Namma Metro ಐತಿಹಾಸಿಕ ಮೈಲಿಗಲ್ಲು: ನ.13ಕ್ಕೆ ಗುಲಾಬಿ ಮಾರ್ಗ ಉದ್ಘಾಟನೆ – ಪ್ರಧಾನಿ ಮೋದಿಯಿಂದ ಲೋಕಾರ್ಪಣೆ!

ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ 7.5 ಕಿ.ಮೀ ಮೊದಲ ಹಂತ ಆರಂಭ; ಉದ್ಘಾಟನೆಯೊಂದಿಗೆ 100 ಕಿ.ಮೀ ಗಡಿ ದಾಟಲಿದೆ ಬೆಂಗಳೂರು Namma Metro

ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ 7.5 ಕಿ.ಮೀ ಮೊದಲ ಹಂತ ಆರಂಭ; ಉದ್ಘಾಟನೆಯೊಂದಿಗೆ 100 ಕಿ.ಮೀ ಗಡಿ ದಾಟಲಿದೆ ಬೆಂಗಳೂರು Namma Metro

ಬೆಂಗಳೂರು (ನ.04): ಸಿಲಿಕಾನ್ ಸಿಟಿ ಟ್ರಾಫಿಕ್‌ಗೆ ಬೇಸತ್ತಿರುವ ಜನರಿಗೆ ಸಿಹಿಸುದ್ದಿ. ಬೆಂಗಳೂರಿನ ಬಹುನಿರೀಕ್ಷಿತ ಗುಲಾಬಿ ಮಾರ್ಗದ (Pink Line) ಮೊದಲ ಹಂತ ನವೆಂಬರ್ 13ರಂದು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಈ ಮಾರ್ಗವನ್ನು (Namma Metro) ಲೋಕಾರ್ಪಣೆ ಮಾಡಲಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಅಧಿಕೃತವಾಗಿ ಘೋಷಿಸಿದ್ದಾರೆ.

Namma Metro
ಬೆಂಗಳೂರಿನ ಬಹುನಿರೀಕ್ಷಿತ ಗುಲಾಬಿ ಮಾರ್ಗ (Pink Line) ನ.13ಕ್ಕೆ ಉದ್ಘಾಟನೆ. ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ 6 ನಿಲ್ದಾಣ ಆರಂಭ. ಪ್ರಧಾನಿ ಮೋದಿಯಿಂದ ಲೋಕಾರ್ಪಣೆ, 100 ಕಿ.ಮೀ ದಾಟಲಿದೆ ನಮ್ಮ ಮೆಟ್ರೋ – niyatamnews.com

100 ಕಿ.ಮೀ ಗಡಿ ದಾಟಲಿದೆ ನಮ್ಮ ಮೆಟ್ರೋ (Namma Metro)

ಈ ಕುರಿತು ಮಾಹಿತಿ ಹಂಚಿಕೊಂಡ ಸಚಿವರು, ‘ಸಂಚಾರ ದಟ್ಟಣೆ ಕಡಿಮೆ ಮಾಡುವ ನಮ್ಮ ಸಂಕಲ್ಪ ಸಾಕಾರಗೊಳ್ಳುತ್ತಿದೆ. ಈ ನೂತನ ಮಾರ್ಗದೊಂದಿಗೆ ಬೆಂಗಳೂರು ಮೆಟ್ರೋ ಜಾಲ 100 ಕಿಲೋಮೀಟರ್ ಗಡಿ ದಾಟಿ ಇತಿಹಾಸ ಬರೆಯಲಿದೆ. 2027ರ ವೇಳೆಗೆ ಮೆಟ್ರೋ (Namma Metro) ಜಾಲವನ್ನು 170 ಕಿ.ಮೀ.ಗೆ ವಿಸ್ತರಿಸುವ ಬೃಹತ್ ಗುರಿ ಹೊಂದಿದ್ದೇವೆ’ ಎಂದಿದ್ದಾರೆ.

KSRTC Bus Ticket: ಜನರ ಜೇಬಿಗೆ ಮತ್ತೆ ಕತ್ತರಿ: ರಾಜ್ಯದಲ್ಲಿ ಬಸ್ ಟಿಕೆಟ್ ದರ ಶೇ.35ರಷ್ಟು ಏರಿಕೆ – ಇಂದಿನಿಂದಲೇ ಜಾರಿ!

ಯಾವೆಲ್ಲಾ ನಿಲ್ದಾಣಗಳು ಆರಂಭವಾಗಲಿವೆ?

ಒಟ್ಟು 21.26 ಕಿ.ಮೀ ಉದ್ದದ ಗುಲಾಬಿ ಮಾರ್ಗದಲ್ಲಿ ಸದ್ಯ ಕಾಮಗಾರಿ ಪೂರ್ಣಗೊಂಡಿರುವ ಕಾಳೇನ ಅಗ್ರಹಾರದಿಂದ ತಾವರೆಕೆರೆ ನಡುವಿನ 7.5 ಕಿ.ಮೀ ಎತ್ತರಿಸಿದ ಮಾರ್ಗ ಮೊದಲ ಹಂತದಲ್ಲಿ ಆರಂಭವಾಗಲಿದೆ.

ಈ ಮಾರ್ಗದಲ್ಲಿ 6 ನಿಲ್ದಾಣಗಳು ಕಾರ್ಯಾರಂಭ ಮಾಡಲಿವೆ:

  1. ಕಾಳೇನ ಅಗ್ರಹಾರ
  2. ಹುಳಿಮಾವು
  3. ಐಐಎಂ-ಬಿ (ಬಿಳೇಕಹಳ್ಳಿ)
  4. ಜೆ.ಪಿ. ನಗರ 4ನೇ ಹಂತ
  5. ಜಯದೇವ ಆಸ್ಪತ್ರೆ
  6. ತಾವರೆಕೆರೆ

ಜಯದೇವ ನಿಲ್ದಾಣವೇ ಮಹಾ ಜಂಕ್ಷನ್ (Namma Metro)

ಈ ಮಾರ್ಗದ ಪ್ರಮುಖ ಆಕರ್ಷಣೆಯೆಂದರೆ ಜಯದೇವ ಆಸ್ಪತ್ರೆ ನಿಲ್ದಾಣ. ಇದು ಹಳದಿ ಮಾರ್ಗದೊಂದಿಗೆ (Yellow Line) ಸಂಪರ್ಕ ಸಾಧಿಸುವ ಪ್ರಮುಖ ಇಂಟರ್‌ಚೇಂಜ್ ನಿಲ್ದಾಣವಾಗಲಿದೆ. ಹಳದಿ ಮಾರ್ಗವು ಆರ್.ವಿ. ರಸ್ತೆಯಲ್ಲಿ ಹಸಿರು ಮಾರ್ಗಕ್ಕೂ ಕನೆಕ್ಟ್ ಆಗುವುದರಿಂದ, ಗುಲಾಬಿ ಮಾರ್ಗದಲ್ಲಿ ಹತ್ತುವ ಪ್ರಯಾಣಿಕರು ನಗರದ ಯಾವುದೇ ಮೂಲೆಗೆ ಮೆಟ್ರೋ ಮೂಲಕವೇ ತಲುಪಬಹುದಾಗಿದೆ. ಉದ್ಘಾಟನೆ ವೇಳೆ ಪ್ರಧಾನಿ ಮೋದಿ ಮೆಟ್ರೋದಲ್ಲಿ ಸಂಚರಿಸಿ ಸಾರ್ವಜನಿಕರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ದೇಶದಲ್ಲಿ ಬೆಂಗಳೂರು ಮೆಟ್ರೋ ಸ್ಥಾನವೇನು?

ದೇಶದ ಅತಿದೊಡ್ಡ ಮೆಟ್ರೋ ದೆಹಲಿ 410 ಕಿ.ಮೀ ಹೊಂದಿದ್ದು ಮೊದಲ ಸ್ಥಾನದಲ್ಲಿದೆ. ಮುಂಬೈ 102 ಕಿ.ಮೀ ಹೊಂದಿ 2ನೇ ಸ್ಥಾನದಲ್ಲಿದೆ. ನ.13ರಂದು ಗುಲಾಬಿ ಮಾರ್ಗ ಆರಂಭದೊಂದಿಗೆ ಬೆಂಗಳೂರು 100 ಕಿ.ಮೀ ದಾಟಿ 3ನೇ ಸ್ಥಾನಕ್ಕೆ ಬರಲಿದೆ. 2027ಕ್ಕೆ 170 ಕಿ.ಮೀ ತಲುಪಿದರೆ ಮುಂಬೈ ಹಿಂದಿಕ್ಕಿ 2ನೇ ಸ್ಥಾನಕ್ಕೇರಲಿದೆ.