BRICS Summit Masterplan 2026: ದೆಹಲಿಯ ದರ್ಬಾರ್ ನಲ್ಲಿ ಬ್ರಿಕ್ಸ್ ನಡುವೆ ಮೋದಿಜೀ hope ಕೈಹಿಡಿಯುತ್ತಾ?

ಅಮೆರಿಕ "ನಾವು ಹೇಳಿದ್ದೇ ನಿಯಮ" ಎನ್ನುತ್ತಿರುವ ಕಾಲದಲ್ಲಿ, ಮೋದಿ "ನಾವೇ ನಿಯಮ ಬರೆಯುತ್ತೇವೆ" ಎಂದು ಹೇಳಿರುವುದು ಅವರ ದಿಟ್ಟ ನಡೆಯನ್ನು ತೋರಿಸುತ್ತದೆ. ಆದರೆ, ಈ ಸಮ್ಮೇಳನ (BRICS Summit Masterplan) ದಲ್ಲಿ ಸಕರಾತ್ಮಕತೆ ಮತ್ತು ನಕರಾತ್ಮಕತೆ ಎಷ್ಟಿದೆ? ಎಂಬುದನ್ನು ನೋಡೋಣ.

ಜಿನ್‌ಪಿಂಗ್ ಭಾರತಕ್ಕೆ ಬಂದಿದ್ದು (BRICS Summit Masterplan) ಸ್ನೇಹಕ್ಕೋ ಅಥವಾ ಹೊಸ ಜಾಲ ಬೀಸುವುದಕ್ಕೋ? ಡಾಲರ್ ರಹಿತ ವ್ಯಾಪಾರದ ಕನಸು ನನಸಾಗುತ್ತಾ?

ಕಳೆದ ಎರಡು ದಿನಗಳಿಂದ ದೆಹಲಿಯಾಗಿಲ್ಲ, ಅದು ವಿಶ್ವದ ರಾಜಧಾನಿಯಾಗಿದೆ ಎಂದೇ ಹೇಳಬಹುದು. ಇದಕ್ಕೆ ಕಾರಣ ಬ್ರಿಕ್ಸ್ ಸಮ್ಮೇಳನ (BRICS Summit Masterplan). 11 ದೇಶಗಳ ನಾಯಕರನ್ನು ಒಂದೇ ವೇದಿಕೆಯಲ್ಲಿ ತಂದು ನಿಲ್ಲಿಸುವುದಲ್ಲದೇ, ಆ ಸಮ್ಮೇಳನಕ್ಕೆ ಅಧ್ಯಕ್ಷತೆ ವಹಿಸುವುದು ಸಾಮಾನ್ಯವಾದುದ್ದಲ್ಲ. ಅಮೆರಿಕ “ನಾವು ಹೇಳಿದ್ದೇ ನಿಯಮ” ಎನ್ನುತ್ತಿರುವ ಕಾಲದಲ್ಲಿ, ಮೋದಿ “ನಾವೇ ನಿಯಮ ಬರೆಯುತ್ತೇವೆ” ಎಂದು ಹೇಳಿರುವುದು ಅವರ ದಿಟ್ಟ ನಡೆಯನ್ನು ತೋರಿಸುತ್ತದೆ. ಆದರೆ, ಈ ಸಮ್ಮೇಳನದಲ್ಲಿ ಸಕರಾತ್ಮಕತೆ ಮತ್ತು ನಕರಾತ್ಮಕತೆ ಎಷ್ಟಿದೆ? ಎಂಬುದನ್ನು ನೋಡೋಣ.

ಎರಡು ವಿಚಾರಗಳಲ್ಲಿ ಸಕರಾತ್ಮಕತೆಯನ್ನು ಗಮನಿಸುವುದಾದರೆ,

  1. 7 ವರ್ಷಗಳ ನಂತರ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾರತಕ್ಕೆ ಬಂದಿದ್ದು, ಗಡಿಯಲ್ಲಿ ರಕ್ತ ಹರಿದ ನಂತರವೂ ಮಾತುಕತೆ ನಡೆಯುತ್ತಿದೆ ಎಂದರೆ ಅದು ಭಾರತದ ಗೆಲುವೇ ಎಂದು ಹೇಳಬಹುದು.
  2. ಡಾಲರ್ ಇಲ್ಲದ ವ್ಯಾಪಾರ. ಅಂದರೆ ಈ ಸಮ್ಮೇಳನದ ಬ್ರಹ್ಮಾಸ್ತ್ರವೆಂದೇ ಹೇಳಬಹುದು. ಅಮೆರಿಕ ನಿರ್ಬಂಧ ಹೇರಿದರೆ ನಾವು ರಷ್ಯಾದಿಂದ ತೈಲ ತರುವುದು ಹೇಗೆ ಎಂಬ ಚಿಂತೆ ಇತ್ತು. ಈಗ ರೂಪಾಯಿಯಲ್ಲಿ ವ್ಯಾಪಾರ ಮಾಡಿದರೆ? ಭಾರತದ ಆರ್ಥಿಕ ಸ್ವಾತಂತ್ರ್ಯಕ್ಕೆ ಇದು ಹೊಸ ಅಧ್ಯಾಯವೇ ಆಗಿದೆ.

ಇನ್ನೂ BRICS Summit Masterplan ನಕರಾತ್ಮಕತೆಯನ್ನು ನೋಡುವುದಾದರೆ,

ಇಲ್ಲಿ ಒಂದು ಪ್ರಶ್ನೆ ಮೂಡುತ್ತದೆ. ಅದೇನೆಂದರೆ, ಒಂದು ಬ್ರಿಕ್ಸ್ ನಲ್ಲಿ ಎಲ್ಲರೂ ಸ್ನೇಹಿತರಲ್ಲ ಎಂಬುದು ಎಷ್ಟು ನಿಜವೋ, ಅಷ್ಟೇ ಚೀನಾ ನಮ್ಮನ್ನು ಪ್ರೀತಿಯಿಂದ ಅಪ್ಪಿಕೊಳ್ಳುವುದಿಲ್ಲ ಎಂಬುದು ಅಷ್ಟೇ ಮುಖ್ಯ. ಆದರೆ, ಇದೀಗ ಬಂದಿರುವುದು ವ್ಯಾಪಾರಕ್ಕಾಗಿ ಮಾತ್ರವೆಂಬುದು ಎದ್ದು ಕಾಣುತ್ತದೆ. ಇನ್ನೂ ಇರಾನ್, ರಷ್ಯಾ ಜೊತೆ ನಾವು ಕೈಜೋಡಿಸಿದರೆ ಅಮೆರಿಕ ಕೆರಳುವುದಿಲ್ಲವೇ? ಅಮೆರಿಕ (USA) ಈಗಾಗಲೇ 25% ಸುಂಕ ಹೇರಿದೆ. ನಾಳೆ ಇನ್ನಷ್ಟು ಹೇರಿದರೆ ನಮ್ಮ ಐಟಿ, ನಮ್ಮ ರಫ್ತು ಉದ್ಯಮ ಏನಾಗಬೇಕು?

5 AM Club: ಬೆಳಗ್ಗೆ 5 ಗಂಟೆಗೆ ಏಳುವವರು ಯಾಕೆ ಯಾವಾಗಲೂ ಗೆಲ್ಲುತ್ತಾರೆ? Success ಸೀಕ್ರೆಟ್ ಬಯಲು!

ಇನ್ನೊಂದು, ಬ್ರಿಕ್ಸ್ (BRICS Summit Masterplan) ನಲ್ಲಿ ಘೋಷಣೆಗಳು ಜಾಸ್ತಿ, ಅನುಷ್ಠಾನ ಕಡಿಮೆ. ಕಳೆದ 10 ವರ್ಷದಿಂದ ಸಾಮಾನ್ಯ ಕರೆನ್ಸಿ ಬಗ್ಗೆ ಮಾತನಾಡುತ್ತಿದ್ದೇವೆ, ಆಗಿದ್ದೇನು? ಎಂಬುದನ್ನು ನಾವು ಯೋಚಿಸುತ್ತಿದ್ದೇವೆಯೇ?

ಒಟ್ಟಾರೆಯಾಗಿ, ಮೋದಿಯವರ ಈ ನಡೆ ರಾಜಕೀಯವಾಗಿ ದೊಡ್ಡ ಗೆಲುವೆಂದೇ ಹೇಳಬಹುದು. ಜಗತ್ತಿಗೆ ನಾವು “ಅಮೆರಿಕದ ಹಿಂದೆ ಹೋಗುವವರಲ್ಲ, ನಮ್ಮ ದಾರಿ ನಮಗಿದೆ” ಎಂದು ತೋರಿಸಿದ್ದೇವೆ. ಆದರೆ ಆರ್ಥಿಕವಾಗಿ ಇದು ಚಾಕುವಿನ ಮೇಲೆ ನಡೆಯುವಂತಹ ಕೆಲಸವಾಗಿದೆ ಎಂದೆನ್ನಬಹುದು.

ಬ್ರಿಕ್ಸ್ ಒಂದು ಅವಕಾಶ, ಆದರೆ ಅದನ್ನು ನಂಬಿ ಅಮೆರಿಕದಂತಹ ದೊಡ್ಡ ಮಾರುಕಟ್ಟೆಯನ್ನು ಕಳೆದುಕೊಳ್ಳಬಾರದು. ಮೋದಿ ವಿಶ್ವಗುರುವಾಗಬೇಕು, ವಿಶ್ವದ ವ್ಯಾಪಾರಿಯಷ್ಟೇ ಅಲ್ಲ. ದೇಶ ಮೊದಲು, ನಂತರವೇ ವೇದಿಕೆ ಎಂಬುದನ್ನು ಅರಿತುಕೊಳ್ಳಬೇಕು.