Diwali Special Train: ದೀಪಾವಳಿಗೆ ಊರಿಗೆ ಹೋಗುವವರಿಗೆ ಗುಡ್ ನ್ಯೂಸ್, ಯಶವಂತಪುರ-ಮಡಗಾಂವ್ ನಡುವೆ 1 ವಿಶೇಷ ರೈಲು ಘೋಷಣೆ!

ದೀಪಾವಳಿ 4 ದಿನ ಸರಣಿ ರಜೆ ಹಿನ್ನೆಲೆ SWR ನಿಂದ ಗುಡ್ ನ್ಯೂಸ್. ಯಶವಂತಪುರ-ಮಡಗಾಂವ್-ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಶೇಷ ರೈಲು (Diwali Special Train) ಘೋಷಣೆ. ಹಾಸನ, ಮಂಗಳೂರು, ಉಡುಪಿ, ಕಾರವಾರ ಮಾರ್ಗದಲ್ಲಿ ಸಂಚಾರ.

4 ದಿನ ಸರಣಿ ರಜೆ ಹಿನ್ನೆಲೆ SWR ನಿಂದ ವಿಶೇಷ ರೈಲು ಸೇವೆ; ಮಲೆನಾಡು-ಕರಾವಳಿ ಜನರಿಗೆ ಅನುಕೂಲ – ಇಲ್ಲಿದೆ ವೇಳಾಪಟ್ಟಿ (Diwali Special Train)

ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಜನರಿಗೆ ಸಿಹಿಸುದ್ದಿ. ನವೆಂಬರ್‌ನಲ್ಲಿ 4 ದಿನಗಳ ಸರಣಿ ರಜೆ ಬಂದಿರುವ ಹಿನ್ನೆಲೆ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ನೈರುತ್ಯ ರೈಲ್ವೆ (SWR) ಯಶವಂತಪುರ-ಮಡಗಾಂವ್-ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಶೇಷ ರೈಲುಗಳ ಸಂಚಾರ (Diwali Special Train) ಘೋಷಿಸಿದೆ.

Diwali Special Train
Diwali Special Train: ಯಶವಂತಪುರ-ಮಡಗಾಂವ್ ನಡುವೆ ದೀಪಾವಳಿ ವಿಶೇಷ ರೈಲು – ವೇಳಾಪಟ್ಟಿ ಇಲ್ಲಿದೆ

4 ದಿನ ಸರಣಿ ರಜೆ – ದಟ್ಟಣೆ ನಿಭಾಯಿಸಲು ವಿಶೇಷ ರೈಲು (Diwali Special Train)

ದೀಪಾವಳಿ ಹಬ್ಬ ನವೆಂಬರ್ ಮೊದಲ ವಾರಾಂತ್ಯದಲ್ಲಿ ಬಂದಿದೆ. ಶನಿವಾರ, ಭಾನುವಾರ ವಾರಾಂತ್ಯ ರಜೆ, ಸೋಮವಾರ ಪೂಜೆ ಹಿನ್ನೆಲೆ ಖಾಸಗಿ ಕಂಪನಿಗಳಿಗೆ ರಜೆ ಹಾಗೂ ಮಂಗಳವಾರ ಬಲಿಪಾಡ್ಯ ಸರ್ಕಾರಿ ರಜೆ. ಹೀಗಾಗಿ ಸತತ 4 ದಿನ ರಜೆ ಸಿಗುತ್ತಿದ್ದು, ಊರಿಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆ ಪ್ರತಿ ಮಾರ್ಗದಲ್ಲಿ ತಲಾ ಒಂದು ಟ್ರಿಪ್ ವಿಶೇಷ ರೈಲು ಓಡಿಸಲಿದೆ.

Namma Metro ಐತಿಹಾಸಿಕ ಮೈಲಿಗಲ್ಲು: ನ.13ಕ್ಕೆ ಗುಲಾಬಿ ಮಾರ್ಗ ಉದ್ಘಾಟನೆ – ಪ್ರಧಾನಿ ಮೋದಿಯಿಂದ ಲೋಕಾರ್ಪಣೆ!

ರೈಲಿನ ವೇಳಾಪಟ್ಟಿ ಏನು?

ರೈಲು ಸಂಖ್ಯೆ 06591 – ಯಶವಂತಪುರದಿಂದ ಮಡಗಾಂವ್‌ಗೆ:
ನವೆಂಬರ್ 6, ಶುಕ್ರವಾರ ರಾತ್ರಿ 11:55ಕ್ಕೆ ಯಶವಂತಪುರದಿಂದ ಹೊರಟು, ನ.7 ಶನಿವಾರ ಮಧ್ಯಾಹ್ನ 2:10ಕ್ಕೆ ಮಡಗಾಂವ್ ತಲುಪಲಿದೆ.

ರೈಲು ಸಂಖ್ಯೆ 06592 – ಮಡಗಾಂವ್‌ನಿಂದ ಬೆಂಗಳೂರು ಕಂಟೋನ್ಮೆಂಟ್‌ಗೆ:
ನ.8 ಭಾನುವಾರ ಬೆಳಿಗ್ಗೆ 11 ಗಂಟೆಗೆ ಮಡಗಾಂವ್‌ನಿಂದ ಹೊರಟು, ನ.9 ಸೋಮವಾರ ಬೆಳಿಗ್ಗೆ 5:20ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ. ಈ ರೈಲು ಯಶವಂತಪುರದಲ್ಲಿ ನಿಲ್ಲುವುದಿಲ್ಲ, ಬದಲಾಗಿ SMVT ಬೆಂಗಳೂರಿನಲ್ಲಿ ನಿಲುಗಡೆ ಹೊಂದಿರುತ್ತದೆ.

ಎಲ್ಲೆಲ್ಲಿ ನಿಲುಗಡೆ?

ಈ ರೈಲುಗಳು ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟವಾಳ, ಮಂಗಳೂರು ಜಂಕ್ಷನ್, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲಾ, ಕಾರವಾರ ಮತ್ತು ಕಣಕೋಣ ನಿಲ್ದಾಣಗಳಲ್ಲಿ (Diwali Special Train) ನಿಲುಗಡೆಯಾಗಲಿದೆ. ಇದರಿಂದ ಮಲೆನಾಡು ಮತ್ತು ಕರಾವಳಿ ಭಾಗದ ಜನರಿಗೆ ದೊಡ್ಡ ಅನುಕೂಲವಾಗಲಿದೆ.

19 ಬೋಗಿಗಳ ರೈಲು – ಸೌಲಭ್ಯವೇನು? (Diwali Special Train)

ಈ ವಿಶೇಷ ರೈಲಿನಲ್ಲಿ ಒಟ್ಟು 19 ಬೋಗಿಗಳಿದ್ದು, ಎಸಿ, ಸ್ಲೀಪರ್, ಜನರಲ್ ಕ್ಲಾಸ್ ಮತ್ತು ಲಗೇಜ್-ಕಮ್-ಬ್ರೇಕ್ ವ್ಯಾನ್ ಜೊತೆಗೆ ದಿವ್ಯಾಂಗಚೇತನರಿಗೆ ಮೀಸಲಾದ ಬೋಗಿಯೂ ಇರಲಿದೆ.