ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿ (Ind vs WI Squad) ಗೆ ಬಿಸಿಸಿಐ (BCCI) ಬಲಿಷ್ಟ ತಂಡಗಳನ್ನು ಇಂದು ಪ್ರಕಟಿಸಿದೆ. ಅನುಭವಿ ಆಟಗಾರರೊಂದಿಗೆ, ನೂತನ ಆಟಗಾರರು ಕೂಡ ಸ್ಥಾನ ಪಡೆದಿದ್ದಾರೆ. ಯಾರಿಗೆಲ್ಲಾ ಟಿಕೆಟ್ ಸಿಕ್ಕಿದೆ? ಯಾರಿಗೆಲ್ಲಾ ಗೇಟ್ ಪಾಸ್ ನೀಡಲಾಗಿದೆ ನೋಡೋಣ ಬನ್ನಿ.
Ind vs WI Squad: ಏಕದಿನ ತಂಡಕ್ಕೆ ಮರಳಿದ ರೋ-ಕೊ ಜೋಡಿ
ಹಲವು ಸಮಯದ ನಂತರ ಏಕದಿನ ಸರಣಿಯಲ್ಲಿ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯವರನ್ನು ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ. ಈ ಇಬ್ಬರೂ ಹಿರಿಯ ಆಟಗಾರರು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಲಭ್ಯರಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.
ವೆಸ್ಟ್ ಇಂಡೀಸ್ ಏಕದಿನ ಸರಣಿಗೆ ಈ ಪ್ರಮುಖ ಆಟಗಾರ ಅಲಭ್ಯ
ಕಳೆದ ವಿಶ್ವಕಪ್‌ನಲ್ಲಿ ಭಾರತದ ಪ್ರಮುಖ ಮ್ಯಾಚ್‌ಗಳಲ್ಲಿ ರನ್ ಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಭಾರತದ ನಂ.4 ಕ್ರಮಾಂಕದ ಆಟಗಾರ, ಟಿ20 ತಂಡದ ಸದ್ಯದ ನಾಯಕ ಶ್ರೇಯಸ್ ಅಯ್ಯರ್ ಈ ಬಾರಿಯ ಏಕದಿನ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಕಾರಣ, ಅದೇ ಸಮಯಕ್ಕೆ ನಡೆಯಲಿರುವ ಏಷ್ಯನ್ ಗೇಮ್ಸ್ ಟೂರ್ನಿ. ಈ ಟೂರ್ನಿಯಲ್ಲಿ ಭಾಗವಹಿಸುವ ಆಟಗಾರರನ್ನು ವಿಂಡೀಸ್ ವಿರುದ್ಧದ ಸರಣಿ (Ind vs WI Squad)ಯಿಂದ ಹೊರಗಿಡಲಾಗಿದೆ. ಆದರೆ, ಶ್ರೇಯಸ್ ಅಯ್ಯರ್ ಅಲಭ್ಯತೆ ಋತುರಾಜ್ ಗಾಯಕ್ವಾಡ್ ಅವರಿಗೆ ವರವಾಗಿ ಪರಿಣಮಿಸಿದೆ. ಕಾರಣ, ಶ್ರೇಯಸ್ ಅನುಪಸ್ಥಿತಿಯಲ್ಲಿ ಮಧ್ಯಮ ಕ್ರಮಾಂಕಕ್ಕೆ ವೆಸ್ಟ್ ಇಂಡೀಸ್ ಸರಣಿಗೆ ಋತುರಾಜ್ ಆಯ್ಕೆಯಾಗಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಪಂದ್ಯಗಳು ಕ್ರಮವಾಗಿ ಕೇರಳ, ಗುವಾಹಟಿ ಮತ್ತು ನ್ಯೂ ಚಂಡೀಗಢದಲ್ಲಿ ಸೆಪ್ಟೆಂಬರ್ 27, 30 ಮತ್ತು ಅಕ್ಟೋಬರ್ 3 ರಂದು ನಡೆಯಲಿವೆ ಹಾಗೂ ನಂತರ T20I ಸರಣಿಯು ಅಕ್ಟೋಬರ್ 6, 9, 11, 14 ಮತ್ತು 17 ರಂದು ಲಕ್ನೋ, ರಾಂಚಿ, ಇಂದೋರ್, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ.
ಕೆ.ಎಲ್ ರಾಹುಲ್ ಗೆ Ind vs WI Squad ಉಪನಾಯಕನ ಜವಾಬ್ದಾರಿ, ರಿಷಭ್ ಪಂತ್‌ಗೆ ಇರಾನಿ ಟ್ರೋಫಿ ತಂಡದ ಸಮಾಧಾನ
ಏಕದಿನ ತಂಡದಲ್ಲಿ ನಿರಂತರವಾಗಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಕೆ.ಎಲ್.ರಾಹುಲ್ ಅವರಿಗೆ ಏಕದಿನ ತಂಡದ ಉಪನಾಯಕನ ಜವಾಬ್ದಾರಿ ನೀಡಲಾಗಿದೆ. ಶುಭ್ಮನ್ ಗಿಲ್ ನಾಯಕತ್ವದ ಏಕದಿನ ತಂಡದಲ್ಲಿ ಕೆ.ಎಲ್ ರಾಹುಲ್ ಉಪನಾಯಕನಾಗಿ ನೇಮಕಗೊಂಡಿರುವುದು ಬ್ಯಾಟಿಂಗ್ ಹಾಗೂ ಕೀಪಿಂಗ್ ಎರಡೂ ವಿಭಾಗಕ್ಕೆ ಬಲ ತಂದಿದೆ. ರಾಹುಲ್ ಅವರೊಂದಿಗೆ ಧ್ರುವ್ ಜುರೆಲ್ ಕೂಡ ವಿಕೆಟ್ ಕೀಪರ್ ಆಗಿ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ.
ಆದರೆ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗಳೆರಡರಲ್ಲೂ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಅವರ ಬ್ಯಾಟ್‌ನಿಂದ ರನ್ ಬರವಿದ್ದರೂ, ಅವರನ್ನು ಸಮಾಧಾನಕರವೆಂಬಂತೆ ಇರಾನಿ ಟ್ರೋಫಿ ಆಡಲಿರುವ ರೆಸ್ಟ್ ಆಫ್ ಇಂಡಿಯಾ ಸ್ಥಾನದ ನಾಯಕರನ್ನಾಗಿ ನೇಮಿಸಲಾಗಿದೆ.
🚨 News 🚨#TeamIndia ODI & T20I squads announced for West Indies tour of India 2026, along with updated squad for Japan T20I & Asian Games.
More Details ▶️https://t.co/Lxx3Bz8Q14 pic.twitter.com/Y9RGlQ09XK
— BCCI (@BCCI) September 16, 2026
Ind vs WI Squad: ಕನ್ನಡಿಗನಿಗೆ ಸ್ಥಾನ, ಹಾರ್ದಿಕ ಪಾಂಡ್ಯರಿಗೆ ಗೇಟ್ ಪಾಸ್?
ಇನ್ನುಳಿದಂತೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಏಕದಿನ ತಂಡದಲ್ಲಿ ಸ್ಥಾನ ಪಡೆದರೆ, ಅಫ್ಘಾನಿಸ್ತಾನ ತಂಡದೆದುರು ಎರಡನೇ ಟಿ20 ಪಂದ್ಯದಲ್ಲಿ ಮೂರು ಪ್ರಮುಖ ವಿಕೆಟ್ ಕಿತ್ತು ಮಿಂಚಿದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟಿ20 ತಂಡಗಳೆರಡರಲ್ಲೂ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಈ ಎರಡೂ ತಂಡಗಳಲ್ಲೂ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಇನ್ನು ತಮ್ಮ ಬೌಲಿಂಗ್ ಸಾಧನೆಯ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಿದ್ದ ಗುರ್ನೂರ್ ಬ್ರಾರ್, ಆಕಿಬ್ ನಬಿ ಏಕದಿನ ತಂಡದಲ್ಲಿ ಸ್ಥಾನ ಪಡೆದರೆ, ವಂಡರ್ ಕಿಡ್ ವೈಭವ್ ಸೂರ್ಯವಂಶಿ, ಶ್ರೇಯಸ್ ನಾಯಕತ್ವದ ಟಿ20 ತಂಡದಲ್ಲಿ, ಮುಂಬೈ ಇಂಡಿಯನ್ಸ್ ತಂಡದ ಮಧ್ಯಮ ಕ್ರಮಾಂಕದ ದಾಂಡಿಗ ನಮನ್ ಧೀರ್, ಶುಭ್ಮನ್ ಗಿಲ್ ನಾಯಕತ್ವದ ಏಕದಿನ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
5 AM Club: ಬೆಳಗ್ಗೆ 5 ಗಂಟೆಗೆ ಏಳುವವರು ಯಾಕೆ ಯಾವಾಗಲೂ ಗೆಲ್ಲುತ್ತಾರೆ? Success ಸೀಕ್ರೆಟ್ ಬಯಲು!
ವೆಸ್ಟ್ ಇಂಡೀಸ್ ಸರಣಿಗೆ ಭಾರತ ತಂಡದ ವಿವರ ಇಲ್ಲಿದೆ:
ಏಕದಿನ ತಂಡ:
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರುತುರಾಜ್ ಗಾಯಕ್ವಾಡ್, , ಕೆ.ಎಲ್. ರಾಹುಲ್, ಧ್ರುವ್ ಜುರೆಲ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಮೊಹಮ್ಮದ್ ಸಿರಾಜ್, ಯಶಸ್ವಿ ಜೈಸ್ವಾಲ್, ಮೊಹಮ್ಮದ್ ನಬಿ, ನಮನ್ ಧೀರ್
ಟಿ20 ತಂಡ:
ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ (ವಿ. ಕೀ.), ಸಂಜು ಸ್ಯಾಮ್ಸನ್ (ವಿ. ಕೀ.), ತಿಲಕ್ ವರ್ಮ (ಉಪನಾಯಕ), ಶಿವಂ ದುಬೆ, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ನಿತೀಶ್ ಕುಮಾರ್ ರೆಡ್ಡಿ, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್, ಮಯಾಂಕ್ ಯಾದವ್.

[…] […]