಕ ಜಾತಕದ ದಶಾ-ಭುಕ್ತಿಯನ್ನು ಅವಲಂಬಿಸಿ ಫಲಿತಾಂಶದಲ್ಲಿ ಬದಲಾವಣೆ ಇರಬಹುದು.