Ind vs Afg 3rd T20 Win: ಅಫ್ಘಾನಿಸ್ತಾನಕ್ಕೆ ಸರಣಿ ಸೋಲುಣಿಸಿದ ಶ್ರೇಯಸ್ ಪಡೆ, ಅಭಿಷೇಕ್ ಶರ್ಮಾ ವಿಶ್ವದಾಖಲೆ

ಸತತ ಮೂರು ಪಂದ್ಯಗಳಲ್ಲೂ ಬ್ಯಾಟಿಂಗ್ ಬೌಲಿಂಗ್‌ಗಳೆರಡರಲ್ಲೂ ಬಲಿಷ್ಟವಾಗಿ ಕಂಡುಬಂದ ಭಾರತ ತಂಡ, ಇಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನಕ್ಕೆ ಸರಣಿ (Ind vs Afg) ಸೋಲಿನ ಶಾಕ್ ನೀಡಿದೆ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಇಂದು ನಡೆದ ಭಾರತ-ಅಪ್ಘಾನಿಸ್ತಾನ (Ind vs Afg )ಸೌಹಾರ್ದ ಟಿ20 ಸರಣಿಯ ಮೂರನೇ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ಅಫ್ಘನ್ ತಂಡ ಹೀನಾಯ ಸೋಲನ್ನನುಭವಿಸಿದೆ. ಸತತ ಮೂರು ಪಂದ್ಯಗಳಲ್ಲೂ ಬ್ಯಾಟಿಂಗ್ ಬೌಲಿಂಗ್‌ಗಳೆರಡರಲ್ಲೂ ಬಲಿಷ್ಟವಾಗಿ ಕಂಡುಬಂದ ಭಾರತ ತಂಡ, ಇಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನಕ್ಕೆ ಸರಣಿ ಸೋಲಿನ ಶಾಕ್ ನೀಡಿದೆ.

Ind vs Afg : ಅಭಿಷೇಕ್ ಶರ್ಮಾ ವಿಶ್ವದಾಖಲೆ!

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡಕ್ಕೆ ಆರಂಭದಿಂದಲೇ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಸ್ಫೋಟಕ ಆರಂಭ ಒದಗಿಸಿದರು. ಅದರಲ್ಲೂ, ಕೇವಲ 30 ಎಸೆತಗಳಲ್ಲಿ 100 ರನ್ ಚಚ್ಚಿದ ಅಭಿಷೇಕ್ ಶರ್ಮಾ, ಟೆಸ್ಟ್ ಮಾನ್ಯತೆ ಪಡೆದ ದೇಶಗಳಲ್ಲಿ ಅತಿವೇಗದ ಶತಕ ಬಾರಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಈವರೆಗೆ ಆ ದಾಖಲೆ ಹಿಟ್‌ಮ್ಯಾನ್ ರೋಹಿತ್ ಶರ್ಮಾ (Rohit Sharma) ಅವರ ಹೆಸರಿನಲ್ಲಿತ್ತು.

ಅಭಿಷೇಕ್ ಶರ್ಮಾ ಅವರ ಬ್ಯಾಟಿನಿಂದ ಸಿಡಿದದ್ದು ಬರೋಬ್ಬರಿ 10 ಸಿಕ್ಸರ್ ಹಾಗೂ 9 ಬೌಂಡರಿಗಳು. ಒಂದೆಡೆ ವೇಗದ ಶತಕ ದಾಖಲಿಸಿದ ಅಭಿಷೇಕ್ ಶರ್ಮಾ ಅವರಿಗೆ ಸಂಜು ಸ್ಯಾಮ್ಸನ್ ಕೂಡ 35 ಎಸೆತಗಳಲ್ಲಿ ಅರ್ಧಶತಕ ಚಚ್ಚಿ ಜೊತೆಯಾಟ ನೀಡಿದ್ದರು.

Abhishek Sharma Ind vs Afg

ಅಭಿಷೇಕ್ ಶರ್ಮಾ ಅವರು ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಅವರ ದಾಳಿಗೆ ಕೀಪರ್ ರಹಮಾನುಲ್ಲಾ ಗುರ್ಬಾಜ್ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದ ನಂತರ, ತಂಡ ವೇಗವನ್ನು ಕಳೆದುಕೊಂಡಿತು. ನಾಯಕ ಶ್ರೇಯಸ್ ಅಯ್ಯರ್ ನಿಧಾನಗತಿಯಲ್ಲಿ ಆಟವಾಡಿ 29 ರನ್ ಗಳಿಸಿ ಇನ್ನೂ 3 ಎಸೆತಗಳು ಬಾಕಿ ಇರುವಾಗಲೇ ರನ್‌ಔಟ್‌ಗೆ ಬಲಿಯಾದರು. ಇನ್ನುಳಿದಂತೆ ಎಲ್ಲರದ್ದೂ ಒಂದಂಕಿಯ ಕೊಡುಗೆಯಷ್ಟೇ.

Anant Nag: ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ: ಕನ್ನಡದ ಹೆಮ್ಮೆಯ ಪಯಣಕ್ಕೆ ರಾಷ್ಟ್ರದ ಸಲಾಂ

Ind vs Afg : ಭಾರತೀಯರ ಬಿಗುದಾಳಿಗೆ 94 ರನ್ನುಗಳಿಗೆ ಆಲೌಟಾದ ಅಫ್ಘನ್ನರು

ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ನೀಡಿದ 222 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಅಪ್ಘಾನಿಸ್ತಾನ, ಕೇವಲ 47 ರನ್ನುಗಳಿಗೆ ಅಗ್ರ 4 ವಿಕೆಟ್ ಕಳೆದುಕೊಂಡು ಪೇಚಿಗೆ ಸಿಲುಕಿತ್ತು. ಅನಂತರ ಒಂದೊಂದೇ ವಿಕೆಟ್ ಉರುಳಿದಂತೆ ಕೇವಲ 94 ರನ್ನುಗಳಿಗೆ ಶರಣಾಗಿ, ಭಾರತಕ್ಕೆ ಸರಣಿಯನ್ನೊಪ್ಪಿಸಿದೆ (Ind vs Afg ). ಅಫ್ಘನ್ ತಂಡದ ಪರ ಅತಿ ಹೆಚ್ಚು ರನ್ ಬಾರಿಸಿದ್ದು ನಾಯಕ ಇಬ್ರಾಹಿಂ ಜದ್ರಾನ್, ಕೇವಲ 25.

ಈ ಸರಣಿ (Ind vs Afg)ಗೆಲುವಿನೊಂದಿಗೆ ಶ್ರೇಯಸ್ ಪಡೆ ಸರಣಿ ಗೆಲುವಿನ ನಗೆ ಬೀರಿದ್ದು, ಐರ್ಲೆಂಡ್ ಹಾಗೂ ಇಂಗ್ಲೆಂಡ್‌‌‌‌‌‌‌ನಲ್ಲಾದ ಮುಖಭಂಗವನ್ನು ಮರೆಯುವಂತಾಗಿದೆ. ಭಾರತದ ಪರ ನಿತೀಶ್ ಕುಮಾರ್ ರೆಡ್ಡಿ ಹಾಗೂ ಅಕ್ಷರ್ ಪಟೇಲ್ ಅವರ ಉತ್ತಮ ಸಂಘಟಿತ ದಾಳಿ, ಈ ಸರಣಿಯಲ್ಲಿ ಹಾಗೂ ಮುಂದಿನ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಭಾರತಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.